ಬೆಂಗಳೂರು: ರಾಜ್ಯ ಮತ್ತು ಕೇಂದ್ರದ ಬಿಜೆಪಿ (BJP) ಸರ್ಕಾರಗಳ ಸಾಧನೆಯನ್ನು ಪ್ರತಿ ಗ್ರಾಮ ಮತ್ತು ಬೂತ್‌ಗಳಿಗೆ ತಲುಪಿಸುವ ಉದ್ದೇಶದಿಂದ ಪ್ರಗತಿ ರಥಗಳು (Pragati Ratha) ರಾಜ್ಯದಲ್ಲಿ ಸಂಚರಿಸಲಿವೆ ಎಂದು ರಾಜ್ಯ ಸಂಚಾಲಕ ಎಸ್.ವಿ. ರಾಘವೇಂದ್ರ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಗತಿ ರಥಕ್ಕಾಗಿ ಎಲ್‌ಇಡಿ ಸ್ಕ್ರೀನ್ ಇರುವ 135 ವಾಹನಗಳನ್ನು ಸಿದ್ಧಪಡಿಸಲಾಗಿದೆ. 224 ಕ್ಷೇತ್ರಗಳಲ್ಲಿ, 58 ಸಾವಿರಕ್ಕೂ ಹೆಚ್ಚು ಬೂತ್‌ಗಳಲ್ಲಿ ಪ್ರಗತಿ ರಥಗಳು ಸಂಚರಿಸಲಿವೆ. ರಥದ ಮೂಲಕ ಕಾರ್ನರ್ ಮೀಟಿಂಗ್, ಭಾಷಣ ಮಾಡಲು ಮೈಕ್, ಸ್ಪೀಕರ್, ಲೈವ್ ಸ್ಟ್ರೀಮ್ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿವರಿಸಿದರು.
Advertisement
Advertisement
ರಥಗಳನ್ನು ಗಮನಿಸಲು ಜಿಪಿಎಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಬಿಜೆಪಿ ಬ್ರ‍್ಯಾಂಡಿಂಗ್ ಮೂಲಕ ರಥ ಸಂಚರಿಸಲಿದೆ. ಸಲಹಾ ಪೆಟ್ಟಿಗೆಯನ್ನೂ ಈ ರಥ ಒಳಗೊಂಡಿರುತ್ತದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 10 ಸಾವಿರ ಜನರ ಸಲಹೆ ನಿರೀಕ್ಷಿಸಲಾಗಿದೆ. ಒಟ್ಟು 22.40 ಲಕ್ಷ ಸಲಹೆ ನಿರೀಕ್ಷೆ ಇದೆ. ಕ್ಯೂಆರ್ ಕೋಡ್ ಸಹ ಇದೆ ಎಂದು ಹೇಳಿದರು. ಇದನ್ನೂ ಓದಿ: ವಿಧಾನ ಪರಿಷತ್ ಕಲಾಪದಲ್ಲಿ ಏಕವಚನದಲ್ಲೇ ಬೈದಾಡಿಕೊಂಡ ಸಚಿವ ಮುರುಗೇಶ್ ನಿರಾಣಿ – ಮರಿತಿಬ್ಬೇಗೌಡ
Advertisement
ಬಿಜೆಪಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ (Government) ಸಾಧನೆಗಳ ವಿಡಿಯೋ ಪ್ರದರ್ಶನ ನಡೆಯಲಿದೆ. 33 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ನಲ್ಲಿ ನೀರು, ವಿದ್ಯುತ್, ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ, ಕಳಸಾ ಬಂಡೂರಿಗೆ ಹಣ, ಬೆಳಗಾವಿ ಕಿತ್ತೂರು ರೈಲ್ವೇ ಕಾಮಗಾರಿ, ಬೆಂಗಳೂರು (Bengaluru) ಅಭಿವೃದ್ಧಿ ಸೇರಿ ವಿವಿಧ ಯೋಜನೆಗಳ ಕುರಿತು ತಿಳಿಸಲಿದ್ದೇವೆ. ಯುಪಿಎ ಸರ್ಕಾರ ಕೊಟ್ಟ ಹಣಕ್ಕಿಂತ 9 ಪಟ್ಟು ಹೆಚ್ಚು ಹಣವನ್ನು ರೈಲ್ವೆಗೆ ನೀಡಿದ್ದು, ಕೊಪ್ಪಳದಲ್ಲಿ ಕುಶಲಕರ್ಮಿಗಳಿಗೆ ನೆರವು, 4 ಸಾವಿರ ಕಿಮೀ ಹೆದ್ದಾರಿಗಳ ಅಭಿವೃದ್ಧಿ ಕುರಿತಂತೆ ವಿವರಗಳು ಇರಲಿವೆ ಎಂದು ಮಾಹಿತಿ ನೀಡಿದರು.
Advertisement
ಶಿವಮೊಗ್ಗ ಸೇರಿ 8 ವಿಮಾನ ನಿಲ್ದಾಣ ನಿರ್ಮಾಣದಿಂದ ಆಗುವ ಪ್ರಯೋಜನ ಸೇರಿ ರಾಜ್ಯದ ಎಲ್ಲ ಭಾಗಗಳ ಅಭಿವೃದ್ಧಿಗೆ ಕೈಗೊಂಡ ಕ್ರಮಗಳನ್ನು ವಿಡಿಯೋ ಮೂಲಕ ವಿವರಿಸಲಾಗುತ್ತದೆ. ಮೆಟ್ರೋ ಅಭಿವೃದ್ಧಿಗೆ ನೀಡಿದ ಅನುದಾನ, ಲಂಬಾಣಿ ತಾಂಡಾಗಳ ಹಕ್ಕುಪತ್ರ ಕುರಿತು ಜಾಗೃತಿ ಮೂಡಿಸುತ್ತೇವೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಹ ಸಂಚಾಲಕರಾಗಿ ಮಂಗಳೂರಿನ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ಅವರನ್ನ ನೇಮಿಸಲಾಗಿದೆ ಎಂದರು. ಇದನ್ನೂ ಓದಿ: ರೈತರ ಸಾಲ ಮನ್ನಾ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ: ಎಸ್.ಟಿ. ಸೋಮಶೇಖರ್
ವಿಧಾನಪರಿಷತ್ ಸದಸ್ಯ ಮತ್ತು ಬೆಂಗಳೂರು ವಿಭಾಗ ಪ್ರಭಾರಿ ಗೋಪಿನಾಥ ರೆಡ್ಡಿ ಮಾತನಾಡಿ, ಪ್ರಗತಿ ರಥಕ್ಕೆ ಇದೇ ಫೆಬ್ರವರಿ 24ರಂದು ಬೆಂಗಳೂರಿನ ಬಿಟಿಎಂ ವಿಧಾನಸಭಾ ಕ್ಷೇತ್ರದ ಸ್ವಾಮಿ ವಿವೇಕಾನಂದ ಮೈದಾನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರು ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಬೆಂಗಳೂರು ಕೆಂದ್ರ ಜಿಲ್ಲೆ ಮತ್ತು ದಕ್ಷಿಣ ಜಿಲ್ಲೆ “ಪ್ರಗತಿ ರಥ” ಸಂಚಾಲಕರು ಮತ್ತು ಸಹ ಸಂಚಾಲಕರ ಸಭೆಯಲ್ಲಿ ಭಾಗವಹಿಸಿ ಸಿದ್ಧತೆಗಳ ಬಗ್ಗೆ ವಿವರಿಸಲಾಯಿತು.
ಬೆಂಗಳೂರಿನ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಗತಿ ರಥ ಯಶಸ್ವಿಯಾಗಿ ತಲುಪಲಿದೆ.#PragatiRatha #BJPkarnataka pic.twitter.com/3QJnTpo1uJ
— Raghavendra SV (@RaghavendraBJP) February 19, 2023
ಒಂದು ರಥವು ಕನಿಷ್ಠ 15 ದಿನಗಳ ಕಾಲ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಲಿದೆ. ಕರಾವಳಿ ಮತ್ತಿತರ ಕಡೆ ದೂರದ ಪ್ರದೇಶಗಳನ್ನು ಭೇಟಿ ಮಾಡಲು ಪ್ರತಿ ಕ್ಷೇತ್ರಕ್ಕೆ ಒಂದು ರಥ ಇರಲಿದೆ. ಬೆಂಗಳೂರಿನಲ್ಲಿ 2 ವಿಧಾನಸಭಾ ಕ್ಷೇತ್ರಕ್ಕೆ ಒಂದು ರಥ ನೀಡಿದ್ದೇವೆ ಎಂದು ಹೇಳಿದರು.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k