ರಾಯಚೂರು: ನಾನೇ ವಿಡಿಯೋವನ್ನು ಹೊರಗಡೆ ರಿಲೀಸ್ ಮಾಡಿದ್ದೇನೆ ಎಂದು ಕೆಲವರು ಹೇಳುತ್ತಿದ್ದಾರೆ. ವಿಡಿಯೋ ಬಿಡುಗಡೆ ಮಾಡಲು ನನಗೆ ಏನು ಹುಚ್ಚು ಹಿಡಿದಿದ್ಯಾ? ಟೆಂಟ್‌ನಲ್ಲಿ ಬ್ಲೂ ಫಿಲಂ ಬಿಡುಗಡೆ ಮಾಡುವವರು ಇದನ್ನು ಮಾಡಿದ್ದಾರೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಕಿಡಿಕಾರಿದ್ದಾರೆ.
ರಾಯಚೂರಿನ ಸಿಂಧನೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ತಂದೆತಾಯಿಗೆ ಆತ್ಮ ಸ್ಥೈರ್ಯ ತುಂಬಲು ನಾನು ಎರಡು ದಿನ ಬೆಂಗಳೂರಿನಲ್ಲಿದ್ದೆ. ಅಲ್ಲಿ ಕ್ಯಾಮೆರಾಗಳಿದ್ದವು ವಿಡಿಯೋಗಳನ್ನ ತರಿಸಿಕೊಂಡು ನೋಡಿ. ನನ್ನ ತಂದೆ ತಾಯಿ ಜೀವಕ್ಕೆ ಅಪಾಯ ಆಗಬಾರದು. ಅವರು ಯಾವ ರೀತಿ ಬದುಕಿದ್ದಾರೆ ಅಂತ ನೀವು ಮರೆತಿರಬಹುದು. ಸಿದ್ದರಾಮಯ್ಯನವರೇ (Siddaramaiah) ನೀವು ದಿನ ಇಷ್ಟಬಂದಂತೆ ಹೇಳಿಕೆ ನೀಡುತ್ತಿದ್ದೀರಿ. ಇಷ್ಟು ದಿನ ಎಸ್‌ಐಟಿ (SIT) ರಚನೆ ಮಾಡಿದ್ದಿರಲ್ಲಾ ಯಾವುದರಲ್ಲಿ ಶಿಕ್ಷೆಯಾಗಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಯಾವುದೇ ದೇಶಕ್ಕೆ ಹೋಗಿರಲಿ, ಹಿಡಿದು ತರ್ತೀವಿ: ಗುಡುಗಿದ ಸಿಎಂ
ಚುನಾವಣೆಯಲ್ಲಿ ಓಟು ಪಡೆಯಬೇಕು. ಮೋದಿ (PM Narendra Modi) ಹೆಸರು ಹಾಳು ಮಾಡಬೇಕು ಎನ್ನುವುದು ಕಾಂಗ್ರೆಸ್ (Congress) ಉದ್ದೇಶ. ಈ ಪ್ರಕರಣದಲ್ಲಿ ಮೋದಿ ಪಾತ್ರ ಇದರಲ್ಲಿ ಏನಿದೆ? ಬಾಗಲಕೋಟೆ ಮೇಟಿ ಜೊತೆ ಕುಳಿತು ನೀವು ಪ್ರಚಾರ ಮಾಡಿಲ್ವಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಜೂನ್ 4 ಮಧ್ಯಾಹ್ನ 12:30ಕ್ಕೆ ಎನ್‌ಡಿಎ 400 ಸ್ಥಾನಗಳ ಗಡಿ ದಾಟಿರುತ್ತೆ: ಅಮಿತ್ ಶಾ ಭವಿಷ್ಯ
ಮಾಧ್ಯಮಗಳಿಗೆ 25 ರಿಂದ 21 ಪೆನ್ ಡ್ರೈವ್ (Pen Drive) ವಿತರಣೆಯಾಗಿದೆ. ದೇವೇಗೌಡರ (HD Devegowda) ಮನೆ ಮುಂದೆ ನನ್ನ ಮನೆ ಮುಂದೆ ರಾತ್ರಿಯಿಂದ ನಿಲ್ಲುವ ಹೊಸ ಪದ್ದತಿ ಶುರುವಾಗಿದೆ. ಈ ಪ್ರಕರಣದಲ್ಲಿ ನನ್ನದಾಗಲಿ, ದೇವೇಗೌಡರ ಪಾತ್ರ ಯಾವುದು ಇಲ್ಲ. ನಮ್ಮ ಸುತ್ತಲು ಸುತ್ತುವುದು ಯಾಕೆ ಎಂದು ಕೇಳಿದರು.