ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಪೆನ್‍ಡ್ರೈವ್ ಪ್ರಕರಣವು ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇದೀಗ ಬಿಜೆಪಿ ಮುಖಂಡ ದೇವರಾಜೇಗೌಡ ಮತ್ತು ಮಾಜಿ ಸಂಸದ ಎಲ್‍ಆರ್ ಶಿವರಾಮೇಗೌಡ (Shivarame Gowda) ಮಾತಾಡಿದ್ದಾರೆ ಎನ್ನಲಾದ ಮತ್ತೊಂದು ಆಡಿಯೋ ವೈರಲ್ ಆಗಿದೆ.
ಎಸ್‍ಐಟಿಯವರು ಮಾಹಿತಿ ಕೇಳಿದ್ರೆ, ಡಿಕೆ ಶಿವಕುಮಾರ್ ಬಗ್ಗೆ ಏನು ಹೇಳಬೇಡ ಎಂದು ಎಲ್ ಆರ್ ಶಿವರಾಮೇಗೌಡ, ದೇವರಾಜೆಗೌಡ ಗೌಡಗೆ ಹೇಳುತ್ತಾರೆ. ಈ ಆಡಿಯೋ ಇದೀಗ ಭಾರೀ ಸದ್ದು ಮಾಡುತ್ತಿದೆ.
ಆಡಿಯೋದಲ್ಲಿ ಏನಿದೆ..?:
ದೇವರಾಜೇಗೌಡ: ನಮಗೆ ನೋಟಿಸ್ ಕೊಡ್ತಾರಾ ಅಣ್ಣ ಎಸ್‍ಐಟಿಯವರು
ಶಿವರಾಮೇಗೌಡ: ಕೊಡ್ತಾರೆ…ಕೊಡ್ತಾರೆ…ಕೊಡ್ತಾರೆ…
ದೇವರಾಜೆಗೌಡ: ಅಲ್ಲಿ ಏನು ಮಾತಾಡೋದು ಅಣ್ಣ ಬೇರೆ…?
ಶಿವರಾಮೇಗೌಡ: ಎಸ್‍ಐಟಿ ಅವರು ನೋಟಿಸ್ ಕೊಟ್ಟಾಗಲು ಡಿಕೆ ಬಗ್ಗೆ ಚಕಾರ ಎತ್ತಬೇಡ….
ದೇವರಾಜೆಗೌಡ: ಸರಿ ಸರಿ ಅಣ್ಣ….
ಶಿವರಾಮೇಗೌಡ: ನಾನ್ ಇವತ್ತಿಂದ ಹೋರಾಟ ಮಾಡ್ತಿಲ್ಲ..
ದೇವರಾಜೆಗೌಡ: ಹೌದಾ ಅಣ್ಣ
ಶಿವರಾಮೇಗೌಡ: ಈ ಕೃತ್ಯಗಳೆಲ್ಲಾ ಕಡಿಮೆ ಮಾಡಬೇಕು.. ನಮ್ಮ ತಾಲೂಕು ಕ್ಲೀನ್ ಆಗಬೇಕು ಅಂತಾ ನಾನು ಬಹಳ ದಿವಸದಿಂದ ಹೋರಾಟ ಮಾಡ್ತಾ ಇದ್ದೀನಿ… ವೀಡಿಯೋ ಬಿಟ್ಟಿರೋದು ಫೇಸ್‍ಬುಕ್‍ನಲ್ಲಿ.. ನಾನು ಹೋರಾಟ ಮಾಡ್ತಾ ಇದ್ದೀನಿ… ಕೋರ್ಟ್‍ನಲ್ಲೂ ಅವರ ವಿರುದ್ದವಾಗಿ ಹೋರಾಟ ಮಾಡಿದ್ದೀನಿ.. ಇದು ಬಿಟ್ರೆ ಬೇರೆ ಚರ್ಚೆನೆ ಇಲ್ಲ ಅಂತಾ ಹೇಳು….
ದೇವರಾಜೆಗೌಡ: ಸರಿ ಸರಿ ಅಣ್ಣ..
ಈ ಹಿಂದೆ ಡಿಕೆ ಶಿವಕುಮಾರ್ ಹಾಗೂ ಶಿವರಾಮೇ ಗೌಡ ಮಾತನಾಡಿದ್ದರು ಎನ್ನಲಾದ ಆಡಿಯವನ್ನು ದೇವರಾಜೇ ಗೌಡರೇ ರಿಲೀಸ್ ಮಾಡಿದ್ದರು. ಇದೀಗ ಮತ್ತೊಂದು ಆಡಿಯೋ ವೈರಲ್ ಆಗುವ ಮೂಲಕ ಪ್ರಕರನವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ದೇವರಾಜೇ ಗೌಡ ಪೊಲೀಸ್ ವಶಕ್ಕೆ: ಇತ್ತ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಅವರನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೇವರಾಜೇಗೌಡ ವಿರುದ್ಧ ಏಪ್ರಿಲ್ 1ರಂದು ಹೊಳೆನರಸೀಪುರ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು. ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಅವರು ಪ್ರಮುಖ ಮಾಹಿತಿದಾರರಾದ್ದರಿಂದ ಅದು ಇತ್ತೀಚೆಗೆ ಬೆಳಕಿಗೆ ಬಂದಿದೆ.
ಪ್ರಜ್ವಲ್ ರೇವಣ್ಣ ಅವರು ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಕಳೆದ ವರ್ಷ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದ ದೇವರಾಜೇಗೌಡ, ಹಾಸನದಿಂದ ಜೆಡಿಎಸ್ ಸಂಸದರಿಗೆ ಲೋಕಸಭೆ ಟಿಕೆಟ್ ನೀಡದಂತೆ ಆಗ್ರಹಿಸಿದ್ದರು. ಅಲ್ಲದೇ ಪ್ರಜ್ವಲ್ ಲೈಂಗಿಕ ಕಿರುಕುಳದ ವೀಡಿಯೋಗಳನ್ನು ಸೋರಿಕೆ ಮಾಡಿದ್ದಕ್ಕಾಗಿ ರಾಜ್ಯದ ಕಾಂಗ್ರೆಸ್ ನಾಯಕರನ್ನು ದೂಷಿಸಿದ್ದರು.