ಹಾಸನ: ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಹೈಕೋರ್ಟ್ (HighCourt) ಆದೇಶ ಹೊರಡಿಸಿದ ಬಳಿಕ ಪ್ರಜ್ಚಲ್ ರೇವಣ್ಣ (Prajwal Revanna) ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಹೊಳೆನರಸೀಪುರದಲ್ಲಿಂದು `ಪಬ್ಲಿಕ್ ಟಿವಿ’ಯೊಂದಿಗೆ ಮಾತನಾಡಿದ ಅವರು, ಇದೆಲ್ಲ ದೇವರ ಪರೀಕ್ಷೆ ಅಷ್ಟೇ. ವಕೀಲರೊಂದಿಗೆ (Lawyer) ಚರ್ಚಿಸಿ ಮುಂದಿನ ಕಾನೂನು ಹೋರಾಟದ ಬಗ್ಗೆ ತೀರ್ಮಾನ ಮಾಡ್ತೀವಿ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. ಇದನ್ನೂ ಓದಿ: ಹೆಚ್.ಡಿ. ರೇವಣ್ಣ ಕುಟುಂಬವನ್ನ ರಾಜಕೀಯದಿಂದ ಶಾಶ್ವತವಾಗಿ ತೆಗೆಯುವುದೇ ನನ್ನ ಗುರಿ: ದೂರುದಾರ ದೇವರಾಜೇಗೌಡ
Advertisement
Advertisement
ಕೋರ್ಟ್ ತೀರ್ಪಿನ ಬಗ್ಗೆ ಮಧ್ಯಾಹ್ನ ಗೊತ್ತಾಯ್ತು, ಕೋರ್ಟ್ ತೀರ್ಪಿಗೆ ಎಲ್ಲರೂ ತಲೆ ಬಾಗಲೇಬೇಕು. ಹಾಗಾಗಿ ಮುಂದೇನು ಮಾಡಬೇಕು ಎಂದು ನನ್ನ ತಂದೆ ಹಾಗೂ ದೇವೇಗೌಡರ (HD Devegowda) ಜೊತೆ ಚರ್ಚೆ ಮಾಡುತ್ತೇನೆ. ಹಲವು ಕಾರಣ ನೀಡಿ ದೂರು ನೀಡಲಾಗಿತ್ತು ಹಾಗಾಗಿ ಯಾವ ಆಧಾರದಲ್ಲಿ ತೀರ್ಪು ಬಂದಿದೆ ನೋಡಬೇಕಾಗುತ್ತೆ. ಈ ಬಗ್ಗೆ ವಕೀಲರ ಜೊತೆಗೂ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಕಾನೂನಾತ್ಮಕವಾಗಿ ಏನು ಮಾಡಬೇಕೋ ಮಾಡೇ ಮಾಡ್ತೇವೆ ಎಂದು ಹೇಳಿದ್ದಾರೆ.
Advertisement
ಹಾಸನ ಚುನಾವಣೆ (Election) ವೇಳೆಯಲ್ಲಿ ಎಲ್ಲ ದಾಖಲೆಗಳನ್ನು ನೀಡಿದ್ದೆವು. ಚುನಾವಣೆ ನಾಮಪತ್ರ ಸಲ್ಲಿಕೆ ನಮಗೆ ಹೊಸದಲ್ಲ. ಹಲವು ಬಾರಿ ಅರ್ಜಿ ಹಾಕಿದ್ದೇವೆ, ಎಲ್ಲ ದಾಖಲೆ ಕೊಟ್ಟಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ನಾಮಪತ್ರದಲ್ಲಿ ಸುಳ್ಳು ಮಾಹಿತಿ – ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅನರ್ಹ
Advertisement
ಮುಂದಿನ 6 ವರ್ಷ ಚುನಾವಣೆಗೆ ನಿಲ್ಲುವ ಹಾಗಿಲ್ಲ ಎಂಬ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಂತಹ ಆದೇಶ ಎಲ್ಲಿ ಬಂದಿದೆ? ಕೇವಲ ಸದಸ್ಯತ್ವ ಅಸಿಂಧುಗೊಳಿಸಲಾಗಿದೆ ಅಷ್ಟೇ. ಮುಂದೆ ಎಲ್ಲೆಲ್ಲಿ ಹೋಗಿ ವಕೀಲರ ಭೇಟಿ ಮಾಡಬೇಕೊ ಮಾಡ್ತಿವಿ. 6 ವರ್ಷ ನಿಲ್ಲುವ ಹಾಗಿಲ್ಲ ಎಂದು ಎಲ್ಲಿ ಹೇಳಿದ್ದಾರೆ? ಇದೆಲ್ಲವೂ ಊಹಾಪೋಹ. ವಕೀಲರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ಇದೆಲ್ಲಾ ದೇವರ ಪರೀಕ್ಷೆ ಅಷ್ಟೇ, ಮುಂದೆ ಏನೇನಾಗುತ್ತೆ ನೋಡೋಣ ಯಾಕೆ ತಲೆಕೆಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಹೈಕೋರ್ಟ್ ತೀರ್ಪಿನಲ್ಲಿ ಏನಿದೆ ಎಂಬುದನ್ನ ನಮ್ಮ ವಕೀಲರು ಹಾಗೂ ನಮ್ಮ ವರಿಷ್ಠರು ದೇವೇಗೌಡರು ಮತ್ತು ರೇವಣ್ಣ ಅವರೊಂದಿಗೆ ಇಂದು ಚರ್ಚೆ ಮಾಡಿ ಮುಂದಿನ ಕಾನೂನು ಹೋರಾಟಕ್ಕೆ ತೀರ್ಮಾನ ಮಾಡುತ್ತೇವೆ. ಈ ತಿರ್ಪೀನಿಂದ ನಾನು ಕ್ಷೇತ್ರದಲ್ಲಿ ಎಂದಿನಂತೆ ಕೆಲಸ ಮಾಡಬಹುದು. ಬೆಂಬಲಿಗರು, ಕ್ಷೇತ್ರದ ಜನರು ಅತಂಕ ಪಡುವ ಅವಶ್ಯಕತೆಯಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.
Web Stories