ಮೊದಲನೇ ಬಾರಿಗೆ ನನ್ನ ಅಣ್ಣನಿಗೆ ವೋಟು ಹಾಕುತ್ತಿರೊದ್ರಿಂದ ಒಳ್ಳೆಯ ನಂಬರ್‌ನಲ್ಲಿ ವೋಟು ಹಾಕ್ದೆ ಅಷ್ಟೇ: ಪ್ರಜ್ವಲ್ ರೇವಣ್ಣ

Public TV
1 Min Read
Prajwal Revanna

ಹಾಸನ: ಮತದಾನ ಮಾಡಲು ಆಗಮಿಸಿದ ತಮ್ಮ ಪುತ್ರ, ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಒಂಬತ್ತನೆಯವರಾಗಿ ಮತ ಚಲಾಯಿಸುವಂತೆ ರೇವಣ್ಣ ಸೂಚಿಸಿದ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರದ, ಪುರಸಭೆಯಲ್ಲಿ ನಡೆದಿದೆ.

Prajwal Revanna 1

ಎಂಎಲ್‍ಸಿ ಚುನಾವಣೆಗೆ ಪುರಸಭೆಯಲ್ಲಿ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ರೇವಣ್ಣ ಅದಾಗಲೇ ಬಂದು ಮತ ಚಲಾಯಿಸಿದ್ದಾರೆ. ಇದೇ ವೇಳೆ ಸಂಸದ ಪ್ರಜ್ವಲ್ ರೇವಣ್ಣ ಆಗಮಿಸಿದ್ದರು. ಆಗ ಹೆಚ್‍ಡಿ.ರೇವಣ್ಣ ಏಳು ಆಗಿದೆಯಾ, ಎಂಟು ಆಗಿದೆಯಾ, ಪ್ರಜ್ವಲ್‍ಗೆ ೯ನೇಯವರಾಗಿ ಮತ ಚಲಾಯಿಸಲು ಅವಕಾಶ ಕೊಡಿ ಎಂದು ಸೂಚಿಸಿದ್ದಾರೆ. ನಂತರ   ಪ್ರಜ್ವಲ್ ರೇವಣ್ಣ ಮತ ಚಲಾಯಿಸಿದರು. ಇದನ್ನೂ ಓದಿ: ಐರಾಗೆ ಹುಟ್ಟುಹಬ್ಬದ ಸಂಭ್ರಮ – ನಿನ್ನ ಕೈ ಹಿಡಿಯಲು ಯಾವಾಗಲೂ ಇರುತ್ತೇನೆ ಅಂದ ರಾಧಿಕಾ

vote

ಈ ಬಗ್ಗೆ ಪ್ರತಿಕ್ರಿಯಿಸಿದ ಹೆಚ್‍ಡಿ.ರೇವಣ್ಣ ಒಂಬತ್ತು ಲಕ್ಕಿ ನಂಬರೋ ಏನೋ ಗೊತ್ತಿಲ್ಲ. ಒಂಬತ್ತನೇ ಮತದಾರನಾಗಿ ವೋಟು ಹಾಕ್ತೀನಿ ಅಂದಿದ್ದರು, ಹಾಕಪ್ಪ ಅಂದೆ ಎಂದು ತಿಳಿಸಿದೆ. ಈ ಬಗ್ಗೆ ನಂತರ ಮಾತನಾಡಿದ ಪ್ರಜ್ವಲ್ ರೇವಣ್ಣ, ಮೊದಲಿನಿಂದಲೂ ಐದು, ಒಂಭತ್ತು ನಮಗೆ ಲಕ್ಕಿ ನಂಬರ್. ನಂಬರ್ ನಂಬೋದು ಪ್ರಶ್ನೆ ಅಲ್ಲಾ. ಆದರೆ ಎಲ್ಲರಿಗೂ ಒಂಭತ್ತು ಒಳ್ಳೆಯ ಸಂಖ್ಯೆ ಅಷ್ಟೇ. ಮೊದಲನೇ ಭಾರಿಗೆ ನನ್ನ ಅಣ್ಣನಿಗೆ ವೋಟು ಹಾಕುತ್ತಿರುವುದರಿಂದ ಒಳ್ಳೆಯ ನಂಬರ್‌ನಲ್ಲಿ ವೋಟು ಹಾಕಿದ್ದೇನೆ ಅಷ್ಟೇ. ಐದು ನನ್ನ ಹುಟ್ಟಿದಹಬ್ಬ, ನಾನು ಹುಟ್ಟಿದ ದಿನ ಒಳ್ಳೆಯ ದಿನ ಅಂಥಾ ನಾನು ಭಾವಿಸುತ್ತೇನೆ. ಅದರಲ್ಲಿ ಯಾವ ಮೂಢನಂಬಿಕೆ ಏನಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಫೋಟೋ ತೆಗೆಯುವಾಗ ಪುರುಷರು ಯಾಕೆ ತುಂಬಾ ಕಷ್ಟಪಡುತ್ತಾರೆ?: ರಾಧಿಕಾ ಪಂಡಿತ್

Share This Article