ಪ್ರಜ್ವಲ್ ದೇವರಾಜ್ (Prajwal Devaraj) ನಟನೆಯ ವಿಭಿನ್ನ ಕಥಾಹಂದರವಿರುವ ಸಿನಿಮಾ `ಕರಾವಳಿ’ (Karavali Cinema). ಈ ಚಿತ್ರದ ವಿಶೇಷ ದೃಶ್ಯದ ಶೂಟಿಂಗ್ ಅನ್ನು ಬೆಂಗಳೂರಿನ ಹೊರವಲಯದಲ್ಲಿ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆ. ಈ ವೇಳೆ ನಾಯಕ ಪ್ರಜ್ವಲ್ ದೇವರಾಜ್, ನಾಯಕಿ ಸಂಪದಾ, ನಟ ಮಿತ್ರ, ಶ್ರೀಧರ್, ನಿರ್ದೇಶಕ ರವಿ ಗಾಣಿಗ ಸೇರಿ ಇಡೀ ಚಿತ್ರತಂಡ ಹಾಜರಿತ್ತು. ಕರಾವಳಿ ಸಿನಿಮಾದ ವಿಶೇಷ ದೃಶ್ಯದ ಶೂಟಿಂಗ್ ವೇಳೆ ʻಪಬ್ಲಿಕ್ ಟಿವಿʼ (Public TV) ಜೊತೆ ನಟ ಪ್ರಜ್ವಲ್ ದೇವರಾಜ್ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ.
ʻಕರಾವಳಿʼ ಸಿನಿಮಾದ ಶೂಟಿಂಗ್ ಅನ್ನು ಕರಾವಳಿ ಭಾಗದಲ್ಲೇ 99 ಭಾಗದ ಚಿತ್ರೀಕರಣ ಮಾಡಲಾಗಿದೆ. ಇದೊಂದು ಸೀನ್ ಮಾತ್ರ ಬೆಂಗಳೂರಿನಲ್ಲಿ (Bengaluru) ಮಾಡ್ತಿದ್ದೀವಿ. ಕರಾವಳಿ ಸಿನಿಮಾ ನನ್ನ ಕರಿಯರ್‌ನಲ್ಲೇ ಫಿಸಿಕಲಿ ಮೆಂಟಲಿ ಸ್ಟ್ರೇನಿಂಗ್ ಕ್ಯಾರೆಕ್ಟರ್. ಸಿನಿಮಾ ಶೂಟಿಂಗ್ ವೇಳೆ ಸಾಕಷ್ಟು ಇಂಜುರಿ.. ಬ್ರೇಕ್ಸ್.. ಕಟ್ಸ್ ಆಯ್ತು ಸರಿ ಮಾಡ್ಕೊಂಡು ಚಿತ್ರೀಕರಣ ಮಾಡಿದ್ದೇವೆ. ತುಂಬಾ ಇಷ್ಟಪಟ್ಟು ಕಷ್ಟಪಟ್ಟು ಮಾಡಿದ ಸಿನಿಮಾ ಕರಾವಳಿಯಾಗಿದೆ. ಅಮ್ಮ ನನ್ನ ಯಾವುದೇ ಶೂಟಿಂಗ್ ಇದ್ದಾಗಲೂ ಸೆಟ್‌ಗೆ ಬರುತ್ತಿದ್ದರು. ಆದರೆ ಈಗ ಅಮ್ಮನಿಗೆ ಹುಷಾರಿಲ್ಲ ಹಾಗಾಗಿ ಅಮ್ಮನಿಗಾಗಿ ಕೆಲ ದೃಶ್ಯಗಳನ್ನ ತಗೊಂಡು ಹೋಗಿ ತೋರಿಸಿದೆ. ಈ ಸಿನಿಮಾದ ಕೆಲವು ದೃಶ್ಯ ನೋಡಿ ಶಾಕ್ ಆದ್ರು. ಅಮ್ಮ ಪ್ರಸಂಶೆ ಕೊಟ್ಟಿದ್ದಾರೆ. ಅಷ್ಟೇ ಸಾಕು ಎನ್ನಿಸಿತು ಎಂದಿದ್ದಾರೆ ನಟ ಪ್ರಜ್ವಲ್ ದೇವರಾಜ್.
ಇಂತಹ ವಿಭಿನ್ನ ಸಿನಿಮಾ ಮಾಡಬೇಕಾದಾಗ ಟೈಂ ತೆಗೆದುಕೊಳ್ಳುತ್ತೆ. ಈ ಸಿನಿಮಾದಲ್ಲಿ ಡಿಫರೆಂಟ್ ಶೇಡ್ಸ್ ಇವೆ. ಸಿನಿಮಾದ ಪಾತ್ರಕ್ಕಾಗಿ ಸಾಕಷ್ಟು ತಯಾರಿಯನ್ನ ಮೊದಲೇ ಮಾಡಿಕೊಂಡಿದ್ದೆ. ರಾಜ್ ಬಿ ಶೆಟ್ಟಿಯವರ (Raj B Shetty) ಜೊತೆ ಅಭಿನಯ ಮಾಡಿದ್ದು ಖುಷಿಕೊಟ್ಟಿದೆ. ಅವರಿಗೆ ಸಿನಿಮಾ ಮೇಲಿರುವ ಪ್ರೀತಿ ನೋಡಿದ್ರೆ ತುಂಬಾ ಖುಷಿ ಅನ್ನಿಸುತ್ತೆ. ಈ ಸಿನಿಮಾವನ್ನ ಕನ್ನಡದ ಜನರಿಗಾಗಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಅದಾಗಿಯೇ ಬೇರೆ ಭಾಷೆಗೆ ಡಿಮ್ಯಾಂಡ್ ಬಂದಾಗ ಮಾಡುವ ಪ್ರಯತ್ನ ಮಾಡುತ್ತೇವೆ. ಆದರೆ ನಮ್ಮ ಉದ್ದೇಶ ನಮ್ಮ ಪ್ರಾದೇಶಿಕ ಜನರಿಗೆ ಈ ಸಿನಿಮಾವನ್ನ ತಲುಪಿಸಬೇಕು ಎಂದಿದ್ದಾರೆ ಡೈನಾಮಿಕ್ ಪ್ರಿನ್ಸ್.
ಪ್ರಜ್ವಲ್ ಸಿನಿಮಾ ಜರ್ನಿಯಲ್ಲೇ ಈ ಸಿನಿಮಾ ತುಂಬಾ ಸ್ಪೆಷಲ್ ಅಂತಾ ಹೇಳಲಾಗ್ತಿದೆ. ಇನ್ನು ಇಡೀ ಚಿತ್ರತಂಡ ಮಾತನಾಡಿ, ತಮ್ಮ ಶೂಟಿಂಗ್ ಅನುಭವ ಹಂಚಿಕೊಂಡಿದೆ. ಸದ್ಯ ಶೂಟಿಂಗ್ ಕಂಪ್ಲೀಟ್ ಮಾಡಿರುವ ಕರಾವಳಿ ಈ ವರ್ಷದ ಕೊನೆಯಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.