ಪ್ರಜ್ವಲ್‌ ರೇವಣ್ಣ ರೇಪ್‌ ಕೇಸ್‌ – ತಾಂತ್ರಿಕ ಸಾಕ್ಷ್ಯ ಕೇಳಿದ ಕೋರ್ಟ್‌, ಆ.1ಕ್ಕೆ ತೀರ್ಪು

Public TV
1 Min Read
Prajwal Revanna 4

ಬೆಂಗಳೂರು:ಕೆ.ಆರ್.ನಗರದಲ್ಲಿ (KR Nagara) ಕೆಲಸದಾಕೆಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ (Rape Case) ಸಂಬಂಧಿಸಿದಂತೆ ಜನಪ್ರತಿನಿಧಿಗಳ ಕೋರ್ಟ್‌ ಆಗಸ್ಟ್‌ 1ಕ್ಕೆ ತೀರ್ಪು ಪ್ರಕಟಿಸಲಿದೆ.

ಇಂದು ನ್ಯಾ. ಗಜಾನನ ಭಟ್‌ ಅವರು ಸರ್ಕಾರಿ ವಕೀಲ ಎನ್ ಜಗದೀಶ್ ಹಾಗೂ ಅಶೋಕ್ ನಾಯಕ್ ಹಾಗೂ ಪ್ರಜ್ವಲ್ ರೇವಣ್ಣ (Prajwal Revanna) ಪರ ವಕೀಲ ಅರುಣ್ ಜಿ ಬಳಿ ಮೊಬೈಲ್ ಸಾಕ್ಷ್ಯ, ತಾಂತ್ರಿಕ ಸಾಕ್ಷ್ಯಗಳ ಬಗ್ಗೆ ಸ್ಪಷ್ಟನೆಗಳನ್ನು ಕೇಳಿದರು. ಇದರೊಂದಿಗೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಗ್ಗೆ ನ್ಯಾಯಾಧೀಶರು ಕೆಲ ಮಾಹಿತಿ ಕೇಳಿದರು. ಇದನ್ನೂ ಓದಿ: ಹಣ ಹೊರಗಡೆ ಸಿಕ್ಕಿದ್ರೆ ಜಡ್ಜ್‌ ದುರ್ವತನೆ ಹೇಗೆ ಆಗುತ್ತೆ: ಸಿಬಲ್‌ ವಾದ

ಸರ್ಕಾರಿ ಪರ ವಕೀಲರು ಹೊಳೆನರಸೀಪುರದ ಕನ್ನಿಕಡದ ಮನೆಯ ಗೂಗಲ್ ಮ್ಯಾಪ್ ನೀಡಲಾಗಿದೆ, ಗ್ಯೂಗಲ್ ಮ್ಯಾಪ್‌ನಲ್ಲಿ ಮನೆ, ಕೆಲಸದವರ ಶೆಡ್ ಎಲ್ಲವನ್ನೂ ನೀಡಲಾಗಿದೆ. ಗೂಗಲ್ ಮ್ಯಾಪ್ ಆಧರಿಸಿ ಮಹಜರು ಪ್ರಕ್ರಿಯೆ ನಡೆದಿದೆ ಎಂದು ತಿಳಿಸಿದರು. ಅಂತಿಮವಾಗಿ ಕೋರ್ಟ್‌ ಇಂದು ಮಧ್ಯಾಹ್ನದ ಒಳಗೆ ಸ್ಪಷ್ಟನೆ ನೀಡುವಂತೆ ಸರ್ಕಾರಿ ಪರ ವಕೀಲರಿಗೆ ಸೂಚಿಸಿತು.

ಮನೆ ಕೆಲಸದಾಕೆ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ಸೆರೆ ಮಾಡಿದ ಆರೋಪ ಪ್ರಜ್ವಲ್‌ ರೇವಣ್ಣ ಮೇಲಿದೆ. ಇಂದಿನ ಕೋರ್ಟ್‌ ಕಲಾಪಕ್ಕೆ ಪ್ರಜ್ವಲ್‌ ರೇವಣ್ಣ ಹಾಜರಾಗಿದ್ದರು.

Share This Article