– ಹೊಂದಾಣಿಕೆ ಅಷ್ಟೇ ಸಮರ್ಥನೆಯಿಲ್ಲ, ಸಹಾಯವೂ ಇಲ್ಲ ಎಂದಿತಾ ಹೈಕಮಾಂಡ್?
– ಮಹಿಳೆಯರಿಗೆ ಅನ್ಯಾಯ ಆಗೋದನ್ನು ಬಿಜೆಪಿ ಸಹಿಸಲ್ಲ: ಅಮಿತ್ ಶಾ
ಬೆಂಗಳೂರು: ಸದ್ಯ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ (Prajwal Pendrive Case) ದೇಶವ್ಯಾಪಿಯಾಗಿ ಸದ್ದು ಮಾಡುತ್ತಿದೆ. ಈ ನಡುವೆ ಕಾನೂನು ಮೀರದಂತೆ ಬಿಜೆಪಿ ಹೈಕಮಾಂಡ್‌ನಿಂದ (BJP Highcommand) ಖಡಕ್ ಸಂದೇಶ ರವಾನೆಯಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
Advertisement
ಹೌದು. ಎಸ್‌ಐಟಿ ವಿಚಾರಣೆ (SIT Investigation) ಎದುರಿಸಿ, ಕಾನೂನು ಹೋರಾಟ ಮಾಡಿಕೊಳ್ಳಿ, ಮೊದಲು ವಿದೇಶದಿಂದ ಪ್ರಜ್ವಲ್‌ರನ್ನ ವಾಪಸ್ ಕರೆಸಿಕೊಳ್ಳಿ ಎಂದು ಜೆಡಿಎಸ್ ವರಿಷ್ಠರಿಗೆ (JDS Leaders) ಸಂದೇಶ ನೀಡಲಾಗಿದೆ. ರಾಜಕೀಯ ಹೊಂದಾಣಿಕೆ ಅಷ್ಟೇ.. ಸಮರ್ಥನೆಯೂ ಇಲ್ಲ.. ಸಹಾಯವೂ ಇಲ್ಲ ಎಂದು ಬಿಜೆಪಿ ಹೈಕಮಾಂಡ್ ಕಟ್ಟುನಿಟ್ಟಿನ ವಾರ್ನಿಂಗ್ ನೀಡಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಪ್ರಜ್ವಲ್ ಪೆನ್‍ಡ್ರೈವ್ ಕೇಸ್- SIT ಮುಂದೆ ಸಂತ್ರಸ್ತೆಯರು ಕಣ್ಣೀರು
Advertisement
Advertisement
ಬಿಜೆಪಿ ಹೈಕಮಾಂಡ್ ಸಂದೇಶದ ಬೆನ್ನಲ್ಲೇ ಕಾನೂನು ಹೋರಾಟಕ್ಕೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಸಜ್ಜಾಗುತ್ತಿದ್ದಾರೆ, ಕಾನೂನು ಹೋರಾಟದ ಬಗ್ಗೆ ದೇವೇಗೌಡರ ಜೊತೆ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಶೀಘ್ರದಲ್ಲೇ ವಿದೇಶದಿಂದ ಪುತ್ರನ ಕರೆಸಿಕೊಳ್ಳಲು ನಿರ್ಧಾರ ಮಾಡಿರುವ ರೇವಣ್ಣ, ವಕೀಲರ ತಂಡದೊಂದಿಗೂ ಚರ್ಚೆ ಮಾಡಿದ್ದಾರೆ. ಎಸ್‌ಐಟಿ ವಿಚಾರಣೆಗೆ ಹಾಜರಾಗುವ ಮುನ್ನ ಕೋರ್ಟ್ ಮೊರೆ ಹೋಗುವ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ – ಹಾಸ್ಯನಟ ಶ್ಯಾಮ್ ರಂಗೀಲಾ
Advertisement
ಅಮಿತ್ ಶಾ ಹೇಳಿದ್ದೇನು?
ಚುನಾವಣಾ ಪ್ರಚಾರಕ್ಕೆ ರಾಜ್ಯಕ್ಕೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ನಾವು ಚುನಾವಣೆಗಾಗಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ಆದರೆ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಯಾವುದೇ ಮಹಿಳೆಗೂ ಅನ್ಯಾಯವಾಗಲು ಬಿಜೆಪಿ ಬಿಡುವುದಿಲ್ಲ. ಸರ್ಕಾರ ನಿಮ್ಮದು, ಕ್ರಮ ತಗೆದುಕೊಳ್ಳಬೇಕಾದವರು ನೀವು. ಒಕ್ಕಲಿಗರ ಪ್ರದೇಶ ಮತದಾನ ಆಗುವವರೆಗೂ ಸುಮ್ಮನೆಯಿದ್ದು, ಎಲ್ಲವೂ ಗೊತ್ತಿದ್ದು, ಯಾವುದೇ ಕ್ರಮಕ್ಕೂ ಮುಂದಾಗದೇ, ರಾಜಕೀಯ ಉದ್ದೇಶಕ್ಕಾಗಿ ಸುಮ್ಮನಿದ್ದು, ಅವರಿಗೆ ಓಡಲು ಅವಕಾಶ ಮಾಡಿಕೊಟ್ಟವರು ನೀವು. ನಿಮಗೆ ಧೈರ್ಯವಿದ್ದರೆ ಜನರಿಗೆ ತಿಳಿಸಿ. ನಿಮ್ಮ ತಪ್ಪಿನಿಂದಾಗಿ ಮಹಾ ಅಪರಾಧವಾಗಿದೆ. ನಮ್ಮ ನಿಲುವು ಸ್ಪಷ್ಟವಾಗಿದೆ. ಈ ರೀತಿಯ ಅಪರಾಧ ಮಾಡಿದವರಿಗೆ ಕಠಿಣಾಧಿಕಠಿಣ ಶಿಕ್ಷೆ ನೀಡಬೇಕು. ನಮ್ಮ ಮೇಲೆ ನೀವು ಆರೋಪ ಮಾಡುತ್ತೀರಾ ಎಂದು ಸಿಎಂ ಹಾಗೂ ಡಿಸಿಎಂ ವಿರುದ್ಧ ಹರಿಹಾಯ್ದಿದ್ದರು.