ಹಾಸನ: ತಂದೆಯ ಮೇಲೆ ಸಾವಿರ ಕೇಸ್ ಹಾಕಲಿ, ಏನು ಸಾಬೀತಾಗಬೇಕೋ ಅದು ಆಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ (Suraj Revanna) ಹೇಳಿದ್ದಾರೆ.
ತಂದೆ ರೇವಣ್ಣ (HD Revanna) ಅವರ ಮೇಲೂ ಕೇಸ್ ದಾಖಲಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಹೊಳೆನರಸೀಪುರ ಪಟ್ಟಣದಲ್ಲಿ ಮಾತನಾಡಿದ ಅವರು, ರೇವಣ್ಣ ಅವರು ಏನೆಂದು ನಮ್ಮ ಜಿಲ್ಲೆಯ ಜನರಿಗೆ ಗೊತ್ತಿದೆ. ತಾಲೂಕಿನ ಜನರಿಗೆ ಗೊತ್ತಿದೆ. ಅಂತಹ ವಿಚಾರಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎನ್ನುವ ಮೂಲಕ ತಮ್ಮ ಕುಟುಂಬದ ವಿರುದ್ಧದ ಆರೋಪಗಳ ಬಗ್ಗೆ ಕಿಡಿ ಕಾರಿದರು.
Advertisement
Advertisement
ರಾಜಕೀಯ ದುರುದ್ದೇಶದಿಂದ ಯಾರು ಏನು ಬೇಕಾದರೂ ಮಾಡುತ್ತಾರೆ. ಜಿಲ್ಲೆಯ ರಾಜಕಾರಣದಲ್ಲಿ ರೇವಣ್ಣ ಅವರಿಗೆ ಪ್ರತಿರೋಧ ಅಥವಾ ಪ್ರತಿಸ್ಪರ್ಧಿ ಇಲ್ಲ. ಅವರ ರೀತಿ ರಾಜಕಾರಣ ಮಾಡಿದವರು ಇಲ್ಲ. ಅವರನ್ನು ಸಿಲುಕಿಸಬೇಕು, ದುರ್ಬಲ ಮಾಡಬೇಕು ಎಂದು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಹೇಳಿ ತಂದೆ ಪರ ಬ್ಯಾಟಿಂಗ್ ಮಾಡಿದರು.
Advertisement
ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅವರನ್ನು ಕಳೆದ ಜನವರಿಯಲ್ಲಿ ಅನುದಾನದ ವಿಚಾರದ ಬಗ್ಗೆ ಭೇಟಿ ಮಾಡಿದ್ದೆ. ನಾನು ಈ ಜಿಲ್ಲೆಯ ಜನಪ್ರತಿನಿಧಿಯಾಗಿದ್ದೇನೆ. ನಾನು ಭೇಟಿಯಾಗಿದ್ದನ್ನು ನೀವೇ ಚಿತ್ರಿಕರಿಸಿದ್ದೀರಿ. ಒಂದೂವರೆ ತಿಂಗಳಿನಿಂದ ಚುನಾವಣೆ ಹಿನ್ನೆಲೆಯಲ್ಲಿ ಬ್ಯುಸಿ ಇದ್ದೆ. ಇವತ್ತಿನವರೆಗೂ ಬೆಂಗಳೂರಿಗೆ ಹೋಗಿಲ್ಲ. ಹಾಗಿದ್ದಾಗ ಡಿ.ಕೆ.ಶಿವಕುಮಾರ್ ಅವರನ್ನಾಗಲೀ, ಯಾವುದೇ ರಾಜಕಾರಣಿಯನ್ನು ಭೇಟಿ ಮಾಡುವ ಸಂದರ್ಭ ಹೇಗೆ ಬರಲಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಯಾವುದೇ ಲಸಿಕೆಯ ಮೊದಲ ಆದ್ಯತೆ ಸುರಕ್ಷತೆ: ಕೋವ್ಯಾಕ್ಸಿನ್ ಅಭಿವೃದ್ಧಿಪಡಿಸಿದ ಭಾರತ್ ಬಯೋಟೆಕ್ ಹೇಳಿಕೆ
Advertisement
ನಮ್ಮ ಕ್ಷೇತ್ರ, ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಹಿಂದೆ ಸೌಹಾರ್ದಯುತವಾಗಿ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು ನಿಜ. ಆಗಲೂ ರೇವಣ್ಣ ಕುಟುಂಬ ಕಾಂಗ್ರೆಸ್‌ಗೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಸೃಷ್ಟಿ ಮಾಡಲಾಗಿತ್ತು. ಈ ಊಹಾಪೋಹಗಳನ್ನೆಲ್ಲಾ ಬಿಟ್ಟುಬಿಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: 10 ಲಕ್ಷದಲ್ಲಿ ಎಂಟು ಮಂದಿಯಲ್ಲಿ ಮಾತ್ರ ಅಡ್ಡ ಪರಿಣಾಮ: ಕೋವಿಶೀಲ್ಡ್ ಬಗ್ಗೆ ಸ್ಪಷ್ಟನೆ ನೀಡಿದ ICMR ನಿವೃತ್ತ ವಿಜ್ಞಾನಿ
ಲೋಕಸಭಾ ಚುನಾವಣೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು ನೂರಕ್ಕೆ ನೂರು ಪರ್ಸೆಂಟ್ ಪ್ರಜ್ವಲ್ ರೇವಣ್ಣ (Prajwal Revanna) ಜಯಗಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.