ಹಾಸನ: ಒಂದು ಕುಟುಂಬದಿಂದ ಒಬ್ಬರೇ ಚುನಾವಣೆಗೆ (Election) ನಿಲ್ಲುವಂತೆ ಕಾನೂನು ಮಾಡಲಿ, ನಾನು ಈಗಲೇ ಪ್ರಜ್ವಲ್ ರೇವಣ್ಣ (Prajwal Revanna) ಹಾಗೂ ಸೂರಜ್ ರೇವಣ್ಣಗೆ (Suraj Revanna) ರಾಜೀನಾಮೆ ಕೊಡಿಸ್ತೀನಿ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಹೇಳಿದ್ದಾರೆ.
ಹೊಳೆನರಸೀಪುರದ ತಮ್ಮ ನಿವಾಸದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಂದು ಕುಟುಂಬದಿಂದ ಒಬ್ಬರೇ ನಿಲ್ಲುವಂತೆ ಕಾನೂನು ಮಾಡಲಿ ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿಯನ್ನು ಬಿಟ್ಟು ನಾನು ಏನೂ ಮಾಡಲ್ಲ – ಟಿಕೆಟ್ ದಂಗಲ್ ಬಗ್ಗೆ ಮೌನ ಮುರಿದ ರೇವಣ್ಣ
ಪ್ರಜ್ವಲ್ ಹೇಳಿದ್ರೂ ಅಷ್ಟೇ, ರೇವಣ್ಣ ಹೇಳಿದ್ರೂ ಅಷ್ಟೇ ನಮ್ಮ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮವಾಗಿ ತೀರ್ಮಾನ ಮಾಡೋದು ದೇವೇಗೌಡರು (HD Devegowda), ಕುಮಾರಸ್ವಾಮಿ (HD Kumaraswamy), ಇಬ್ರಾಹಿಂ. ನಾನು ರಾಷ್ಟ್ರೀಯ ಪಕ್ಷಗಳಿಗೆ ಹೇಳ್ತೀನಿ, ನಿಮ್ಮ ಕುಟುಂಬದಲ್ಲೂ ಯಾರನ್ನು ನಿಲ್ಲಿಸೋದು ಬೇಡ. ಬೇಕಿದ್ದರೆ ಒಂದು ಕುಟುಂಬದಿಂದ ಒಬ್ಬರೇ ನಿಲ್ಲುವಂತೆ ಕಾನೂನು ಮಾಡಲಿ, ನಾನು ಈಗಲೇ ಸೂರಜ್, ಪ್ರಜ್ಬಲ್ ರೇವಣ್ಣ ರಾಜೀನಾಮೆ ಕೊಡಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದಂತೆ ತೀರ್ಮಾನ ಮಾಡಿದ್ದೇನೆ: ಬಿಎಸ್ವೈ
ಕುಮಾರಣ್ಣನ ಮಗ ರಾಮನಗರದಲ್ಲಿ (Ramanagara) ಸ್ವಂತ ಶಕ್ತಿ ಮೇಲೆ ಗೆಲ್ತಾನೆ, ಅವರ ಪತ್ನಿ ಚನ್ನಪಟ್ಟಣದಲ್ಲಿ ಸ್ವಂತ ಶಕ್ತಿಯಿಂದ ಗೆಲ್ತಾರೆ. ನಾನು ಬದುಕಿರುವವರೆಗೂ ಕುಮಾರಸ್ವಾಮಿ, ರೇವಣ್ಣ ಹೊಡೆದಾಡುವ ಪ್ರಶ್ನೆಯೇ ಇಲ್ಲಾ. ದೇವೇಗೌಡರು, ಕುಮಾರಸ್ವಾಮಿ, ಇಬ್ರಾಹಿಂ ಹಾಗೂ ಜಿಲ್ಲೆಯ ಶಾಸಕರು, ಕಾರ್ಯಕರ್ತರು ಕುಳಿತು ಚರ್ಚಿಸಿ ಅಭ್ಯರ್ಥಿ ಬಗ್ಗೆ ತೀರ್ಮಾನ ಮಾಡ್ತಾರೆ ಎಂದು ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k