ಲೋಹಿತ್ ನಿರ್ದೇಶನದಲ್ಲಿ ‘ರಾಕ್ಷಸ’ನಾದ ಪ್ರಜ್ವಲ್ ದೇವರಾಜ್

Public TV
2 Min Read
Rakshasa

‘ಮಮ್ಮಿ’ ಖ್ಯಾತಿಯ ನಿರ್ದೇಶಕ ಲೋಹಿತ್ (Lohit) ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಕ್ಯಾಪ್ಚರ್ ಮತ್ತು ಮಾಫಿಯಾ ಸಿನಿಮಾ ಮೂಲಕ ಸದ್ದು ಮಾಡುತ್ತಿರುವ ಲೋಹಿತ್ ಈ ಎರಡು ಸಿನಿಮಗಳಿ ರಿಲೀಸ್ ಗೂ ಮೊದಲೇ ಇದೀಗ ಮತ್ತೊಂದು ಸಿನಿಮಾ ಅನೌನ್ಸ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

prajwal devaraj 2

ಸ್ಯಾಂಡಲ್ ವುಡ್ ನ ಬ್ಯುಸಿಯಸ್ಟ್ ನಿರ್ದೇಶಕರಲ್ಲಿ ಒಬ್ಬರಾಗಿರುವ ಲೋಹಿತ್ ಇದೀಗ ಮತ್ತೊಂದು ಹೊಸ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಕನ್ನಡ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ. ಲೋಹಿತ್ ಹೊಸ ಸಿನಿಮಾಗೆ ‘ರಾಕ್ಷಸ’ ಎಂದು ಹೆಸರಿಡಲಾಗಿದೆ.  ಸಂಕ್ರಾಂತಿಯ ಮೊನ್ನ ದಿನ ‘ರಾಕ್ಷಸ’ (Rakshasa) ಸಿನಿಮಾದ ಫಸ್ಟ್ ಲುಕ್ ರಿವೀಲ್  ಮಾಡಿ ಕುತೂಹಲ ಹೆಚ್ಚಿಸಿದ್ದಾರೆ.

prajwal devaraj 3

ಅಂದಹಾಗೆ ‘ರಾಕ್ಷಸ’ನಾಗಿ ಸ್ಯಾಂಡಲ್ ವುಡ್ ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ಕಾಣಿಸಿಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ಪ್ರಜ್ವಲ್ ದೇವರಾಜ್ ಗನ್ ಹಿಡಿದಿದ್ದಾರೆ. ಪುಟ್ಟ ಮಗು ಪ್ರಜ್ವಲ್ ಕೈ ಬೆರಳನ್ನು ಹಿಡಿದಿದ್ದಾರೆ. ಇನ್ನೂ ಕೈಯಲ್ಲಿ ಇರುವ ಟ್ಯಾಟೂ ಗಮನ ಸೆಳೆಯುತ್ತಿದೆ.

Prajwal Devaraj

ಈಗಾಗಲೇ ಪ್ರಜ್ವಲ್ ಜೊತೆ ‘ಮಾಫಿಯಾ’ ಸಿನಿಮಾ ಮಾಡಿರುವ ಲೋಹಿತ್ ಆ ಸಿನಿಮಾ ರಿಲೀಸ್ ಗೂ ಮೊದಲೇ ಇದೀಗ ‘ರಾಕ್ಷಸ’ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ರಾಕ್ಷಸ ಸಿನಿಮಾದ ಫಸ್ಟ್ ಲುಕ್ ಅನ್ನು  ವಿಭಿನ್ನವಾಗಿ ರಿಲೀಸ್ ಮಾಡಲಾಯಿತು. ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕರು ‘ರಾಕ್ಷಸ’ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಚಿತ್ರಕ್ಕೆ ಶುಭ ಹಾರೈಸಿದರು. ಅಂದಹಾಗೆ ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ 40 ಜನ ನಿರ್ದೇಶಕರು ‘ರಾಕ್ಷಸ’ ಸಿನಿಮಾದ ಮೊದಲ ನೋಟ ಬಿಡುಗಡೆ ಮಾಡಿರುವು ವಿಶೇಷ. ಈ ಮೂಲಕ ಲೋಹಿತ್ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದರು.

ಇನ್ನೂ ರಾಕ್ಷಸನ ಬಗ್ಗೆ ಹೆಚ್ಚು ಮಾಹಿತಿ ಬಿಟ್ಟುಕೊಡದ ನಿರ್ದೇಶಕ ಲೋಹಿತ್ ಕೇವಲ ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕವೇ ಕುತೂಹಲ ಹೆಚ್ಚಿಸಿದ್ದಾರೆ. ಈ ಸಿನಿಮಾದಲ್ಲಿ ಪ್ರಜ್ವಲ್ ಜೊತೆ ಯಾರೆಲ್ಲ ಅಭಿನಯಿಸಿದ್ದಾರೆ, ಇದು ಯಾವ ರೀತಿಯ ಸಿನಿಮಾ ಎನ್ನುವ ಹೆಚ್ಚಿನ ಮಾಹಿತಿಯನ್ನು ನಿರ್ದೇಶಕರು ಬಿಟ್ಟುಕೊಟ್ಟಿಲ್ಲ.  ನಬೀನ್ ಪೋಲ್ ಸಂಗೀತ ಚಿತ್ರಕ್ಕಿದೆ. ಸದ್ಯ ಫಸ್ಟ್ ಲುಕ್ ಮೂಲಕ ಸದ್ದು ಮಾಡುತ್ತಿರುವ ರಾಕ್ಷಸ ಹೇಗಿರಲಿದೆ, ಯಾವಾಗ ತೆರೆಮೇಲೆ ಬರಲಿದೆ ಎಂದು ಕಾದುನೋಡಬೇಕಿದೆ.

Share This Article