ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದಲ್ಲಿ ಬಹುದೊಡ್ಡ ಬೆಳವಣಿಗೆ ನಡೆದಿದೆ. ಕೋರ್ಟ್‌ನಲ್ಲಿ ಟ್ರಯಲ್ (Trial Court) ಪ್ರಾರಂಭ ಮಾಡಲು ನನ್ನ ಬಳಿ ವಕೀಲರು ಇಲ್ಲ ಎಂದು ಪ್ರಜ್ವಲ್ ರೇವಣ್ಣ (Prajwal Revanna) ಕೋರ್ಟ್‌ಗೆ ತಿಳಿಸಿದ ಬಳಿಕ ನ್ಯಾಯಾಲಯವೇ ಉಚಿತ ಕಾನೂನು ಸೇವೆ ಒದಗಿಸಿದೆ.
ಹೌದು. ಪ್ರಜ್ವಲ್ ಪರ ವಾದಿಸಲು ಉಚಿತ ಕಾನೂನು ನೆರವಿನ ಅಡಿ ವಕೀಲರನ್ನು ಕೋರ್ಟ್ ನೇಮಕ ಮಾಡಿದೆ. ತಮ್ಮ ಪರ ವಾದ ಮಂಡಿಸಲು ವಕೀಲರನ್ನು (Advocate) ನೇಮಿಸಿಕೊಳ್ಳದ ಪ್ರಜ್ವಲ್‌ಗೆ ಸಾಕಷ್ಟು ಸಮಯ ನೀಡಿದರೂ ವಕೀಲ ನಿಯೋಜಿಸಿಕೊಳ್ಳಲಿಲ್ಲ. ಇಂದು (ಏ.29) ವಿಚಾರಣೆ ಪ್ರಾರಂಭ ಆದಾಗ ಇನ್ನೂ ವಕೀಲರು ಸಿಕ್ಕಿಲ್ಲ ಎಂದು ಕೋರ್ಟ್‌ಗೆ ತಿಳಿಸಿದರು. ಅಲ್ಲದೇ ವಕೀಲರ ನೇಮಕಕ್ಕೆ ಸಮಯ ನೀಡುವಂತೆ ಪ್ರಜ್ವಲ್ ಮನವಿ ಮಾಡಿದ್ರು. ಆದ್ರೆ ಪ್ರಜ್ವಲ್ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ. ಇದನ್ನೂ ಓದಿ: Pegasus Case | ದೇಶ ಸ್ಪೈವೇರ್ ಹೊಂದಿರುವುದರಲ್ಲಿ ಯಾವುದೇ ತಪ್ಪಿಲ್ಲ: ಸುಪ್ರೀಂ ಕೋರ್ಟ್
ನಿನ್ನೆ ಕೂಡ ನ್ಯಾಯಾಲಯ ವಕೀಲರ ನೇಮಕಕ್ಕೆ ಕೊನೆಯ ಅವಕಾಶ ನೀಡಿತ್ತು. ಕೋರ್ಟ್ ನೀಡಿದ್ದ ಅವಕಾಶ ಬಳಸಿಕೊಳ್ಳದ ಹಿನ್ನಲೆ ಉಚಿತ ಕಾನೂನು ಸೇವೆ ಅಡಿ ವಕೀಲರನ್ನ ನಿಯೋಜನೆ ಮಾಡಿದೆ. ಆರ್.ಎಸ್ ಜಯಶ್ರೀ, ಪ್ರಜ್ವಲ್ ಪರ ವಾದಕ್ಕೆ ನಿಯೋಜನೆಗೊಂಡಿದ್ದಾರೆ. ಇದನ್ನೂ ಓದಿ: Waqf Act | ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ ಕೇಂದ್ರ – ಅರ್ಜಿಗಳನ್ನು ವಜಾಗೊಳಿಸುವಂತೆ ಮನವಿ
ಇದೇ ವೇಳೆ 2 ತಿಂಗಳಲ್ಲಿ ಟ್ರಯಲ್ ಮುಗಿಸುವುದಾಗಿ ಕೋರ್ಟ್ ಸೂಚಿಸಿದೆ. ಮೇ 2 ರಂದು ಟ್ರಯಲ್ ಪ್ರಾರಂಭ ಮಾಡೋದಾಗಿ ಕೋರ್ಟ್ ಹೇಳಿದೆ. ಇದನ್ನೂ ಓದಿ: ಸ್ವಾತಂತ್ರ್ಯ ಹೋರಾಟಗಾರರನ್ನು ನೀವು ಹೀಗೆ ನಡೆಸಿಕೊಳ್ಳುತ್ತೀರಾ ? – ರಾಹುಲ್‌ಗೆ ಸುಪ್ರೀಂ ತರಾಟೆ