ಮೋದಿ-ಜಶೋದಾ ಬೆನ್ ಬಗ್ಗೆ ಸಹೋದರ ಪ್ರಹ್ಲಾದ್ ಮೋದಿ ಹೀಗಂದ್ರು

Public TV
2 Min Read
MODI BROTHER

ಬೆಂಗಳೂರು: ಕಾಂಗ್ರೆಸ್ಸಿಗರಿಗೆ ನರೇಂದ್ರ ಮೋದಿಯವರನ್ನು ಟೀಕಿಸಲು ಯಾವುದೇ ವಿಷಯ ಸಿಗುತ್ತಿಲ್ಲ. ಹೀಗಾಗಿ ಪದೇ ಪದೇ ಅತ್ತಿಗೆ ಯಶೋದಾ ಬೆನ್ ವಿಷಯವನ್ನು ಎಳೆದು ತರುವ ಪ್ರಯತ್ನ ಮಾಡುತ್ತಿದ್ದಾರೆ ಅಂತ ಮೋದಿ ಸಹೋದರ ಪ್ರಹ್ಲಾದ್ ಮೋದಿ ಸಿಡಿಮಿಡಿಗೊಂಡಿದ್ದಾರೆ.

ಬನಶಂಕರಿ ಬಳಿಯ ಶ್ರೀ ಕೃಷ್ಣ ಗ್ರೂಪ್ ಆಪ್ ಇನ್ಸ್ ಟ್ಯೂಟ್ ನಡೆದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಅವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಟೀಕಿಸಲು ತಮಗೆ ಬೇರೆ ಯಾವುದೇ ವಿಷಯ ಸಿಗದ ಕಾರಣ ಹೀಗಾಗಿ ಕಾಂಗ್ರೆಸ್ ನವರು ಪದೇ ಪದೇ ಅತ್ತಿಗೆ ಜಶೋದಾ ಬೆನ್ ವಿಷಯವನ್ನು ಎಳೆದು ತರುವ ಪ್ರಯತ್ನ ಮಾಡುತ್ತಿದ್ದಾರೆ. ನಾವೂ ಕೂಡ ಅಣ್ಣ-ಅತ್ತಿಗೆಯನ್ನು ಒಂದು ಮಾಡುವ ಪ್ರಯತ್ನ ಮಾಡುವುದಿಲ್ಲ. ಅಣ್ಣ ತಂದೆಯ ಸಮಾನ. ಅವರ ವೈಯಕ್ತಿಕ ವಿಷಯದಲ್ಲಿ ನಾವು ತಲೆ ಹಾಕಲ್ಲ. ಅಲ್ಲದೇ ತಮ್ಮಕುಟುಂಬ ವರ್ಗದವರು ಯಾರೂ ಕೂಡ ರಾಜಕಾರಣಕ್ಕೆ ಬರಲ್ಲ. ಈ ರಾಷ್ಟ್ರ ರಾಜಕಾರಣಕ್ಕೆ ಒಬ್ಬ ಮೋದಿಯೇ ಸಾಕು ಎಂದರು.

MODI BROTHER 2

ನಾನು ಪ್ರಧಾನಿ ಸಹೋದರನಾದರೂ ಸಣ್ಣ ರೇಷನ್ ಅಂಗಡಿ ನಡೆಸುತ್ತಿದ್ದೇನೆ. ಇಲ್ಲಿ ಯಾರೂ ದೊಡ್ಡವರೂ ಅಲ್ಲ. ಚಿಕ್ಕವರೂ ಅಲ್ಲ ಎಂದರು.

ಹಿಂದೂ ಧರ್ಮ ಅಂದ್ರೇ ಏನು ಅನ್ನೊದನ್ನು ತಿಳಿಸೋಕೆ ಅಂತಲೇ ಜನ್ಮ ತಾಳಿದವರು ವಿವೇಕಾನಂದರು. ಚಿಕ್ಕಂದಿನಲ್ಲೇ ಮೂಢನಂಬಿಕೆಗಳನ್ನ ವಿರೋಧಿಸಿದವರು. ಕೊನೆಗೆ ರಾಮಕೃಷ್ಣ ಪರಮಹಂಸರನ್ನ ಕಲ್ಕತ್ತಾದಲ್ಲಿ ಭೇಟಿ ಮಾಡ್ತಾರೆ. ಅಲ್ಲಿಂದ ಪರಮಹಂಸರನ್ನ ಗುರುವಾಗಿ ಸ್ವೀಕರಿಸ್ತಾರೆ. ವಿವೇಕಾನಂದರು ಕೇವಲ ಭಾರತಕ್ಕೆ ಸೀಮಿತವಲ್ಲ, ಅವರು ವಿಶ್ವ ಗುರುವಾಗಿದ್ದಾರೆ. ಅವರ ವಿಚಾರಗಳು ಯಾವಾಗಲೂ ಪ್ರಸ್ತುತವಾಗಿರುತ್ತವೆ. ವಿವೇಕಾನಂದ ಹಾಗೂ ನರೇಂದ್ರ ಮೋದಿಗೆ ಹೆಸರು ಮತ್ತು ವಿಚಾರಗಳಲ್ಲೂ ಸಾಮತ್ಯೆಗಳಿವೆ. ನರೇಂದ್ರ ಮೋದಿ ವಿಶ್ವ ಗುರು ಆಗ್ತಾರೆ. ನರೇಂದ್ರ ಅನ್ನೊ ಹೆಸರು ಪೂರ್ತಿ ಭಾರತದಲ್ಲಿ ಪ್ರತಿಧ್ವನಿಸುತ್ತಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರ ಎಲ್ಲೆಡೆ ಹರಡುತ್ತಿದೆ ಎಂದು ಅವರು ಹೇಳಿದ್ರು.

MODI BROTHER 3

ಹಿಂದೂ ಧರ್ಮದ ಪುನರುತ್ಥಾನಕ್ಕಾಗಿಯೇ ವಿವೇಕಾನಂದರ ಜನ್ಮವಾಗಿದೆ. ಆದರೆ ಅತ್ಯಂತ ಕಿರಿಯ ವಯಸ್ಸಿನಲ್ಲೇ ಅವರು ನಮ್ಮನ್ನೆಲ್ಲ ಬಿಟ್ಟು ಹೋದ್ರು. ಭಾರತದ ರಾಜಕಾರಣದಲ್ಲಿ ವಿವೇಕಾನಂದರ ಯೋಚನೆ, ವಿಚಾರಗಳು ಹಾಗೂ ಚಾಣಕ್ಯ ನೀತಿ ಅತ್ಯಂತ ಪ್ರಮುಖವಾಗಿದೆ. ಈಗಲೂ ಇವರಿಬ್ಬರ ನೀತಿಗಳ ಆಧಾರದ ಮೇಲೆ ಭಾರತದ ರಾಜಕಾರಣ ನಡೆಯುತ್ತಿದೆ. ನರೇಂದ್ರ ಮೋದಿ ವಿವೇಕಾನಂದರ ಯೋಚನೆ ಹಾಗೂ ಚಾಣಕ್ಯನ ನೀತಿಯನ್ನು ಅಳವಡಿಸಿಕೊಂಡಿದ್ದಾರೆ. ನರೇಂದ್ರ ಮೋದಿಯವರು ವಿವೇಕಾನಂದರ ನಂತರ ಭಾರತವನ್ನು ವಿಶ್ವಗುರುವಿನ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಇಬ್ಬರ ಹೆಸರಲ್ಲೂ ನರೇಂದ್ರ ಎಂಬುದು ಸಾಮಾನ್ಯವಾಗಿದೆ. ಭಾರತಕ್ಕೆ ಶುಭದಿನ ಸಮೀಪಿಸುತ್ತಿದೆ ಎಂದು ಹೊಗಳಿದರು.

MODI BROTHER 1

MODI BROTHER 4

MODI BROTHER 5

Share This Article
Leave a Comment

Leave a Reply

Your email address will not be published. Required fields are marked *