ಹಾಸನ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರ ಮೊಬೈಲ್‍ನಿಂದ ವೀಡಿಯೋ ಲೀಕ್ ಆಗಿದ್ದೇ ರೋಚಕವಾಗಿದೆ.
ಹೌದು. ಪ್ರಜ್ವಲ್ ರೇವಣ್ಣ ಮೊಬೈಲ್‍ನಿಂದ ವೀಡಿಯೋ ಎಗರಿಸಿದ್ದೇ ಕಾರ್ತಿಕ್ (Karthik) ಎಂಬುದಾಗಿ ಇದೀಗ ಬಯಲಾಗಿದೆ. ಕಾರು ಚಾಲಕನಾಗಿದ್ದರೂ ಕಾರ್ತಿಕ್ ಮತ್ತು ಪ್ರಜ್ವಲ್ ಸ್ನೇಹಿತರ ರೀತಿ ಇದ್ದರು. ಪ್ರಜ್ವಲ್ ಮೊಬೈಲ್‍ನಲ್ಲಿ ವೀಡಿಯೋ ಇರೋದು ಕಾರ್ತಿಕ್ ಗಮನಕ್ಕೆ ಬಂದಿದೆ. ವೀಡಿಯೋ ಕಳುಹಿಸಿಕೊಳ್ಳಲು ಕಾರ್ತಿಕ್ ಹೊಸ ಮೊಬೈಲ್ ಖರೀದಿ ಮಾಡಿದ್ದಾರೆ. 1.45 ಲಕ್ಷ ಕೊಟ್ಟು ಆಪಲ್ ಮೊಬೈಲ್ ಖರೀದಿಸಿದ್ದಾರೆ.
ಇತ್ತ ಪ್ರಜ್ವಲ್ ಫೋನ್ ಪಾಸ್ ವರ್ಡ್ ತಿಳಿದುಕೊಂಡಿದ್ದ ಕಾರ್ತಿಕ್, ಕಾರಿನಲ್ಲಿ ಪ್ರಜ್ವಲ್ ರೇವಣ್ಣ ನಿದ್ರೆಗೆ ಜಾರಿದ್ದಾಗ ಏರ್ ಡ್ರಾಪ್ ಮೂಲಕ ಎಲ್ಲಾ ವೀಡಿಯೋಗಳನ್ನು ತನ್ನ ಹೊಸ ಮೊಬೈಲ್‍ಗೆ ಕಳುಹಿಸಿಕೊಂಡಿದ್ದಾರೆ. ಸದ್ಯ ಕಾರ್ತಿಕ್ ಮಲೇಷ್ಯಾದಲ್ಲಿರುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ದೇವೇಗೌಡರ ಕುಟುಂಬ ಸದಸ್ಯರು ಹಾಸನವಷ್ಟೇ ಅಲ್ಲ, ಕರ್ನಾಟಕದ ಹೆಸರು ಕೆಡಿಸಿದ್ದಾರೆ: ಮೊಯ್ಲಿ
ಇತ್ತ ಪ್ರಜ್ವಲ್ ರೇವಣ್ಣಗೆ ಎಸ್‍ಐಟಿ ಲುಕೌಟ್ ನೋಟಿಸ್ ಜಾರಿ ಮಾಡಿದೆ. ಇದಕ್ಕೂ ಮುನ್ನ ನೋಟಿಸ್‍ಗೆ ಪ್ರಜ್ವಲ್ ರೇವಣ್ಣ ಅವರು ಸಮಯಾವಕಾಶ ಕೇಳಿ ತಮ್ಮ ವಕೀಲರ ಮೂಲಕ ಎಸ್‍ಐಟಿ ಅಧಿಕಾರಿಗಳಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಒಂದು ವಾರ ಸಮಯ ಕೊಡಿ ಎಸ್‍ಐಟಿ ಮುಂದೆ ಹಾಜರಾಗುತ್ತೇನೆ. ಆದಷ್ಟು ಬೇಗ ಸತ್ಯ ಹೊರಗೆ ಬರುತ್ತೆ ಎಂದು ತಮ್ಮ ಫೇಸ್‍ಬುಕ್‍ನಲ್ಲಿಯೂ ಬರೆದುಕೊಂಡಿದ್ದಾರೆ.
ಈ ನಡುವೆ ಇಂದು ಎಸ್‍ಐಟಿ ಅಧಿಕಾರಿಗಳು ಪ್ರಜ್ವಲ್ ವಿರುದ್ಧ ಲುಕೌಟ್ ನೋಟಿಸ್ ಜಾರಿ ಮಾಡಲಾಗಿದೆ. ಜಗತ್ತಿನ ಎಲ್ಲಾ ವಿಮಾನ ನಿಲ್ದಾಣಗಳಿಗೂ ನೋಟಿಸ್ ರವಾನಿಸಲಾಗಿದ್ದು, ಯಾವುದೇ ಕ್ಷಣದಲ್ಲಿ ಪ್ರಜ್ವಲ್ ರೇವಣ್ಣ ಬಂಧನವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.