ಬೆಂಗಳೂರು: ಬಿಜೆಪಿ ಮುಖಂಡ ದೇವರಾಜೇಗೌಡ (Devarajegowda) ಆಡಿಯೋ ಬಾಂಬ್‌ಗೆ (Audio Bomb) ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ (L. R. Shivarame Gowda) ಸ್ಪಷ್ಟನೆ ನೀಡಿದ್ದಾರೆ. ಡಿಸಿಎಂ ಡಿಕೆಶಿವಕುಮಾರ್ (DK Shivakumar) ಹತ್ತಿರ ಮಾತಾಡಿಸಿದ್ದು ನಿಜ ಅಂತ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ವಿಶೇಷ ತನಿಖಾ ತಂಡ(SIT) ಮೊದಲು ದೇವರಾಜೇಗೌಡನ ಎಳೆದುಕೊಂಡು ಹೋಗಬೇಕು ಎಂದು ಹೇಳಿದ್ದಾರೆ.
ಖಾಸಗಿ ಹೋಟೆಲ್‌ಗೆ ದೇವರಾಜೇಗೌಡ (Devarajegowda) ಬಂದಿದ್ದ. ವಿಶೇಷ ತನಿಖಾ ತಂಡದ ತನಿಖೆ ತಡೆಯಾಜ್ಞೆ ತರುತ್ತಾರೆ ಎಂದು ಹೇಳಿದ್ದ. ಅದಕ್ಕಾಗಿ ಶಿವಕುಮಾರ್‌ರನ್ನು ಭೇಟಿ ಮಾಡಿಸಿ ಅಂತ ಕೇಳಿಕೊಂಡ. ಆಗ ಡಿಕೆಶಿಗೆ ಫೋನ್ ಮಾಡಿ ಭೇಟಿಗೆ ಕೇಳಿದೆ. ಡಿಕೆಶಿ ನಿರಾಕರಿಸಿದರು. ನಾನೇ ಒತ್ತಾಯ ಮಾಡಿ ನೀವೊಬ್ಬರು ಡಿಸಿಎಂ ಆಗಿ ಭೇಟಿ ಮಾಡಿಲ್ಲ ಅಂದರೆ ಹೇಗೆ ಅಂತ ಕೇಳಿದೆ. ಆಗ ಅಲ್ಲಿಂದಲೇ ದೇವರಾಜೇಗೌಡಗೆ ಕಾಲ್ ಮಾಡಿ ಡಿಕೆಶಿಗೆ ಫೋನ್ ಕೊಟ್ಟೆ. ನಿನ್ನ ಬಳಿ ಏನಿದೆ ಅದನ್ನು ಎಸ್‌ಐಟಿಗೆ ಕೊಡಿ ಅಂತ ಡಿಕೆಶಿ ಹೇಳಿದ್ರು ಅಷ್ಟೇ ಎಂದರು. ಇದನ್ನೂ ಓದಿ: ಕನ್ನಡ ಪ್ರಸಿದ್ಧ ಕಿರುತೆರೆ ನಟಿಯದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್: ಜ್ಯೋತಿ ರೈ ಹೇಳಿದ್ದೇನು?
Advertisement
Advertisement
ದೇವರಾಜೇಗೌಡಗೆ ಕ್ಯಾಬಿನೆಟ್ ದರ್ಜೆಯ ಆಮಿಷ ನೀಡಿಲ್ಲ. ಆತ ಗ್ರಾಮ ಪಂಚಾಯತ್ ಸದಸ್ಯ ಆಗಲು ಲಾಯಕ್ ಇಲ್ಲ. ಅವನ ಮೈ ಎಲ್ಲಾ ಕ್ಯಾಮೆರಾ ರೀತಿಯಲ್ಲಿ ಮಾಡಿಕೊಂಡಿದ್ದಾನೆ. ಪೆನ್‌ಡ್ರೈವ್ ಹೆಸರು ಹೇಳಿಕೊಂಡು ದೇವರಾಜೇಗೌಡ 80 ಕೋಟಿ ರೂ.ವರೆಗೆ ಆಸ್ತಿ ಮಾಡಿಕೊಂಡಿದ್ದಾನೆ. 2 ತಿಂಗಳ ಕಾಲ್ ಲಿಸ್ಟ್ ತೆಗೆಸಿದ್ರೆ ಎಲ್ಲ ಸತ್ಯ ಹೊರಬರಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ನಾನು ಡಾರ್ಕ್ ಸ್ಕಿನ್ ಭಾರತೀಯ- ಸ್ಯಾಮ್ ಪಿತ್ರೋಡಾಗೆ ಅಣ್ಣಾಮಲೈ ತಿರುಗೇಟು
Advertisement
ಡ್ರೈವರ್ ಕಾರ್ತಿಕ್ ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಆಸ್ತಿ ವಿಚಾರವಾಗಿ ಭೇಟಿ ಮಾಡಿದ್ದ. ಅದನ್ನು ಬಿಟ್ಟರೆ ಮತ್ತೆ ಭೇಟಿಯಾಗಿಲ್ಲ. ದೇವರಾಜೇಗೌಡ ಬಿಟ್ಟಿರುವ ಆಡಿಯೋ ಕಟ್ ಮಾಡಿ ಬಿಟ್ಟಿದ್ದಾನೆ. ಅದನ್ನು ಪೂರ್ತಿ ಬಿಡುಗಡೆ ಮಾಡಲಿ. ಆರೋಪ ಸಾಬೀತು ಮಾಡಿದ್ರೆ ರಾಜಕೀಯದಿಂದಲೇ ನಿವೃತ್ತಿ ಆಗುತ್ತೇನೆ. ಈ ಬಗ್ಗೆ ಬಹಿರಂಗ ಚರ್ಚೆಗೂ ಸಿದ್ಧ ಇದ್ದೇನೆ ಅಂತ ಶಿವರಾಮೇಗೌಡ ಸವಾಲ್ ಹಾಕಿದ್ದಾರೆ.
Advertisement