ಬೆಂಗಳೂರು: ಜೆಡಿಎಸ್ ವರಿಷ್ಠ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಇಂದಿನಿಂದ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ.
ಪ್ರಚಾರಕ್ಕಾಗಿ ಈಗಾಗಲೇ ವಿಶೇಷ ವಾಹನ ರೆಡಿ ಮಾಡಿಸಿದ್ದಾರೆ. ರೇವಣ್ಣ ಬೆಂಬಲಿಗರೊಬ್ಬರು ಪ್ರಚಾರಕ್ಕಾಗಿ ವಿಶೇಷ ವಾಹನ ರೆಡಿ ಮಾಡಿಕೊಟ್ಟಿದ್ದು, ಅದಕ್ಕೆ ಸೋಮವಾರ ಪೂಜೆ ಮಾಡಿದ್ದಾರೆ. ಈ ವೇಳೆ ತಾಯಿ ಭವಾನಿ ರೇವಣ್ಣ ಕೂಡ ಸಾಥ್ ನೀಡಿದ್ರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ಎಚ್‍ಡಿಡಿ ನಿವಾಸದ ಮುಂದೆ ಪ್ರತಿಭಟನೆ
ಪುತ್ರನ ಪ್ರಚಾರ ವಾಹನವನ್ನು ಖುದ್ದು ಪರಿಶೀಲಿಸಿದ್ರು. ಅಂದಹಾಗೆ, ಪ್ರಜ್ವಲ್ ರೇವಣ್ಣ ಪ್ರಚಾರ ವಾಹನದಲ್ಲಿ ದೇವೇಗೌಡ, ತಂದೆ ರೇವಣ್ಣ, ಚಿಕ್ಕಪ್ಪ ಹೆಚ್.ಡಿ ಕುಮಾರಸ್ವಾಮಿ ಅವರ ಫೋಟೋಗಳನ್ನು ಬಳಸಲಾಗಿದೆ.
ಮೊದಲ ಪಟ್ಟಿಯಲ್ಲಿ 35 ವರ್ಷದ ಒಳಗಿನ ವ್ಯಕ್ತಿಗೆ ಟಿಕೆಟ್ ನೀಡಿಲ್ಲ. ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡಲೇಬೇಕು. ಆರ್ ಆರ್ ನಗರದಲ್ಲಿ ಏಪ್ರಿಲ್ 13ರಂದು ನಡೆಯಲಿರುವ ಸಮಾವೇಶದಲ್ಲಿ ಪ್ರಜ್ವಲ್ ಹೆಸರನ್ನು ಘೋಷಿಸುವಂತೆ ಮಾಡಲು ಶರವಣ ಅವರಿಗೆ ಪ್ರಜ್ವಲ್ ಬೆಂಬಲಿಗರು ಇತ್ತೀಚೆಗೆ ದೇವೇಗೌಡ ಅವರ ನಿವಾಸದ ಎದುರು ನಡೆಸಿದ ಪ್ರತಿಭಟನೆಯ ವೇಳೆ ಆಗ್ರಹಿಸಿದ್ದರು. ಕುಟುಂಬದೊಳಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಈ ವೇಳೆ ಶರವಣ ಪ್ರತಿಭಟನಾಕಾರರಿಗೆ ತಿಳಿಸಿದ್ದರು. ಇದನ್ನೂ ಓದಿ: ಬೇಲೂರು ವಿಧಾನಸಭಾ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಕಣಕ್ಕೆ?