ಬೆಂಗಳೂರು: ಇಂಗ್ಲಿಷ್ (English) ಇರೋದೇ ತಪ್ಪು ಮಾತಾಡೋಕೆ, ಆದರೆ ಕನ್ನಡ (Kannada) ಇರೋದು ಸರಿಯಾಗಿ ಮಾತನಾಡಲು ಎಂದು ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಹೇಳಿದ್ದಾರೆ.
ವಿಧಾನಸಭೆಯಲ್ಲಿ (Visdhana Sabha) ಮಾತನಾಡಿದ ಅವರು, ಬಡವರ ದೇವಾಲಯ ಕನ್ನಡ ಶಾಲೆ. ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯಾ ಎನ್ನುವ ಹಾಗೆ ಬಡವರ ಮಕ್ಕಳು ವಿಧಾನಸೌಧಕ್ಕೆ ಬರಲು ಸಾಧ್ಯವಾಗಿರುವುದು ಸಂವಿಧಾನದಿಂದ. ನಮ್ಮ ಪಕ್ಷದ ನಾಯಕರು ನನ್ನಂತ ಬಡವರ ಮಗನನ್ನು ವಿಧಾನಸೌಧಕ್ಕೆ ಕಳುಹಿಸಿದ್ದಾರೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಮಂತ್ರಿಗಳ ಜೊತೆ ನಮ್ಮ ಅಡ್ಜಸ್ಟ್‌ಮೆಂಟ್ ರಾಜಕೀಯ ಇಲ್ಲ: ಯತ್ನಾಳ್
ಅನ್ನಭಾಗ್ಯ (Annabhagya) ಶ್ರೀಮಂತರ ದೃಷ್ಟಿಯಲ್ಲಿ ರೇಷನ್ ಅಷ್ಟೇ. ಆದರೆ ನನ್ನಂತವನ ದೃಷ್ಟಿಯಲ್ಲಿ ಅನ್ನ ಎನ್ನುವುದು ದೇವರು. ಗೃಹಜ್ಯೋತಿ (Gruhajyothi) ಕೇವಲ ಮನೆಯನ್ನು ಬೆಳಗುತ್ತಿಲ್ಲ. ಕೋಟ್ಯಂತರ ಮಕ್ಕಳು ತಡರಾತ್ರಿಯವರೆಗೆ ಓದಲು ಸಹಾಯಕವಾಗಿದೆ. ಕನ್ನಡ ಮಾಧ್ಯಮದ ಶಾಲೆಗಳನ್ನು ಉಳಿಸಲು ಆದ್ಯತೆ ನೀಡಬೇಕಿದೆ. ಅದರ ಬಗ್ಗೆ ಸಂಬಂಧಿಸಿದ ಸಚಿವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಸಾರಿಗೆ ಇಲಾಖೆಯಲ್ಲಿ ಸಂಚರಿಸ್ತಿವೆಯಾ ನಿರುಪಯುಕ್ತ ಬಸ್‌ಗಳು? – ಸಾರಿಗೆ ಅಧಿಕಾರಿಯಿಂದಲೇ ಹೊರಬಿತ್ತು ಸತ್ಯ
ಸರ್ಕಾರಿ ಆಸ್ಪತ್ರೆಯ ಚಿಕಿತ್ಸಾ ಗುಣಮಟ್ಟ ಚೆನ್ನಾಗಿರುವಂತೆ ನೋಡಿಕೊಳ್ಳಬೇಕು. ಉತ್ತಮ ಚಿಕಿತ್ಸೆ ಸಿಗದೆ ನನ್ನ ಅಪ್ಪ-ಅಮ್ಮನನ್ನು ಕಳೆದುಕೊಂಡೆ. ಅಂತಹ ಸ್ಥಿತಿ ಯಾರಿಗೂ ಬರಬಾರದು. ಅದಕ್ಕಾಗಿ ಸರ್ಕಾರಿ ಆಸ್ಪತ್ರೆ ಉಳಿಸಬೇಕು. ಸಿದ್ದರಾಮನಹುಂಡಿಯಲ್ಲಿ ಹುಟ್ಟಿದ ಸಿದ್ದರಾಮಯ್ಯನವರಿಗೆ (Siddaramaiah) ಹಸಿವಿನ ಅನುಭವವಿದೆ. ಅದಕ್ಕಾಗಿ ಅನ್ನಭಾಗ್ಯ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಡಬಲ್ ಮರ್ಡರ್ ಬಳಿಕ ಪಬ್ಲಿಕ್ ಟಿವಿ ಸುದ್ದಿಯ ಸ್ಟೇಟಸ್ – ವೃತ್ತಿ ವೈಷಮ್ಯವೇ ಕೊಲೆಗೆ ಕಾರಣ?
ಐಎಎಸ್ ಮತ್ತು ಮೆಡಿಕಲ್ ಓದಲು ಬರುವ ಕನ್ನಡ ಮಾಧ್ಯಮದವರನ್ನು (Kannada Medium) ಸರ್ಕಾರ ಆದ್ಯತೆ ಮೇಲೆ ಪರಿಗಣಿಸಬೇಕು. ಉನ್ನತ ಶಿಕ್ಷಣ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಗೆ ಮರಿಚೀಕೆ ಆಗಬಾರದು. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಆನ್‌ಲೈನ್ ಗೇಮ್ಸ್‌ಗೆ 28% ಜಿಎಸ್‌ಟಿ – ಸ್ಟಾರ್ಟಪ್ ಮಾಲೀಕರ ರಾಜಕೀಯ ಪ್ರವೇಶಕ್ಕೆ ಸೂಕ್ತ ಕಾಲ ಎಂದ ಭಾರತ್‌ಪೇ ಸಂಸ್ಥಾಪಕ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]