ಬೆಂಗಳೂರು: ಪತಿ ರೇವಣ್ಣ (HD Revanna) ಅರೆಸ್ಟ್ ಆದ ಬೆನ್ನಲ್ಲೇ ಪತ್ನಿ ಭವಾನಿಗೂ (Bhavani Revanna) ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.
ಮಹಿಳೆಯೊಬ್ಬರ ಅಪಹರಣ (Kidnap) ಪ್ರಕರಣದಲ್ಲಿ ಹೆಚ್‌ಡಿ ರೇವಣ್ಣ ಬಂಧನಕ್ಕೆ ಒಳಗಾಗಿದ್ದಾರೆ. ಭವಾನಿ ರೇವಣ್ಣ ಕರೆಯುತ್ತಿದ್ದಾರೆ ಎಂದು ಹೇಳಿ ತನ್ನ ತಾಯಿಯನ್ನು ಸತೀಶ್ ಬಾಬು ಕರೆದೊಯ್ದಿದ್ದಾನೆ ಎಂದು ಆಕೆಯ ಪುತ್ರ ದೂರು ನೀಡಿದ್ದ. ಇದನ್ನೂ ಓದಿ: ಮಂಗಳೂರಿನಲ್ಲಿ ಇಂದು ಪ್ರಜ್ವಲ್ ರೇವಣ್ಣ ಶರಣಾಗ್ತಾರಾ?
ಈ ಪ್ರಕರಣದಲ್ಲಿ ಈಗಾಗಲೇ ಸತೀಶ್ ಬಾಬು ಮತ್ತು ಹೆಚ್‌ಡಿ ರೇವಣ್ಣ ಬಂಧನಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಭವಾನಿ ಅವರಿಗೆ ನೋಟಿಸ್ ಜಾರಿ ಮಾಡಿ ವಿಶೇಷ ತನಿಖಾ ತಂಡ (SIT) ವಿಚಾರಣೆ ನಡೆಸುವ ಸಾಧ್ಯತೆಯಿದೆ. ಇದನ್ನೂ ಓದಿ: ನಾವು ಇದರಲ್ಲಿ ಮಧ್ಯಪ್ರವೇಶ ಮಾಡಲ್ಲ- ರೇವಣ್ಣ ಬಂಧನಕ್ಕೆ ಸಿಎಂ ಫಸ್ಟ್ ರಿಯಾಕ್ಷನ್
ಸಂತ್ರಸ್ತೆಯ ಹೇಳಿಕೆ ದಾಖಲು ಮಾಡಿದ ಕೂಡಲೇ ತುರ್ತು ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಭವಾನಿಗೆ ರೇವಣ್ಣಗೆ ನೋಟಿಸ್ ನೀಡಲಿದೆ. ಸಂತ್ರಸ್ತೆ ವ್ಯತಿರಿಕ್ತವಾಗಿ ಹೇಳಿಕೆ ನೀಡಿದರೆ ಭವಾನಿಯೂ ಆರೋಪಿಯಾಗುವ ಸಾಧ್ಯತೆಯಿದೆ. ವಿಚಾರಣೆ ಸಂದರ್ಭದಲ್ಲಿ ಸಂತ್ರಸ್ತೆಯ ಹೇಳಿಕೆಯ ಮೇಲೆ ಭವಾನಿ ರೇವಣ್ಣ ಭವಿಷ್ಯ ನಿಂತಿದೆ.