ಹಾಸನ: ಬಿಜೆಪಿ, ಜೆಡಿಎಸ್ ಹಾವು ಮುಂಗುಸಿಯಂತಿರೋ ಹಾಸನ ಜಿಲ್ಲೆಯಲ್ಲಿ ಈಗ ಎರಡು ಪಕ್ಷಗಳ ನಾಯಕರ ನಡುವೆ ಫೋಟೋ ಪಾಲಿಟಿಕ್ಸ್ ಜಟಾಪಟಿ ತಾರಕಕ್ಕೇರಿದೆ.ಫೋಟೋ ವಿಚಾರವಾಗಿ ಎರಡು ಪಕ್ಷಗಳ ನಾಯಕರು ಬಹಿರಂಗವಾಗಿ ಏಟು ಎದಿರೇಟು ಎಂಬಂತೆ ಶಾಸಕ ಪ್ರೀತಂ ಗೌಡ ಮತ್ತು ಸಂಸದ ಪ್ರಜ್ವಲ್ ರೇವಣ್ಣ ನಡುವೆ ಪರಸ್ಪರ ಮಾತನಾಡುತ್ತಿದ್ದಾರೆ.
Advertisement
ಹಾಸನ ಜಿಲ್ಲೆಯಲ್ಲಿ ಹಾಸನ ನಗರ ಬಿಟ್ಟು ಉಳಿದ 6 ಸ್ಥಾನದಲ್ಲಿ ಜೆಡಿಎಸ್ ಶಾಸಕರದ್ದೇ ಪಾರುಪತ್ಯ. ಹಾಸನ ನಗರದಲ್ಲಿ ಮಾತ್ರ ಬಿಜೆಪಿ ಶಾಸಕ ಪ್ರೀತಮ್ ಗೌಡ ಗೆದ್ದಿರೋದು ಜೆಡಿಎಸ್ ನಾಯಕರಿಗೆ ಪೆಟ್ಟು ನೀಡಿದಂತಾಗಿದೆ. ಹೀಗಾಗಿ ಒಂದಿಲ್ಲ ಒಂದು ವಿಚಾರಕ್ಕೆ ಜೆಡಿಎಸ್ ನಾಯಕರು ಬಿಜೆಪಿ ಶಾಸಕ ಪ್ರೀತಮ್ ನಡುವೆ ಯಾವಾಗಲೂ ಜಟಾಪಟಿ ನಡಿತಲೇ ಇರುತ್ತದೆ. ಆದರೆ ಇವರ ರಾಜಕೀಯ ವೈರತ್ವ ಈಗ ಸಾರ್ವಜನಿಕ ಕಾಮಗಾರಿಗಳಿಗೆ ಫೋಟೋ ಹಾಕೋ ಸಂಗತಿಗೆ ತಾರಕ್ಕಕ್ಕೇರಿದೆ.
Advertisement
Advertisement
ಹಾಸನ ನಗರದಲ್ಲಿ ನಿರ್ಮಾಣ ಆಗಿರುವ ಟ್ಯಾಕ್ಸಿ ಸ್ಟ್ಯಾಂಡ್, ಇತ್ತೀಚೆಗೆ ಉದ್ಘಾಟನೆ ಆದ ಫುಡ್ ಕೋರ್ಟ್‍ಗಳಲ್ಲಿ ಹಾಸನ ಶಾಸಕ ಪ್ರೀತಮ್‍ಗೌಡ ಅವರ ದೊಡ್ಡ ಫೋಟೋಗಳನ್ನ ಅಳವಡಿಸಲಾಗಿದೆ. ಈ ಬಗ್ಗೆ ವ್ಯಂಗ್ಯವಾಡಿರುವ ಸಂಸದ ಪ್ರಜ್ವಲ್ ರೇವಣ್ಣ, ಫೋಟೋ ಹಾಕಿಕೊಳ್ಳೋದಾದರೆ ರೇವಣ್ಣನವರು ಎಷ್ಟು ಬಿಲ್ಡಿಂಗ್ ಕಟ್ಟಿದ್ದಾರೆ, ಅದಕ್ಕೆಲ್ಲಾ ಫೋಟೋ ಹಾಕಿದ್ದಾರ? ಹೀಗಾಗಿ ಕೆಲಸ ಮಾಡೋದು ಬಿಟ್ಟು ಫೋಟೋ ಹಾಕೊಂಡು ಶೋಕಿ ಕೊಡೋದನ್ನ ಬಿಡಲಿ ಅಂತ ಕಿಡಿಕಾರಿದ್ದಾರೆ.
Advertisement
ಜೆಡಿಎಸ್ ನಾಯಕರು ತಮ್ಮ ಫೋಟೋ ವಿಚಾರಕ್ಕೆ ಆಡಿದ ಮಾತಿಗೆ ಪ್ರೀತಮ್ ಕೂಡ ಸುಮ್ಮನಾಗಿಲ್ಲ. ಕೆಲವರು ಪ್ರೀತಮ್ ಗೌಡರ ಫೋಟೋ ನೋಡಿ ಬೇಜಾರಾಗೋರು ಹೀಗೆ ಹೇಳ್ತಾರೆ. ಆದರೆ 80 ರಷ್ಟು ಜನ ಪ್ರೀತಮ್ ಗೌಡರ ಫೋಟೋ ದಿನಾ ನೋಡಿದ್ರೆ ಹುಮ್ಮಸ್ಸು ಅಂತಾರೆ. ಹೀಗಾಗಿ 20 ಜನಕ್ಕಾಗಿ 80 ಮಂದಿಗೆ ಬೇಜಾರು ಮಾಡಲು ಆಗಲ್ಲ. ಹಾಗೆ ಹಳೇ ಶಾಸಕರು ಸಂಸದರು ಯಾವರೀತಿ ತಮ್ಮ ಕಾಮಗಾರಿಯಲ್ಲಿ ತಮ್ಮ ಫೋಟೋ ಹಾಕಿಕೊಂಡಿದ್ದಾರೋ, ಅದೇ ರೀತಿ ಅಧಿಕಾರಿಗಳು ನನ್ನ ಫೋಟೋ ಹಾಕಿದ್ದಾರೆ. ಶಾಸಕರ ನಿಧಿಯಲ್ಲಿ ಕೆಲಸ ಮಾಡಿದ ಕೆಲವೆಡೆ ಸಂಸದರ ಫೋಟೋ ಹಾಕಿಕೊಂಡಿದ್ದಾರೆ. ಅವ್ರ್ಯಾಕೆ ಹಾಗೆ ಮಾಡಿದ್ರು ಅಂತ ಪ್ರಜ್ವಲ್ ರೇವಣ್ಣಗೆ ಶಾಸಕ ಪ್ರೀತಂಗೌಡ ಟಾಂಗ್ ನೀಡಿದ್ದಾರೆ.
ಆದರೆ ಇಲ್ಲಿ ವಾಸ್ತವ ನೋಡಿದ್ರೆ ಎರಡೂ ಪಕ್ಷದ ನಾಯಕರುಗಳು ಸಾರ್ವಜನಿಕ ಕಾಮಗಾರಿಗಳಲ್ಲಿ, ಆ ಕಾಮಗಾರಿ ಮುಗಿದ ಬಳಿಕ ಫೋಟೋ ಫಲಕಗಳನ್ನ ಅಳವಡಿಸಿದ್ದಾರೆ. ವಾಸ್ತವ ಹೀಗಿರುವಾಗ ಈಗ ಫೋಟೋ ವಿಚಾರವಾಗಿ ಪರಸ್ಪರ ಟಾಂಗ್ ಕೊಡ್ತಿರೋದು ಮಾತ್ರ ವಿಪರ್ಯಾಸವಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್ ಇನ್ನಿಲ್ಲ