ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna) ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಎರಡು ಪತ್ರ ಬರೆದರೂ ಉತ್ತರ ಬಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಏಪ್ರಿಲ್ 27ಕ್ಕೆ ರಾಜತಾಂತ್ರಿಕ ಪಾಸ್‌ಪೋರ್ಟ್ (Diplomatic Passport) ಬಳಸಿ ದೇಶ ಬಿಟ್ಟು ಹೋಗಿದ್ದಾರೆ. ಅವರು ಬೇರೆ ದೇಶಕ್ಕೆ ಹೋಗಿ ತಪ್ಪಿಸಿಕೊಂಡಿದ್ದಾರೆ. ಆರೋಪಿಯನ್ನ ಸುರಕ್ಷಿತವಾಗಿ ಇರಿಸಬೇಕಲ್ಲವಾ? ಅದಕ್ಕಾಗಿ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡುವಂತೆ ಪತ್ರ ಬರೆದಿದ್ದೇನೆ. ಆದರೆ ಕೇಂದ್ರ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ ಎಂದರು. ಇದನ್ನೂ ಓದಿ: ಎಲ್ಲೇ ಇದ್ದರೂ ಕೂಡಲೇ ಸ್ವದೇಶಕ್ಕೆ ಬಾ, ನನ್ನ ತಾಳ್ಮೆ ಪರೀಕ್ಷಿಸಬೇಡ – ಪ್ರಜ್ವಲ್‌ಗೆ ಹೆಚ್‌ಡಿಡಿ ಸೂಚನೆ
Advertisement
Advertisement
ನನ್ನ ಮೊದಲ ಪತ್ರಕ್ಕೆ ಉತ್ತರ ಬಾರದ ಕಾರಣ ಎರಡನೇ ಪತ್ರ ಬರೆದಿದ್ದೇನೆ. ಪ್ರಜ್ವಲ್ ಮೇಲೆ ಐಪಿಸಿ ಸೆಕ್ಷನ್ 377ರ ಅಡಿ ಕೇಸ್ ದಾಖಲಾಗಿದ್ದು ಮೂರು ದೂರು ಬಂದಿವೆ. ಆರೆಸ್ಟ್ ಆಗಿಬಿಡುತ್ತೇನೆ ಎಂದು ವಿದೇಶಕ್ಕೆ ಹೋಗಿ ತಪ್ಪಿಸಿಕೊಂಡಿದ್ದಾರೆ ಎಂದು ಹೇಳಿದರು.
Advertisement
ಮೊದಲ ಪತ್ರಕ್ಕೆ ಕೇಂದ್ರದಿಂದ ಇವತ್ತಿನವರೆಗೂ ಉತ್ತರ ಬಂದಿಲ್ಲ. ವಿಶೇಷ ತನಿಖಾ ತಂಡ (SIT) ಕೋರ್ಟ್‌ನಿಂದ ವಾರೆಂಟ್ ವಾರೆಂಟ್ ತಗೊಂಡಿದ್ದಾರೆ. ಆ ವಾರೆಂಟ್ ಮಾಹಿತಿಯನ್ನೂ ಕೇಂದ್ರಕ್ಕೆ ಕಳುಹಿಸಿಕೊಟ್ಟು ಅವರು ಒಂದು ಪತ್ರ ಬರೆದಿದ್ದಾರೆ. ಆದರೆ ಕೇಂದ್ರ ಸರ್ಕಾರದಿಂದ ಯಾವುದಕ್ಕೂ ಉತ್ತರ ಬಂದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಪಿಎಂ ಹುದ್ದೆಗೆ ರಾಜ್ಯದಿಂದ ಯಾರೂ ಅಭ್ಯರ್ಥಿ ಇಲ್ಲ ಎಂದಿಲ್ಲ: ಸಿಎಂ ಸ್ಪಷ್ಟನೆ
Advertisement
ಫೋನ್ ಟ್ಯಾಪಿಂಗ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಿಂದಿನ ನನ್ನ ಆಡಳಿತದಲ್ಲಿ ಆಗಲಿ, ಈಗಿನ ಆಡಳಿತದಲ್ಲಾಗಲೀ ನಾವು ಫೋನ್ ಟ್ಯಾಪಿಂಗ್ ಮಾಡಿಲ್ಲ. ಮುಂದೆಯೂ ಫೋನ್ ಟ್ಯಾಪಿಂಗ್ ಮಾಡುವುದಿಲ್ಲ ಎಂದು ತಿರುಗೇಟು ನೀಡಿದರು.
ಇದೇ ವೇಳೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashok) ಜೊತೆ ಬಹುಶಃ ಪ್ರಜ್ವಲ್ ರೇವಣ್ಣ ಮಾತನಾಡಿರಬಹುದು. ಕೇಂದ್ರ ಸರ್ಕಾರದ ಜೊತೆ ಅವರು ಪಾಲುದಾರರು ಅಲ್ವಾ ಎಂದು ವ್ಯಂಗ್ಯವಾಡಿದರು.