ಬೆಂಗಳೂರು: ಪೆನ್‍ಡ್ರೈವ್ ಸೂತ್ರಧಾರಿ ಡಿ.ಕೆ ಶಿವಕುಮಾರ್ (DK Shivakumar) ಎಂದು ಬಲವಾಗಿ ನಂಬಿರುವ ಜೆಡಿಎಸ್ (JDS) ಬೀದಿಗೆ ಇಳಿದು ಹೋರಾಟ ಶುರು ಮಾಡಿದೆ.
ಬೆಂಗಳೂರು, ಹಾಸನ, ಮಂಡ್ಯ, ತುಮಕೂರು, ಕೋಲಾರ ಸೇರಿ ವಿವಿಧೆಡೆ ಭಾರೀ ಪ್ರತಿಭಟನೆ ನಡೆಸಿದೆ. ಡಿಕೆಶಿ ಪ್ರತಿಕೃತಿಗೆ ಚಪ್ಪಲಿ ಸೇವೆ ಮಾಡಿ ದಹಿಸಿದ್ದಾರೆ. ಶಿವರಾಮೇಗೌಡ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸ ಮಾಡಿದ್ದಾರೆ. ಅಲ್ಲದೇ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಕೂಡ ಪಡೆದಿದ್ದಾರೆ. ಇದನ್ನೂ ಓದಿ: ಪೊಲೀಸರನ್ನೇ ಮುಂದಿಟ್ಟುಕೊಂಡು 25,000 ಪೆನ್‌ಡ್ರೈವ್ ಹಂಚಿದ್ದಾರೆ: ಹೆಚ್‌ಡಿಕೆ ಬಾಂಬ್
ಈ ಮಧ್ಯೆ ಪೋಸ್ಟರ್ ವಾರ್ ಕೂಡ ಶುರುವಾಗಿದೆ. ನಗರದ ಹಲವೆಡೆ ರಾತ್ರೋರಾತ್ರಿ ಅಪರಿಚಿತರು ಸಿಎಂ- ಡಿಸಿಎಂ ವಿರುದ್ಧ ಪೋಸ್ಟರ್ ಗಳನ್ನು ಅಂಟಿಸಿದ್ದಾರೆ. ಕಾಂಗ್ರೆಸ್ ದೂರನ್ನು ಆಧರಿಸಿ ಪೊಲೀಸರು ತನಿಖೆ ನಡೆಸಿದ್ದಾರೆ. ಇತ್ತ ಮಹಿಳೆ ಕಿಡ್ನಾಪ್ ಕೇಸ್ ಸಂಬಂಧ ಸಾರಾ ಮಹೇಶ್ ಹೊಸ ಹೊಸ ಆರೋಪ ಮಾಡಿದ್ದಾರೆ. ಎಸ್‍ಐಟಿಗೆ ಸಂತ್ರಸ್ತ ಮಹಿಳೆ ಸಿಕ್ಕಿದ್ದು ತೋಟದಲ್ಲಿ ಅಲ್ಲ, ಅವರ ಸಂಬಂಧಿ ಮನೆಯಲ್ಲಿ ಎಂದಿದ್ದಾರೆ. ಇನ್ನು ಜಿಟಿ ದೇವೇಗೌಡರು, ಪ್ರಕರಣದ ನ್ಯಾಯಾಂಗ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.