Prajwal Pendrive Case – ಜಾಮೀನು ಅರ್ಜಿ ವಜಾಗೊಂಡರೂ ಮೊದಲ ಐವರು ಆರೋಪಿಗಳ ಬಂಧನವಾಗಿಲ್ಲ

Public TV
1 Min Read
Prajwal Revanna

– ಎಸ್‍ಐಟಿ ನಡೆಗೆ ಜೆಡಿಎಸ್ ಆಕ್ರೋಶ

ಹಾಸನ: ಸಂಸದ ಪ್ರಜ್ವಲ್ ರೇವಣ್ಣ (Prajwal Revanna Pendrive Case) ಅವರದ್ದು ಎನ್ನಲಾದ ಅಶ್ಲೀಲ ವೀಡಿಯೋಗಳ ಪೆನ್‍ಡ್ರೈವ್ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ನಡೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಹಾಸನದ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾದ 33/2024 ಪ್ರಕರಣಕ್ಕೆ ಹೊಸ ಹೆಸರು ಸೇರಿಸಿ ಇಬ್ಬರನ್ನು ಬಂಧಿಸಲಾಗಿದೆ. 6 ಮತ್ತು 7 ನೇ ಆರೋಪಿಗಳಾಗಿ ಚೇತನ್ ಹಾಗೂ ಲಿಖಿತ್ ಬಂಧನ ಮಾಡಲಾಗಿದೆ. 6 ಮತ್ತು 7ನೇ ಆರೋಪಿ ಬಂಧನವಾದರೂ ಮೊದಲ ಐವರು ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ.

pendrive case accused

ಕಾಂಗ್ರೆಸ್ ಕಾರ್ಯಕರ್ತರಾದ ನವೀನ್ ಗೌಡ, ಚೇತನ್ ಹಾಗೂ ಪುಟ್ಟಿ ಆಲಿಯಾಸ್ ಪುಟ್ಟರಾಜ್‍ರನ್ನ ಎಸ್‍ಐಟಿ ಅಧಿಕಾರಿಗಳು ಈವರೆಗೂ ಬಂಧಿಸಿಲ್ಲ. ಅಲ್ಲದೇ ಪೆನ್‍ಡ್ರೈವ್ ಹೊಂದಿದ್ದ ಮೂಲ ವ್ಯಕ್ತಿಯಗಿರುವ ಸಂಸದನ ಮಾಜಿ ಕಾರು ಚಾಲಕನನ್ನೂ ಕೂಡ ತನಿಖಾ ತಂಡ ವಶಕ್ಕೆ ಪಡೆಯದೇ ಇರುವುದು ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಟ್ವಿಸ್ಟ್; ಪ್ರೀತಂ ಗೌಡ ಆಪ್ತ ಸೇರಿ ಇಬ್ಬರು ಎಸ್‌ಐಟಿ ವಶಕ್ಕೆ

ಮಾಜಿ ಶಾಸಕ ಪ್ರೀತಂಗೌಡ (MLA Preetham Gowda) ಅತ್ಯಾಪ್ತ ಶರತ್ ಆಲಿಯಾಸ್ ಕ್ವಾಲಿಟಿ ಬಾರ್ ಶರತ್ ಕೂಡ ಇದೇ ಪ್ರಕರಣದಲ್ಲಿ ಆರೊಪಿಯಾಗಿದ್ದಾರೆ. ಹಾಸನದ ಮೂರನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಕಾರ್ತಿಕ್, ಚೇತನ್, ನವೀನ್ ಗೌಡ ಹಾಗೂ ಪುಟ್ಟರಾಜ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿದೆ. ಇವರುಗಳ ಜಾಮೀನು ಅರ್ಜಿ ವಜಾಗೊಂಡರೂ ಬಂಧನ ಮಾತ್ರ ಆಗಿಲ್ಲ. ಈಗಾಗಲೇ ಎಸ್‍ಐಟಿ ಎಲ್ಲಾ ಆರೋಪಿಗಳ ಮನೆ ಶೋಧ ನಡೆಸಿದೆ. ಇಷ್ಟಾದರೂ ವೀಡಿಯೋ ವೈರಲ್ ಆರೋಪದ ಆರೋಪಿಗಳನ್ನು ಎಸ್‍ಐಟಿ ಬಂಧಿಸಿದೇ ಅಚ್ಚರಿ ಮೂಡಿಸಿದೆ.

ಎಫ್‍ಐಆರ್ ನಲ್ಲಿ ಹೆಸರಿದ್ದ ಐವರು ಆರೋಪಿಗಳ ಬಂಧನವಾಗದಿರುವ ಬಗ್ಗೆ ಜೆಡಿಎಸ್ ನಾಯಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಈ ಹಿಂದೆಯೇ ಐವರು ಆರೋಪಿಗಳ ಬಂಧನಕ್ಕೆ ಜೆಡಿಎಸ್ ಆಗ್ರಹಿಸಿತ್ತು. ಪ್ರಕರಣದ ತನಿಖೆ ಚುರುಕುಗೊಂಡರೂ ಆರೋಪಿಗಳ ಬಂಧನವಾಗದಿರುವ ಬಗ್ಗೆ ಚರ್ಚೆ ಶುರುವಾಗಿದೆ.

Share This Article