ಬೆಂಗಳೂರು: 2023ರ ಮಹಾಸಮರದ ಹೊಸ್ತಿಲಲ್ಲಿ ದಳಪತಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೊಸ ಬಾಂಬ್ ಸಿಡಿಸಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಯನ್ನು ಇದೀಗ ಹೆಚ್ಡಿಕೆ ಟಾರ್ಗೆಟ್ ಮಾಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣರಿಗೇ ಸಿಎಂ ಪಟ್ಟ ನೀಡಲಾಗುತ್ತದೆ. ಪ್ರಹ್ಲಾದ್ ಜೋಶಿಗೆ ಪಟ್ಟ ಕಟ್ಟಲು ಸಂಘ ಪರಿವಾರ ಪ್ಲಾನ್ ಮಾಡಿದೆ ಎಂಬ ಕುಮಾರಸ್ವಾಮಿ ಹೇಳಿಕೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
Advertisement
Advertisement
ಹೆಚ್ಡಿಕೆ ಹೇಳಿದ್ದು ಯಾಕೆ..?: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಜೆಡಿಎಸ್ ಪಂಚರತ್ನ ಯಾತ್ರೆಯನ್ನು ಟೀಕಿಸಿದ್ದರು. ಇದು ಪಂಚರತ್ನ ಅಲ್ಲ, ನವಗ್ರಹ ಯಾತ್ರೆ ಎಂದು ಹೇಳಿದ್ದರು. ಜೋಶಿ ಹೇಳಿಕೆಯಿಂದ ಸಿಡಿದೆದ್ದ ಎಚ್.ಡಿಕುಮಾರಸ್ವಾಮಿ ಇದೀಗ ವಾಗ್ದಾಳಿ ನಡೆಸಿದ್ದಾರೆ. ಈ ಬಾರಿ ಬಿಜೆಪಿ (BJP) ಅಧಿಕಾರಕ್ಕೆ ಬಂದರೆ ಬ್ರಾಹ್ಮಣರಿಗೆ ಮುಖ್ಯಮಂತ್ರಿ ಪಟ್ಟ. ಆರ್ಎಸ್ಎಸ್ ಸಭೆಯಲ್ಲಿ ಪ್ರಹ್ಲಾದ್ ಜೋಶಿ ಹೆಸರು ಪ್ರಸ್ತಾಪವಾಗಿದೆ ಎಂಬುದಾಗಿ ಹೇಳಿದ್ದಾರೆ.
Advertisement
Advertisement
ಜೋಶಿ ಜಾತಿ ಬಗ್ಗೆಯೂ ಹೆಚ್ಡಿಕೆ ಕಿಡಿ: ಬ್ರಾಹ್ಮಣರಲ್ಲಿ ಎರಡು ಮೂರು ವಿಧಗಳಿವೆ. ಪ್ರಹ್ಲಾದ್ ಜೋಶಿ ನಮ್ಮ ಹಳೆಯ ಬ್ರಾಹ್ಮಣರಲ್ಲ. ಅವರು ದೇಶ ಒಡೆಯುವವರು, ಕಟ್ಟುವವರಲ್ಲ. ಅವರು ಮಾರಾಠ ಪೇಶ್ವೆ ಕಾಲದ ಬ್ರಾಹ್ಮಣರು. ಅವರು ಶೃಂಗೇರಿ ಮಠ (Sringeri Mutt) ಒಡೆದ ವರ್ಗದವರು. ಗಾಂಧಿ ಕೊಂದ ಬ್ರಾಹ್ಮಣರು ಇವರು. ಬಿಜೆಪಿಯ ಹುನ್ನಾರ ಆರ್ಎಸ್ಎಸ್ ಕುತಂತ್ರಕ್ಕೆ ಬಲಿಯಾಗಬೇಡಿ. ಇವರು ದೇಶವನ್ನ ಹಾಳು ಮಾಡ್ತಾರೆ ಎಂದು ಟೀಕೆ ಮಾಡಿದ್ದಾರೆ.
ದೆಹಲಿಯಲ್ಲಿ ಎಂಟು ಜನ ಉಪ ಮುಖ್ಯಮಂತ್ರಿ ಮಾಡುವ ಸಭೆ ಮಾಡಿದ್ದಾರೆ. ಅದು ನನ್ನ ಗಮನಕ್ಕೆ ಬಂದಿದೆ. ಎಂಟು ಜನ ಯಾರು ಅಂತ ಹೆಸರು ಬೇಕಾದ್ರೂ ಕೊಡ್ತೀನಿ ಎಂದು ಹೆಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಾನು ಕೋಲಾರದಲ್ಲಿ ಸ್ಪರ್ಧಿಸಿದ್ರೂ 200% ಗೆಲ್ತೀನಿ: ಸಿದ್ದರಾಮಯ್ಯ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k