ಬೆಂಗಳೂರು: ಪ್ರಜ್ವಲ್ ರೇವಣ್ಣನ (Prajwal Revanna) ಮಾಜಿ ಕಾರು ಚಾಲಕ ಕಾರ್ತಿಕ್ ಮಲೇಷ್ಯಾದಲ್ಲಿ (Malaysia)ಇದ್ದಾನೆ. ಆತನನ್ನು ಮಲೇಷ್ಯಾಕ್ಕೆ ಕಳುಹಿಸಿದ್ದು ಯಾರು ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಪ್ರಶ್ನಿಸಿದ್ದಾರೆ.
ಇಂದು ಸಂಜೆ ಪದ್ಮನಾಭನಗರದಲ್ಲಿರುವ ದೇವೇಗೌಡರ (Devegowda) ನಿವಾಸಕ್ಕೆ ಕುಮಾರಸ್ವಾಮಿ ಆಗಮಿಸಿದರು. ಈ ವೇಳೆ ಮಾಧ್ಯಮಗಳು ಪ್ರಶ್ನೆ ಕೇಳಿದ್ದಕ್ಕೆ, ತರಾತುರಿಯಲ್ಲಿ ವಿಡಿಯೋ ಬಿಟ್ಟು ನನ್ನನ್ನು ಕೆಣಕಿದ್ದಾರೆ. ನನಗೆ ಏನು ಮಾಡಬೇಕು ಅಂತ ಗೊತ್ತಿದೆ. ಮೊದಲು ಕಾರ್ತಿಕ್ (Karthik) ಎಲ್ಲಿ ಇದ್ದಾನೆ ಎಂದು ಹುಡುಕಿಕೊಳ್ಳಿ ಎಂದರು. ಇದನ್ನೂ ಓದಿ: ಕರ್ನಾಟಕ ಸೇರಿ ದೇಶದ ಹಲವೆಡೆ ಮೇ ತಿಂಗಳಲ್ಲಿ ಸಾಮಾನ್ಯ ಮಳೆ
ಮಂಗಳವಾರ ಡ್ರೈವರ್ ಕಾರ್ತಿಕ್ ವಿಡಿಯೋ ಬಿಡುಗಡೆಯಾಗಿದೆ. ಕಾರ್ತಿಕ್ ಎಲ್ಲಿಯಾದ್ರೂ ಪ್ರೆಸ್ ಮೀಟ್ ಮಾಡಿದ್ದಾನಾ? ವಿಡಿಯೋವನ್ನು ಬಿಡುಗಡೆ ಮಾಡಿದವರು ಯಾರು? ಅವನು ದೇವರಾಜೇಗೌಡನ ಕೈಯಲ್ಲಿ ನಾನು ವಿಡಿಯೋ ಕೊಟ್ಟಿದ್ದೇನೆ ಎಂದಿದ್ದಾನೆ. ಕಾರ್ತಿಕ್ ಈಗ ಮಲೆಷ್ಯಾದಲ್ಲಿ ಇದ್ದಾನೆ. ನಿಮಗೆ ವಿಡಿಯೋ ರಿಲೀಸ್ ಮಾಡಿದ್ದು ಎಲ್ಲಿಂದ? ಮೊದಲು ಆತನನ್ನು ಕರೆದುಕೊಂಡು ಬನ್ನಿ ಎಂದು 420 ಬ್ರದರ್ಸ್ ಎಂದು ಕುಮಾರಸ್ವಾಮಿ ಕಿಡಿಕಾರಿದರು. ಇದನ್ನೂ ಓದಿ: ಟಿಎಂಸಿಗಿಂತ ಬಿಜೆಪಿಗೆ ವೋಟ್ ಹಾಕೋದು ಉತ್ತಮ: ಕೈ ನಾಯಕ ಅಧೀರ್ ರಂಜನ್
ಇದೇ ವೇಳೆ ಮಾಧ್ಯಮಗಳ ವಿರುದ್ಧವೇ ಗರಂ ಆದ ಹೆಚ್‌ಡಿಕೆ, ನಮ್ಮ ಮನೆ ಬಳಿ ಯಾಕೆ ಬಂದಿದ್ದೀರಿ. ಅಲ್ಲೂ ಬರ್ತೀರಾ ಇಲ್ಲೂ ಪದೇ ಪದೇ ಬರುತ್ತೀರಿ. ಬೆಳಗ್ಗೆ ಮನೆ ಹತ್ತಿರ ಬಂದಿದ್ದೀರಿ ಈಗ ಮತ್ತೆ ಇಲ್ಲಿ ಬಂದಿದ್ದೀರಿ. ಸಂಪೂರ್ಣವಾಗಿ ನಿನ್ನೆ ಒಂದು ಗಂಟೆ ಹೇಳಿದ್ದೇನೆ. ಮತ್ತೆ ಯಾಕೆ ಬರುತ್ತೀರಿ. ಸುದ್ದಿ ಬೇರೆಯವರು ಕೊಡುತ್ತಿದ್ದಾರೆ. ಅವರ ಬಳಿ ಹೋಗಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.