ಬೆಂಗಳೂರು: ಪ್ರೀತಂಗೌಡಗೆ (Preetham Gowda) ಸ್ವಲ್ಪ ಅಸಮಾಧಾನ ಇತ್ತು. ಅದನ್ನ ಸರಿ ಮಾಡೋ ಕೆಲಸ ಆಗಿದ್ದು, ಎಲ್ಲರೂ ಒಂದಾಣಿಕೆಯಿಂದ ಕೆಲಸ ಮಾಡೋದಾಗಿ ಹಾಸನ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ (Prajwal Revanna) ತಿಳಿಸಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ (Yediyurappa) ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರನ್ನು (Vijayendra) ಭೇಟಿಯಾಗಿ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ಅವರು, ಯಡಿಯೂರಪ್ಪ, ವಿಜಯೇಂದ್ರ ಅವರನ್ನ ಭೇಟಿಯಾಗಿ ಸಹಕಾರ ಕೋರಿದ್ದೇವೆ. ನಮ್ಮ ಕ್ಷೇತ್ರಕ್ಕೆ ಪ್ರಚಾರ ಮಾಡಬೇಕು, ಸಹಕಾರ ಕೊಡಬೇಕು, ಆಶೀರ್ವಾದ ಮಾಡಬೇಕು ಅಂತ ಮನವಿ ಮಾಡಿದ್ದೇವೆ. ಯಡಿಯೂರಪ್ಪ ಅವರು ಸಂಪೂರ್ಣ ಭರವಸೆ ಕೊಟ್ಟಿದ್ದಾರೆ. ನನ್ನ ಚುನಾವಣೆ ಅಂತ ಮಾಡಿಕೊಡ್ತೀನಿ ಎಂದು ಭರವಸೆ ನೀಡಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಹೋಗ್ತೀವಿ ಎಂದರು. ಇದನ್ನೂ ಓದಿ: ನನ್ನ ಸ್ಪರ್ಧೆ ಬಗ್ಗೆ ಹೈಕಮಾಂಡ್‌ಗೆ ಸ್ಪಷ್ಟವಾಗಿ ತಿಳಿಸಿದ್ದೇನೆ: ಹೆಚ್.ಸಿ.ಮಹದೇವಪ್ಪ
Advertisement
Advertisement
ನಮ್ಮ ಗುರಿ ಮತ್ತೆ ಮೋದಿ ಅವರನ್ನು ಪ್ರಧಾನಿಯಾಗಿ ಮಾಡಬೇಕು. ಇಡೀ ದೇಶದಲ್ಲಿ 400 ಸೀಟು ಬರಬೇಕು. ಅದರಲ್ಲಿ ನಾನು ಒಬ್ಬನಾಗಿರಬೇಕು. ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ಎರಡೆರೆಡು ಬಾರಿ ಬಂದು ಪ್ರಚಾರ ಮಾಡ್ತೀನಿ ಅಂತ ಹೇಳಿದ್ದಾರೆ. ನನ್ನ ಮಗ ಅಂದುಕೊಂಡ ಕೆಲಸ ಮಾಡೋದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
Advertisement
ಪ್ರಜ್ವಲ್‌ಗೆ ಹಾಸನದಲ್ಲಿ ಬಿಜೆಪಿಯಿಂದ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ವಿರೋಧ ಇಲ್ಲ. ಪಕ್ಷದ ಆದೇಶಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ. ಯಡಿಯೂರಪ್ಪ ಅವರೇ ಖುದ್ದು ಪಟ್ಟಿ ಬಿಡುಗಡೆ ಆದ ಮೇಲೆ ನಾನೇ ಬಂದು ಜಂಟಿ ಸಭೆ ಮಾಡೋದಾಗಿ ಹೇಳಿದ್ದಾರೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ಸಿಗೆ ಬಂದಿರುವ 1,600 ಕೋಟಿ ರೂ. ಏನು? – ಕಾಂಗ್ರೆಸ್‌ಗೆ ಅಮಿತ್ ಶಾ ಪ್ರಶ್ನೆ
Advertisement
ಪ್ರೀತಂಗೌಡ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಅಸಮಾಧಾನ ಇಲ್ಲ. ಪ್ರೀತಂಗೌಡ ಅಸಮಾಧಾನ ಇದ್ದರೂ ಅದನ್ನ ಸರಿ ಮಾಡಿದ್ದೇವೆ. ಯಾವುದೇ ಗೊಂದಲ ಇಲ್ಲ. ಸಣ್ಣಪುಟ್ಟ ಗೊಂದಲ ಇದ್ದರೆ ಸರಿ ಮಾಡಿಕೊಂಡು ಹೋಗ್ತೀವಿ. ಎಲ್ಲಾ ಸ್ಥಳೀಯ ಬಿಜೆಪಿ ನಾಯಕರನ್ನ ಭೇಟಿಯಾಗಿ ಮನವಿ ಮಾಡ್ತಿದ್ದೇವೆ. ಎಲ್ಲರೂ ಕೂಡಾ ನಮ್ಮ ಪರವೇ ಕೆಲಸ ಮಾಡೋದಾಗಿ ಹೇಳಿದ್ದಾರೆ. ಪ್ರೀತಂಗೌಡ ಎಲ್ಲೂ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿಲ್ಲ. ಸ್ವಲ್ಪ ಅಸಮಾಧಾನದಲ್ಲಿ ಇದ್ದರೂ ಅದನ್ನು ಸರಿ ಮಾಡೋ ಕೆಲಸ ಆಗಿದೆ. ಎಲ್ಲರೂ ಒಂದಾಣಿಕೆಯಿಂದ ಈಗ ಕೆಲಸ ಮಾಡ್ತಿದ್ದಾರೆ. ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ಅವರ ಜೊತೆ ಮಾತಾಡ್ತಿದ್ದಾರೆ ಎಂದರು.