ಬೆಂಗಳೂರು: ಮಾಜಿ ಸಚಿವ ರೇವಣ್ಣ (HD Revanna) ಕುಟುಂಬಕ್ಕೆ ಪೆನ್ ಡ್ರೈವ್ ಪ್ರಕರಣ (Prajwal Revanna) ಸಂಕಷ್ಟದ ಮೇಲೆ ಸಂಕಷ್ಟ ತರುತ್ತಲೇ ಇದೆ. ಹೊಳೆನರಸೀಪುರದಲ್ಲಿ ಮನೆ ಕೆಲಸದಾಕೆ ದಾಖಲಿಸಿದ್ದ ಪ್ರಕರಣ ಸಂಬಂಧ ಇದೀಗ ರೇವಣ್ಣ ಪತ್ನಿ ಭವಾನಿ ರೇವಣ್ಣಗೂ (Bhavani Revanna) ವಿಶೇಷ ತನಿಖಾ ತಂಡ (SIT) ನೋಟಿಸ್ ರವಾನಿಸಿ ಶನಿವಾರದ ಒಳಗಡೆ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿದೆ.
ಈ ಮಧ್ಯೆ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಸ್ಥಳಗಳ ಮೇಲೆ ಎಸ್‌ಐಟಿ ರೇಡ್ ಮಾಡಿದೆ. ಗುರುವಾರ ತಡರಾತ್ರಿ ಬೆಂಗಳೂರಿನ ಬಸವನಗುಡಿಯಲ್ಲಿರುವ ಮನೆ, ಹೊಳೆನರಸೀಪುರದ ಪಡುವಲಹಿಪ್ಪೆಯ ಫಾರ್ಮ್ ಹೌಸ್, ಪ್ರಜ್ವಲ್‌ರೇವಣ್ಣಗೆ ಸೇರಿದ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿ ಶೋಧ ನಡೆಸಿದ್ದಾರೆ. ಇದನ್ನೂ ಓದಿ: ರೋಹಿತ್ ವೆಮುಲಾ ದಲಿತ ವಿದ್ಯಾರ್ಥಿಯಲ್ಲ – ತನಿಖೆ ಪೂರ್ಣ, ಹೈಕೋರ್ಟ್‌ಗೆ ಅಂತಿಮ ವರದಿ ಸಲ್ಲಿಕೆ
ಎಸ್.ಪಿ. ಸೀಮಾ ಲಾಠ್ಕರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಕೆಲವೊಂದು ಮಹತ್ವದ ಸಾಕ್ಷಿಗಳನ್ನು ಕಲೆ ಹಾಕಿದೆ. ಫಾರ್ಮ್‌ಹೌಸ್‌ನಲ್ಲಿದ್ದ ಕಾರ್ಮಿಕರನ್ನೂ ವಿಚಾರಣೆಗೆ ಒಳಪಡಿಸಿದೆ.
ನಿನ್ನೆ ಮತ್ತು ಇಂದು ಬಿಜೆಪಿ ಮುಖಂಡ ದೇವರಾಜೇಗೌಡ (G Devarajegowda) ಎಸ್‌ಐಟಿ ವಿಚಾರಣೆ ಎದುರಿಸಿದ್ದಾರೆ. ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಎಸ್‌ಐಟಿಗೆ ಕೊಟ್ಟಿದ್ದೇನೆ. ಅತೀ ಶೀಘ್ರದಲ್ಲೇ ಸತ್ಯ ಹೊರಬರಲಿದೆ ಎಂದು ದೇವರಾಜೇಗೌಡ ತಿಳಿಸಿದ್ದಾರೆ. ಇದನ್ನೂ ಓದಿ: ವಿಡಿಯೋ ಬಿಡುಗಡೆ ಮಾಡಲು ನನಗೆ ಹುಚ್ಚು ಹಿಡಿದಿದ್ಯಾ? ಟೆಂಟ್‌ನಲ್ಲಿ ಬ್ಲೂ ಫಿಲಂ ಬಿಡುಗಡೆ ಮಾಡುವವರಿಂದ ರಿಲೀಸ್ : ಹೆಚ್‌ಡಿಕೆ
ಒಕ್ಕಲಿಗ ನಾಯಕತ್ವಕ್ಕಾಗಿ ಇಷ್ಟೆಲ್ಲಾ ನಡೆದಿದೆ. ಮುಂದಿನ ವಾರ ಕುಮಾರಸ್ವಾಮಿ ಅತೀದೊಡ್ಡ ನಿರ್ಧಾರ ಪ್ರಕಟಿಸುವವರಿದ್ದಾರೆ ಎನ್ನುವ ಮೂಲಕ ಕುತೂಹಲ ಮೂಡಿಸಿದ್ದಾರೆ.