ಬೆಂಗಳೂರು: ಡಿಕೆ ಶಿವಕುಮಾರ್ (D.K Shivakumar) ಅವರು ನನ್ನ ಸುಳ್ಳುಗಾರ ಅಂತ ಆರೋಪ ಮಾಡಿದ್ರು. ಹೀಗಾಗಿ ಅವರಿಗೆ ನಾನು ಮುಕ್ತ ಆಹ್ವಾನ ಕೊಡುತ್ತಿದ್ದೇನೆ. ವಿಧಾನಸೌಧದ ಮುಂದೆ ಆಡಿಯೋ ರಿಲೀಸ್ ಮಾಡ್ತೀನಿ. ಯಾರ್ಯಾರು ಬಂದಿದ್ರು ಅಂತ ಮಾಹಿತಿ ಬಹಿರಂಗ ಮಾಡ್ತೀನಿ. ಅಲ್ಲೇ ಬಹಿರಂಗ ಚರ್ಚೆ ಮಾಡೋಣ ಎಂದು ಸವಾಲೆಸೆದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ರಾಜ್ಯಾದ್ಯಂತ ಅಶ್ಲೀಲ ವೀಡಿಯೋ ಸಂಬಂಧಿಸಿದ ಚರ್ಚೆ ಆಗುತ್ತಿದೆ. ಸರ್ಕಾರದ ಪ್ರತಿನಿಧಿಗಳು ಎಲ್ಲಾ ಕಡೆ ಪತ್ರಿಕಾಗೋಷ್ಠಿ ಮಾಡುತ್ತಿದ್ದಾರೆ. ಸರ್ಕಾರದ ನಾಯಕರ ಹೆಸರು ಬಂದ ಕೂಡಲೇ ಈ ರೀತಿಯಲ್ಲಿ ಮಾಡುತ್ತಿದ್ದಾರೆ. ನನ್ನ ಮೇಲೆ ದೂರು ಕೊಡುವುದನ್ನು ನಾನು ಸ್ವಾಗತ ಮಾಡುತ್ತೇನೆ ಎಂದು ಹೇಳಿದರು.
Advertisement
Advertisement
ಹನಿಟ್ರ್ಯಾಪ್ ಯತ್ನ: ಕಾರ್ತಿಕ್ ಹೆಂಡತಿಯ ಮೇಲೆ ಹಲ್ಲೆ ಆದಾಗ ನಾನು ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದೆ. ಅದಕ್ಕೆ ನ್ಯಾಯ ಸಿಗಲಿಲ್ಲ. ಎಸ್ ಐಟಿ (SIT) ರಚನೆ ಆದ ಮೇಲೆ ಪೆನ್ ಡ್ರೈವ್‍ಗಳ ಸುರಿಮಳೆ ಆಯ್ತು. ಇದೆಲ್ಲಾ ಆದ ಮೇಲೆ ನನ್ನ ಮೇಲೆ ಹನಿಟ್ರ್ಯಾಪ್ ಮಾಡೋ ಯತ್ನ ಮಾಡಿದರು. ಕಾರ್ತಿಕ್ ಹೆಂಡತಿ ಮೇಲೆ ಹಲ್ಲೆ ಆದಾಗ ಮೂರು ತಿಂಗಳ ಹಿಂದೆ ಪತ್ರ ಬರೆದಿದ್ದೆ. ಆದರೆ ನ್ಯಾಯ ಸಿಗಲಿಲ್ಲ ಎಂದು ತಿಳಿಸಿದರು.
Advertisement
ನನ್ನ ಎರಡು ಬಾರಿ ವಿಚಾರಣೆ: ಯಾವುದೇ ವ್ಯಕ್ತಿ ವಿರುದ್ಧ ನಾನು ಹೋರಾಟ ಮಾಡುತ್ತಿಲ್ಲ. ಪಕ್ಷದ ಪ್ರತಿನಿಧಿ ಆಗಿ ಕೆಲಸ ಮಾಡುತ್ತಿಲ್ಲ. ಸಂದರ್ಭ ಬಂದಾಗ ಪಕ್ಷದ ಹೆಸರು ಕೂಡ ಹೇಳಬೇಕಾಗುತ್ತದೆ ಹೇಳುತ್ತೇನೆ. ಚುನಾವಣೆ ದಿನ ಎಫ್‍ಐಆರ್ ಆಗಿದೆ. ಎಫ್‍ಐಆರ್ ಆದ ನಂತರ ಎಸ್‍ಐಟಿ ಮಾಡಿದರು. ಎಸ್ ಐಟಿ ಆದ ಬಳಿಕ ಲೈಂಗಿಕ ದೌರ್ಜನ್ಯ ಪ್ರಕರಣ ಆಯ್ತು. ಪೆನ್‍ಡ್ರೈವ್ ಹಂಚಿದವರ ವಿರುದ್ಧ ದಾಖಲಾಗಿದ್ದ ಎಫ್‍ಐಆರ್ ಎಸ್‍ಐಟಿ ಗೆ ಬಂದಿಲ್ಲ. ಹೀಗಿರುವಾಗ ನನ್ನ ಕರೆಯುವ ಪ್ರಮೇಯವೇ ಇರಲಿಲ್ಲ. ನನ್ನ ಎರಡು ಬಾರಿ ವಿಚಾರಣೆ ಮಾಡಿದರು ಎಂದು ದೇವರಾಜೇಗೌಡ (Devaraje Gowda) ಹೇಳಿದರು. ಇದನ್ನೂ ಓದಿ: ಎಸ್‌ಐಟಿ ಮೊದಲು ದೇವರಾಜೇಗೌಡನನ್ನು ಎಳೆದುಕೊಂಡು ಹೋಗ್ಬೇಕು: ಶಿವರಾಮೇಗೌಡ
Advertisement
ಈ ಹಿಂದೆ ಹೇಳಿಕೆ ಕೊಟ್ಟಿದ್ದ ಕಾರ್ತಿಕ್ ಈಗ ಉಲ್ಟಾ ಹೊಡೆಯುತ್ತಿದ್ದಾನೆ. ನನಗೆ ಪೆನ್ ಡ್ರೈವ್ ಕೊಟ್ಟೆ ಇಲ್ಲ ಅಂದಿದ್ದಾನೆ. ಕಾರ್ತಿಕ್ ಎಸ್ ಐಟಿ ಮುಂದೆ ಬಂದರೂ ವಿಚಾರಣೆ ಮಾಡುವುದಿಲ್ಲ. ಕಾರ್ತಿಕ್ ಹೇಳಿಕೆ ಪಡೆದು ಕಳುಹಿಸಿದ್ದಾರೆ. ಆರೋಪಿಯನ್ನು ಹೇಗೆ ಬಿಟ್ಟು ಕಳುಹಿಸಿದ್ದಾರೆ ಎಂದು ಪ್ರಶ್ನಿಸಿದರು.
ರೇವಣ್ಣ ನಿರೀಕ್ಷಣಾ ಜಾಮೀನು ವಜಾ ಆದ ಕೆಲವೇ ಕ್ಷಣದಲ್ಲಿ ಬಂಧನ ಮಾಡ್ತೀರಿ. ಯಾಕೆ ಕಾರ್ತಿಕ್ ನ ಬಂಧನ ಮಾಡದೇ ಕಳುಹಿಸಿದ್ರಿ. ಇವತ್ತು ಕಾರ್ತಿಕ್ ನಿರೀಕ್ಷಣಾ ಜಾಮೀನು ವಜಾ ಆಗಿದೆ. ಅವನಿಗೆ ಖರ್ಚಿಗೆ ಕಾಸು ಇಲ್ಲ ಬಂದಿದ್ದ ಎಂದು ನನ್ನ ಮೇಲೆ ಶಿವರಾಮೇಗೌಡ ಆರೋಪ ಮಾಡಿದ್ರು. ನಾನು ಎರಡು ಮೊಬೈಲ್ ಕೊಡ್ತೀನಿ. ಅವರೇ ಫೋನ್ ಮಾಡಿದ್ದಾ…? ನಾನಾ ಮಾಡಿದ್ದಾ ಚೆಕ್ ಮಾಡಿಕೊಳ್ಳಬಹುದು. ಕೇಂದ್ರ ಸರ್ಕಾರವನ್ನು ಹೇಗೆ ಕಟ್ಟಿ ಹಾಕಬೇಕು ಅಂತ ಪ್ಲಾನ್ ಮಾಡಿದ್ರು ಎಂದು ಆರೋಪಿಸಿದರು.
ನಾಳೆ ಎಸ್ ಐಟಿ ವಿರುದ್ಧ ಕ್ರಿಮಿನಲ್ ಕೇಸ್ ಹಾಕ್ತಾ ಇದ್ದೀನಿ. ಹೈಕೋರ್ಟ್ ಅಲ್ಲಿ ಅರ್ಜಿ ಹಾಕ್ತಾ ಇದ್ದೀನಿ. ನಾನು ಕೊಟ್ಟ ಹೇಳಿಕೆ ಡಿಲೀಟ್ ಮಾಡಿ ಅಂತ ಒತ್ತಾಯ ಮಾಡಿದ್ದಾರೆ. ಹೀಗಾಗಿ ಕೋರ್ಟ್ ಮೊರೆ ಹೋಗುವುದಾಗಿ ದೇವರಾಜೇಗೌಡ ತಿಳಿಸಿದರು.
ನಾಲ್ಕು ಜನ ಸಚಿವರು ರೂವಾರಿಗಳು: ಈಗಾಗಲೇ ಎರಡು ಪ್ರಕರಣ ದಾಖಲಾಗಿದೆ. ಸಕಲೇಶಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಾಲ್ಕು ಜನ ಸಚಿವರು ಈ ಪಾತ್ರ ರೂವಾರಿಗಳು. ಕಾರ್ತಿಕ್‍ನ ಎಲ್ಲಿ ಮುಚ್ಚಿಟ್ಟಿದ್ದಾರೆ ಗೊತ್ತು. ಕಾರ್ತಿಕ್ ಗೂ ನನಗೂ ಸಂಬಂಧ ಇಲ್ಲ ಎಂದು ಶ್ರೇಯಸ್ ಪಟೇಲ್ ಹೇಳಿದ್ದಾರೆ ಎಂದು ಹೇಳಿ ಕೆಲವು ಫೋಟೋಗಳನ್ನು ಬಿಡುಗಡೆ ಮಾಡಿದರು. ಈ ತಂಡದಲ್ಲಿ ಪುಟ್ಟಿ, ಕಾರ್ತಿಕ್, ಶ್ರೇಯಸ್ ಇವರೇ ಮೂರು ಜನ ಪ್ರಮುಖರು ಎಂದು ಆರೋಪ ಮಾಡಿದರು.