ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ವಿಭಿನ್ನ ರೀತಿಯ ಸಿನಿಮಾಗಳನ್ನ ಆಯ್ಕೆ ಮಾಡಿಕೊಳ್ತಿದ್ದಾರೆ. ಇದೇ ಮೊದಲ ಬಾರಿಗೆ ಪ್ರಜ್ವಲ್ ದೇವರಾಜ್ ಹಾರರ್ ಸಿನಿಮಾದಲ್ಲಿ ಕಾಣಿಸಿಕೊಳ್ತಿದ್ದಾರೆ. ಹಾರರ್ ಸಿನಿಮಾ ಮೂಲಕವೇ ಪ್ರಖ್ಯಾತಿ ಗಳಿಸಿರುವ ನಿರ್ದೇಶಕ ಲೋಹಿತ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
‘ರಾಕ್ಷಸ’ (Rakshasa Film) ಸಿನಿಮಾ ಮೂಲಕ ಪ್ರಜ್ವಲ್ ದೇವರಾಜ್ ಹಾಗೂ ಲೋಹಿತ್ ಹೊಸ ದಾಖಲೆ ಬರೆಯಲು ಸಿದ್ಧರಾಗಿದ್ದಾರೆ. ಹೊಸ ಕಥೆ ಹೊತ್ತು ಪ್ರಜ್ವಲ್ ದೇವರಾಜ್ ಜೊತೆ ಲೋಹಿತ್ ಮುಂದೆ ಬಂದಿದ್ದಾರೆ. ಇದನ್ನೂ ಓದಿ:ಶೀಘ್ರದಲ್ಲೇ ‘ಬಿಗ್ ಬಾಸ್’ ಶೋ ಶುರು- ಸ್ಪರ್ಧಿಗಳ ಲಿಸ್ಟ್ ಔಟ್
View this post on Instagram
ದೀಪು ಬಿ ಎಸ್ ಮತ್ತು ನವೀನ್ ಗೌಡ ಹಾಗೂ ಮಾನಸ ಜಂಟಿಯಾಗಿ ‘ರಾಕ್ಷಸ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾಗೆ ನೋಬಿನ್ ಪೌಲ್ ಸಂಗೀತ ನಿರ್ದೇಶನ ಮಾಡಿದ್ದು, ಜೇಬಿನ್ ಪಿ ಜೋಕಬ್ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಸುಮಾರು 55 ದಿನಗಳ ಕಾಲ ‘ರಾಕ್ಷಸ’ ಸಿನಿಮಾ ಚಿತ್ರೀಕರಣ ಮಾಡಲಾಗಿದ್ದು, ಸಂಪೂರ್ಣ ಸಿನಿಮಾ ಚಿತ್ರೀಕರಣ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಮಾಡಿರೋದು ವಿಶೇಷ.
ಪ್ರಜ್ವಲ್ ಜೊತೆ ಅರುಣ್ ರಾಥೋಡ್, ಶ್ರೀಧರ್,ಗೌತಮ್, ಸೋಮಶೇಖರ್, ವಿಹಾನ್ ಕೃಷ್ಣ ಜಯಂತ್ ಇನ್ನು ಅನೇಕರು ಅಭಿನಯಿಸಿದ್ದಾರೆ. ಪ್ರಜ್ವಲ್ ಹುಟ್ಟುಹಬ್ಬದ ವಿಶೇಷವಾಗಿ ಫಸ್ಟ್ ಲುಕ್ ಬಿಡುಗಡೆ ಮಾಡಿದೆ ಚಿತ್ರತಂಡ. ಇಷ್ಟು ದಿನಗಳ ಕಾಲ ಕಮರ್ಷಿಯಲ್ ಚಿತ್ರಗಳಲ್ಲಿ ಕಾಣಿಸಿಕೊಳ್ತಿದ್ದ ಪ್ರಜ್ವಲ್ ಇದೇ ಮೊದಲ ಬಾರಿಗೆ ವಿಭಿನ್ನವಾಗಿ ಹಾರರ್ ಲುಕ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.