ಮೈಸೂರು: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಇದೀಗ ಡಿಕೆ ಬ್ರದರ್ಸ್ ವಿರುದ್ಧ ಬಾಂಬ್ ಸಿಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆನ್‍ಡ್ರೈವ್ ಪ್ರಕರಣದಲ್ಲಿ ಡಿಕೆ ಬ್ರದರ್ಸ್ ಕೈವಾಡ ಇದೆ. ರೇವಣ್ಣ ಮನೆಯಲ್ಲಿ ಕೆಲಸಕ್ಕೆ ಇದ್ದ ಕಾರ್ತಿಕನೇ ಇದರ ಮೂಲ. ಹಾಸನದ ಕಾಂಗ್ರೆಸ್ ಅಭ್ಯರ್ಥಿ ಹೊಳೆನರಸೀಪುರದಲ್ಲಿ ಒಬ್ಬ ವ್ಯಕ್ತಿಯನ್ನು ಹಿಡಿದುಕೊಂಡು. ಡಿ.ಕೆ.ಸುರೇಶ್, ಡಿಕೆ ಶಿವಕುಮಾರ್ ಬಳಿ ಹೋಗಿದ್ದಾನೆ. ಡಿಕೆಶಿ ಮನೆಯಲ್ಲಿ ಪೆನ್‍ಡ್ರೈವ್‍ನ ಟ್ರಾನ್ಸ್ ಫರ್ ಮಾಡಿಕೊಂಡಿದ್ದಾನೆ. ಸಮಯ ಬಂದಾಗ ಉಪಯೋಗ ಮಾಡಿಕೊಳ್ಳೋಣ ಅಂತ ಕಳಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ದೇವರಾಜೇಗೌಡ, ಶಿವರಾಮೇಗೌಡ, ಡಿಕೆ ಶಿವಕುಮಾರ್ ಪೆನ್ ಡ್ರೈವ್ ವಿತರಣೆ ಹಿಂದೆ ಇದ್ದಾರೆ. ಅರ್ಧ ನಿಮಿಷದಲ್ಲೆ ಎಲ್ಲವೂ ತೀರ್ಮಾನ ಆಗಿದೆ. ಪೊಲೀಸರ ರಕ್ಷಣೆಯಲ್ಲಿ ಕಾರ್ತಿಕ್ ಇದ್ದಾನೆ? ಯಾವ ಕಾರಣಕ್ಕೆ ಇನ್ನೂ ಕಾರ್ತಿಕ್ ಬಂಧಿಸಿಲ್ಲ? ಕೋರ್ಟ್ ಗೆ ಹಾಜರುಪಡಿಸಿಲ್ಲ ಹೇಳಿ? ನನ್ನ ಬಳಿ ಇರುವ ಪೆನ್ ಡ್ರೈವ್ ನಿಮ್ಮ ಸರ್ಕಾರದ ವರ್ಗಾವಣೆಯ ಭ್ರಷ್ಟಾಚಾರದ್ದು. ಅದನ್ನು ನಾನು ಈಗ ಬಿಟ್ಟರೆ ಅದು ನನ್ನದೇ ಸೃಷ್ಟಿ ಅಂತಾ ಬೇಕಾದರೆ ನೀವು ಹೇಳ್ತೀರಿ ಎಂದು ಹೆಚ್‍ಡಿಕೆ ಗುಡುಗಿದರು. ಇದನ್ನೂ ಓದಿ: ಪ್ರಜ್ವಲ್ ಪೆನ್‍ಡ್ರೈವ್ ವೀಡಿಯೋ, ಫೋಟೋಗಳ ಬಗ್ಗೆ ಹೆಚ್‍ಡಿಕೆ ಅನುಮಾನ
ಎಸ್‍ಐಗೆ ಇದುವರೆಗೂ ಕೊಟ್ಟ ಯಾವ ಪ್ರಕರಣ ತಾರ್ಕಿಕ ಅಂತ್ಯ ಕಂಡಿದೆ ಹೇಳಿ? ನನ್ನ ಅವಧಿಯಲ್ಲಿ ಯಾವ ಪ್ರಕರಣವನ್ನು ಎಸ್‍ಐಟಿಗೆ ಕೊಟ್ಟಿರಲಿಲ್ಲ. ಅವರೇನೂ ಟೆರರಿಸ್ಟಾ ಫೋನ್ ಟ್ಯಾಪ್ ಮಾಡೋಕೆ ಅಂತಾ ಕೆಲವರು ಕೇಳಿದ್ದಾರೆ. ಅವರ ಬಳಿ ಇರೋರೆಲ್ಲಾ ಟೆರರಿಸ್ಟ್ ಗಳೇ. ಬಹಳಷ್ಟು ಟೆರರಿಸ್ಟ್ ಗಳು ಇವರುಗಳ ಸುತ್ತಮುತ್ತವೇ ಇದ್ದಾರೆ. ಈಗ ಸಿಎಂ ಪೆನ್ ಡ್ರೈವ್ ಬಗ್ಗೆ ಯಾರ ಮಾತಾಡಬೇಡಿ ಅಂದಿದ್ದಾರೆ. ಏಕೆಂದರೆ ನಿಮ್ಮ ಬುಡಕ್ಕೆ ಬರ್ತಾ ಇದೆಯಲ್ಲ. ಅದಕ್ಕೆ ಈಗ ಮಾತಾಡಬೇಡಿ ಅಂತಿದ್ದಾರೆ ಎಂದು ಹೆಚ್‍ಡಿಕೆ ಕಿಡಿಕಾರಿದ್ದಾರೆ.
ನಾನು ಪ್ರಜ್ವಲ್ ಪರವಾಗಿ ಇಲ್ಲ. ಆತನ ಅಪರಾಧ ಸಾಬೀತಾದರೆ ಶಿಕ್ಷೆ ಕೊಡಿ. ಸಿಎಂ ಅವರೇ ಅಧಿಕಾರ ಶಾಶ್ವತ ಅಲ್ಲ. ನಿಮ್ಮ ಅಧಿಕಾರ ದುರುಪಯೋಗ ದ ವಿರುದ್ದ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.