ಚಿಕ್ಕಬಳ್ಳಾಪುರ: ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಹಾಗೂ ಮಾಜಿ ಸಚಿವ ಡಾ.ಕೆ.ಸುಧಾಕರ್ (K. Sudhakar) ಟಾಕ್ ವಾರ್ ಜೋರಾಗಿದ್ದು ಪರಸ್ಪರರು ನಾನಾ ನೀನಾ ಎಂದು ಸವಾಲು ಪ್ರತಿ ಸವಾಲು ಹಾಕಿದ್ದು ಇಬ್ಬರ ವಾಕ್ಸಮರ ಮತ್ತಷ್ಟು ಮುಂದುವರೆದಿದೆ.
ಇಬ್ಬರು ಮಾತಿನ ಸಮರದ ನಡುವೆ ಈಗ ಇಬ್ಬರ ಬೆಂಬಲಿಗರ ನಡುವೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು ಪರಸ್ಪರರ ರಾಜಕೀಯ ಕಿತ್ತಾಟ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
Advertisement
ಸೋತ ನಂತರ ಸುಮ್ಮನಿದ್ದ ಮಾಜಿ ಸಚಿವ ಡಾ.ಕೆ.ಸುಧಾಕರ್ ಭ್ರಷ್ಟಾಚಾರದ (Corruption) ವಿಚಾರದಲ್ಲಿ ಶಾಸಕ ಪ್ರದೀಪ್ ಈಶ್ವರ್‌ಗೆ ಸವಾಲು ಹಾಕಿದ್ದು, ಇದಕ್ಕೆ ಪ್ರದೀಪ್ ಈಶ್ವರ್ ಸಹ ಪ್ರತಿ ಸವಾಲು ಹಾಕಿ ಸಾಕಷ್ಟು ಸುದ್ದಿಯಾಗಿದ್ದರು. ಇದರ ಬೆನ್ನಲ್ಲೇ ಮಾಜಿ ಶಾಸಕ ಸುಧಾಕರ್ ಬೆಂಬಲಿಗ ಸಂತೋಷ್ ರಾಜು ಮೇಲೆ ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರು ಹಲ್ಲೆ ಯತ್ನ ನಡೆಸಿದ್ದಾರೆ ಎಂದು ಆರೋಪಿಸಿ ಸ್ವತಃ ಮಾಜಿ ಸಚಿವ ಸುಧಾಕರ್ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ (Chikkaballpura) ಎಸ್‌ಪಿ ಕಚೇರಿ ಬಳಿ ಪ್ರತಿಭಟನೆ (Protest) ನಡೆಸಿ ಆಕ್ರೋಶ ಹೊರಹಾಕಿದರು.
Advertisement
Advertisement
ಸ್ವತಃ ತಮ್ಮ ಬೆಂಬಲಿಗ ಸಂತೋಷ್ ರಾಜು ಪರವಾಗಿ ಆಗಮಿಸಿದ ಸುಧಾಕರ್ ಎಸ್‌ಪಿ ಅವರಿಗೆ ಪ್ರದೀಪ್ ಈಶ್ವರ್ ಬೆಂಬಲಿಗರ ವಿರುದ್ದ ದೂರಿನ ಪತ್ರ ನೀಡಿ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿದ್ದಾರೆ. ಒಂದು ವೇಳೆ ಪ್ರಕರಣ ದಾಖಲಾಗದೇ ಇದ್ದರೆ ಮತ್ತೆ ಬೃಹತ್ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನ ನೀಡಿದ್ದರು. ಸಂತೋಷ್ ರಾಜು ನೀಡಿದ ದೂರಿನ ಮೇರೆಗೆ ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರಾದ ಡ್ಯಾನ್ಸ್ ಶ್ರೀನಿವಾಸ್, ವಿನಯ್ ಆಲಿಯಾಸ್ ಬಂಗಾರಿ, ದೇವರಾಜು, ಹೊಟ್ಟು ಲಕ್ಷ್ಮಯ್ಯ, ಗಂಗರಾಜು ಹಾಗೂ ಶ್ರೀನಿವಾಸ್ ಎಂಬುವವರ ವಿರುದ್ದ ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 143 (ದಂಡನೆ), 341 (ಅಕ್ರಮ ಬಂಧನಕ್ಕೆ ದಂಡನೆ) 504 (ಅಪರಾಧಿಕ ಭಯೋತ್ಪಾದನೆ) 149 (ಒಂದೇ ಉದ್ದೇಶದಿಂದ ಈಡೇರಿಸಿದ ಅಪರಾಧ ಬಗ್ಗೆ ಪ್ರತಿಯೊಬ್ಬ ಸದಸ್ಯನು ತಪ್ಪಿತಸ್ಥನಾಗಿರುವುದು) ಅಡಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ಮದುವೆ ಯಾವಾಗ? – ಸೋನಿಯಾ ಗಾಂಧಿ ಹೇಳಿದ್ದೇನು?
Advertisement
ಸುಧಾಕರ್ ಬೆಂಬಲಿಗರ ವಿರುದ್ಧ ದೂರು
ಎಸ್‌ಪಿ ಕಚೇರಿ ಬಳಿ ನಡೆದ ಪ್ರತಿಭಟನಾ ಧರಣಿ ವೇಳೆ ಸುಧಾಕರ್ ಆಗಮನಕ್ಕೂ ಮುನ್ನ ಸುಧಾಕರ್ ಬೆಂಬಲಿತರು ಶಾಸಕ ಪ್ರದೀಪ್ ಈಶ್ವರ್ ವಿರುದ್ದ ದಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದರು. ಈ ವೇಳೆ ಪ್ರದೀಪ್ ಈಶ್ವರ್ ಭ್ರಷ್ಟ ಎಂಎಲ್‍ಎ, 420 ಎಂಎಲ್‍ಎ ಸೇರಿದಂತೆ ಅವಾಚ್ಯ ಪದ ಬಳಿಸಿ ನಿಂದನೆ ಸಹ ಮಾಡಿದರು.
ಈ ಕಾರಣಕ್ಕೆ ಪ್ರದೀಪ್ ಈಶ್ವರ್ ಬೆಂಬಲಿಗ ವಿನಯ್ ಕುಮಾರ್ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸುಧಾಕರ್ ಬೆಂಬಲಿಗರ ವಿರುದ್ಧ ದೂರು ನೀಡಿದ್ದಾರೆ. ಮುನಿರಾಜು ಹಾಗೂ ರಾಘವೇಂದ್ರ ಹಾಗೂ ಇತರರ ವಿರುದ್ದ ಐಪಿಸಿ ಸೆಕ್ಷನ್ ಅಡಿ 143, 504, 505(1) (ಸಿ) 149 ಅಡಿಯಲ್ಲಿ ದೂರು ದಾಖಲಿಸಿಲಾಗಿದೆ.
Web Stories