ವೀಡಿಯೋ ನೋಡೋಕೆ ಆಗಲ್ಲ, ವಯಸ್ಸಾದ ತಾಯಿಯನ್ನು ಆ ರೀತಿ ಬಳಸಿಕೊಂಡಿದ್ದಾರೆ: ಡಿಕೆ ಸುರೇಶ್

Public TV
3 Min Read
PRAJWAL REVANNA DK SURESH

ಬೆಂಗಳೂರು: ನಾನು ನಿಜವಾಗಿ ಹೇಳ್ತೀನಿ. ಆ ವೀಡಿಯೋ ನೋಡೋದಕ್ಕೆ ಆಗಲ್ಲ. ವಯಸ್ಸಾದ ತಾಯಿಯನ್ನ ಆ ರೀತಿ ಬಳಸಿಕೊಂಡಿದ್ದಾರೆ ಎಂದು ಸಂಸದ ಡಿಕೆ ಸುರೇಶ್ (DK Suresh) ಅವರು ಪ್ರಜ್ವಲ್ ರೇವಣ್ಣ‌ (Prajwal Revanna) ವಿರುದ್ಧ ಕಿಡಿಕಾರಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ಇಡೀ ದೇಶವೇ ಅಸಹ್ಯ ಪಡುವಂತಹ ಘಟನೆಯಾಗಿದೆ. ಈ ಪ್ರಕರಣದ ಬಗ್ಗೆ ಪ್ರಧಾನಿ ಮೋದಿ ಮಾತನಾಡಬೇಕು. ಹುಬ್ಬಳ್ಳಿ ಘಟನೆ ಬಗ್ಗೆ ಮೋದಿ ಪ್ರಸ್ತಾಪ ಮಾಡಬೇಕು. ಇದರಲ್ಲಿ ಯಾವುದೇ ರಾಜಕೀಯ ಇಲ್ಲ, ರಾಜಕೀಯ ಮಾಡಿದ್ರೆ ಅದು ಕುಮಾರಸ್ವಾಮಿನೇ ಮಾಡಿರಬೇಕು. ಅವರಿಗೆ ಈ ಬಗ್ಗೆ ಮೊದಲೇ ಗೊತ್ತಿತ್ತು ಅಂತಾರೇ. ದೇವೇಗೌಡರ ಮೊಮ್ಮಗ, ಸಿಎಂ ಅವರ ಮಗ ಈ ರೀತಿ ಮಾಡಿದ್ದಾರೆ. ಅವರ ರಕ್ಷಣೆಗೆ ಕುಟುಂಬವೇ ನಿಂತಿದೆ ಎಂದರು. ಇದನ್ನೂ ಓದಿ: ಪೆನ್‍ಡ್ರೈವ್ ಹಿಂದೆ ಮಹಾನಾಯಕ ಇದ್ದಾರೆ- ಡಿಕೆಶಿ ವಿರುದ್ಧ ಹೆಚ್‍ಡಿಕೆ ಗರಂ

ಯಾವ ರಾಜಕೀಯ ಕೂಡ ಇದರಲ್ಲಿ ಇಲ್ಲ. ನಾನು ಸರ್ಕಾರಕ್ಕೆ ಹೇಳ್ತೀನಿ, ಇದರಲ್ಲಿರೋ ಸಂತ್ರಸ್ತರ ಪರವಾಗಿ ಸರ್ಕಾರ ನಿಲ್ಲಬೇಕು. ಸರ್ಕಾರ ಸಂತ್ರಸ್ತರಿಗೆ ರಕ್ಷಣೆ ನೀಡಬೇಕು. ಒಳ್ಳೆಯ ವಿಚಾರ ಆದಾಗ ಕುಟುಂಬ, ಈಗ ಕುಟುಂಬದ ಹೆಸರು ಹೇಳಬಾರದಾ? ಕುಟುಂಬದವರೇ ಅವರ ರಕ್ಷಣೆಗೆ ನಿಂತಿದ್ದಾರೆ. ಬೇರೆ ಯಾರಾದ್ರೂ ಹೀಗೆ ಮಾಡಿದ್ರೆ, ದೇವೇಗೌಡರು, ಕುಮಾರಸ್ವಾಮಿ ಸುಮ್ನೇ ಇರ್ತಿದ್ರಾ?. ತಾಯಂದರ ರಕ್ಷಣೆ ಮಾಡಬೇಕು, ಇದು ಅತ್ಯಂತ ಅಸಹ್ಯಕರ ವಿಚಾರವಾಗಿದೆ. ದೇವೇಗೌಡರ ಕುಟುಂಬ ಈ ರೀತಿ ಅನೇಕ ಸಲ ಮಾಡಿಕೊಂಡೇ ಬಂದಿದೆ. ಯಾರು ಏನೂ ಮಾಡಲು ಆಗಲ್ಲ ಅನ್ನೋ ಮನೋಭಾವ ಅವರದ್ದಾಗಿದೆ. ರೇವಣ್ಣ ರಾಜಕೀಯ ಷಡ್ಯಂತ್ರ ಅಂದ್ರೆ, ಅದು ಕುಮಾರಸ್ವಾಮಿ ಮಾಡಿರೋದೇ ಆಗಿರಬೇಕು ಎಂದು ಹೇಳಿದರು.

PRAJWAL REVANNA 1

ಇದು ನಮ್ಮ ಗಮನಕ್ಕೆ ಬಂದಿದ್ದರೆ ಇದು ಮುಂಚೆನೇ ಹೊರಕ್ಕೆ ಬರುತ್ತಿತ್ತು. ಈಗ ಇದನ್ನ ಬೇರೆ ರೀತಿ ತಿರುಗಿಸಲು ಹೀಗೆ ನಮ್ಮ ಹೆಸರನ್ನ ತರ್ತಿದ್ದಾರೆ. ಹಾಸನದಲ್ಲಿ ಇದು ಗುಸು ಗುಸು ಇತ್ತು. ಬಿಜೆಪಿ ನಾಯಕರು ಸಹ ಇದು ನಮಗೆ ಗೊತ್ತಿತ್ತು, ಅಂತಾ ಹೇಳಿದ್ದಾರೆ. ರೇವಣ್ಣ ಅವರು ಕೂಡ ಇದು ಹಳೆಯ ವಿಚಾರ ಅಂತಿದ್ದಾರೆ. ಆದರೆ ಅವರಿಗೆಲ್ಲ ಇದು ಮೊದಲೇ ಗೊತ್ತಿದ್ದ ವಿಚಾರ ಎಂದು ವಾಗ್ದಾಳಿ ನಡೆಸಿದರು.

ಇದು ಒಂದೆರಡು ಪ್ರಕರಣ ಅಲ್ಲ, 500ಕ್ಕೂ ಹೆಚ್ಚು ಇದೆ ಅಂತಿದ್ದಾರೆ. ಇದು ಇಡೀ ದೇಶದಲ್ಲೇ ಅತ್ಯಂತ ದೊಡ್ಡ ಪ್ರಕರಣ. ಇದು ಕುಟುಂಬದ ಹೊಣೆ ಅಲ್ಲಾ ಅಂತಾರೆ..ಮತ್ತೇನು? ಈ ಪೆನ್ ಡ್ರೈವ್ ವಿಚಾರ ಪ್ರಧಾನಿ ಕಚೇರಿಗೂ ತಲುಪಿದೆ. ಪ್ರಧಾನಿ ಅವರ ಗಮನಕ್ಕೂ ಬಂದಿದೆ. ಇದು ದೊಡ್ಡ ರಾಕೆಟ್. ಇದರಲ್ಲಿ ಯಾರೆಲ್ಲಾ ಇದ್ದಾರೆ. ಅವರಿಗೆ ಶಿಕ್ಷೆ ಆಗಬೇಕು. ಜೊತೆಗೆ ಆ ಹೆಣ್ಣು ಮಕ್ಕಳ ರಕ್ಷಣೆ ಆಗಬೇಕು ಎಂದು ಡಿ.ಕೆ ಸುರೇಶ್ ಆಗ್ರಹಿಸಿದರು.

ಎನ್‍ಡಿಎ ಇಂತಹ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದು ಯಾಕೇ..? ತಪ್ಪು ಮಾಡಿದವರ ಪರವಾಗಿ ನನ್ನ ಮಗನಿಗೆ ವೋಟ್ ಕೊಡಿ ಎಂದು ಕೇಳಿದ್ದು ಇಡೀ ದೇಶಕ್ಕೆ ಮಾಡಿದ ಅವಮಾನ. ಬಿಜೆಪಿಯವರು ಇಂತಹ ಘಟನೆಯನ್ನ ಮುಚ್ಚಿಡೋದ್ರಲ್ಲಿ ಮುಂದು. ಪ್ರಧಾನಿ ಕಾರ್ಯಾಲಯ ಪ್ರಕರಣವನ್ನ ತೀರಿಸುವ ಕೆಲಸ ಮಾಡಿದೆ. ಈ ಹಿಂದೆ ಬಾಂಬೆ ಬಾಯ್ಸ್ ಪ್ರಕರಣದಲ್ಲೂ ಹೀಗೆ ಮಾಡಿದೆ ಎಂದರು.

ರೇವಣ್ಣ ಅವರೇ ಇದು ನಾಲ್ಕು ವರ್ಷದ ಹಳೆಯ ವೀಡಿಯೋ ಅಂತಾ ಹೇಳಿದ್ದಾರೆ. ಇದು ಹೇಗೆ ರಾಜಕೀಯ ಷಡ್ಯಂತ್ರ. ಅವರೇ ಹೇಳಬೇಕು. 500ಕ್ಕೂ ಹೆಚ್ಚು ಮಹಿಳೆಯರ ಮನಹಾನಿ ಪ್ರಕರಣ ಆಗಿದೆ. ಇದು ಇಡೀ ದೇಶದಲ್ಲೇ ಅತ್ಯಂತ ದೊಡ್ಡ ಮಾನಹಾನಿ ಪ್ರಕರಣ. ಸರ್ಕಾರ ಈ ಪ್ರಕರಣದಲ್ಲಿರೋ ಮಹಿಳೆಯರ ರಕ್ಷಣೆ ನೀಡಬೇಕು. ಸರ್ಕಾರದ ಜವಾಬ್ದಾರಿ ಇದಾಗಿದೆ. ಬಿಜೆಪಿ ಅವರು ಡಬಲ್ ಸ್ಟ್ಯಾಂಡ್. ಎಂಪಿ ಅದ್ಮೇಲೆ ನಡೆದಿರೋ ಘಟನೆ ಇದಾಗಿದೆ. ಜೆಡಿಎಸ್ ಕಾಂಗ್ರೆಸ್ ಇದ್ದಾಗ ಗೆದ್ದ ನಂತ್ರ ನಡೆದಿರೋದು ಎಂದು ವಾಗ್ದಾಳಿ ನಡೆಸಿದರು.

Share This Article