ಬೆಂಗಳೂರು: ಅತ್ಯಾಚಾರ ಆರೋಪಿ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಎಸ್‍ಐಟಿ ಕಸ್ಟಡಿ ಇಂದು ಅಂತ್ಯವಾಗಲಿದೆ. ಇಂದು ಪ್ರಜ್ವಲ್ ರೇವಣ್ಣನನ್ನ ಎಸ್‍ಐಟಿ ಅಧಿಕಾರಿಗಳು ಕೋರ್ಟ್‍ಗೆ ಹಾಜರುಪಡಿಸಲಿದ್ದಾರೆ.
ಪ್ರಜ್ವಲ್ ವಿರುದ್ಧದ ಇನ್ನೂ ಎರಡು ಪ್ರಕರಣಗಳ ತನಿಖೆ ಬಾಕಿ ಹಿನ್ನೆಲೆ ಪುನಃ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ಪ್ರತಿ ಪ್ರಕರಣದ ತನಿಖೆಯನ್ನ ಪ್ರತ್ಯೇಕವಾಗಿ ನಡೆಸುತ್ತಿರುವ ಎಸ್‍ಐಟಿ ಟೀಂ, ಸದ್ಯ ಈಗ ಹೊಳೆನರಸೀಪುರ ಟೌನ್ ಠಾಣೆ ಪ್ರಕರಣ ಸಂಬಂಧ ತನಿಖೆ ನಡೆಸ್ತಿದೆ. ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಸಂಬಂಧ ಕಳೆದ ಹತ್ತು ದಿನಗಳಿಂದ ಪ್ರಜ್ವಲ್ ವಿಚಾರಣೆ ನಡೀತಿದೆ.
Advertisement
Advertisement
ಇದೇ ವೇಳೆ ವೈದ್ಯಕೀಯ ಪರೀಕ್ಷೆ, ಧ್ವನಿ ಪರೀಕ್ಷೆ ಕೂಡ ನಡೆಸಲಾಗಿದೆ. ಬಳಿಕ ಕೃತ್ಯ ಎಸಗಿದ ಸ್ಥಳ ಮಹಜರು ಕೂಡ ನಡೆದಿದೆ. ಒಂದು ಪ್ರಕರಣದ ತನಿಖೆಯನ್ನ ಎಸ್‍ಐಟಿ ಬಹುತೇಕ ಪೂರ್ಣಗೊಳಿಸಿದೆ. ಇದೀಗ ಇನ್ನುಳಿದ ಎರಡು ಕೇಸ್ ಸಂಬಂಧ ತನಿಖೆ ಶುರು ಮಾಡಿದೆ. ಸಿಐಡಿಯಲ್ಲಿ (CID) ಎರಡು ಪ್ರತ್ಯೇಕ ಕೇಸ್‍ಗಳು ದಾಖಲಾಗಿದ್ದು, ಅದರಲ್ಲಿ ಎಸ್‍ಐಟಿ ಒಂದು ಪ್ರಕರಣದ ತನಿಖೆ ಆರಂಭಿಸಲಿದೆ. ಹಾಗಾಗಿ ಕೋರ್ಟ್‍ಗೆ ಹಾಜರುಪಡಿಸಿ ಮತ್ತೊಮ್ಮೆ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ಇದನ್ನೂ ಓದಿ: ಬುಮ್ರಾ ಬೆಂಕಿ ಬೌಲಿಂಗ್, ಭಾರತಕ್ಕೆ ರೋಚಕ 6 ರನ್ ಜಯ – ಗುಂಪು ಹಂತದಲ್ಲೇ ಪಾಕ್ ಹೊರಕ್ಕೆ?