– ದಲಿತ ರಾಜಕಾರಣಿಗಳ ಮೇಲೆಯೇ ದಾಳಿಯೇಕೆ? ಎಂದು ಕಿಡಿ
ಬೆಂಗಳೂರು: ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಅವರು ನಾಯಿ ಅಲ್ಲ, ನಿಮ್ಮಂತೆ ನಾನು ನಿಮ್ಮನ್ನ ನಾಯಿ ಎನ್ನುವುದಿಲ್ಲ. ನಿಮ್ಮೇಲೆ ನಮಗೆ ಗೌರವವಿದೆ. ನಮಗೆ ಸಂಸ್ಕೃತಿ ಅನ್ನೋದಿದೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಟಾಂಗ್ ಕೊಟ್ಟಿದ್ದಾರೆ.
ಮಾಧ್ಯಮದವರೊಂದಿಗೆ ಸಚಿವ ಜಿ.ಪರಮೇಶ್ವರ್ (G Parameshwar) ಮೇಲಿನ ಇಡಿ ದಾಳಿ ವಿಚಾರವಾಗಿ ಮಾತನಾಡಿದ ಅವರು, ದಲಿತ ರಾಜಕಾರಣಿಗಳ ಮೇಲೆಯೇ ಯಾಕೆ ಇಡಿ ದಾಳಿಯಾಗುತ್ತದೆ? ಪರಮೇಶ್ವರ್ ಒಬ್ಬ ದಲಿತ ನಾಯಕರು. ಪ್ರಾಮಾಣಿಕ ರಾಜಕಾರಣಿ. ಅಪ್ಪರ್ ಕಮ್ಯುನಿಟಿಯವರಿಗೆ ಕಮಿಟಿಯವರಿಗೆ ಬಿಜೆಪಿ ಬೇಕು. ಗಾನಬಜಾನಾ ಮಾಡೋರೆ ಬೇಕು ಅನಿಸುತ್ತದೆ. ಯಾಕೆ ಬಿಜೆಪಿಯಲ್ಲಿ ಯಾರು ಹಣ ಮಾಡಿಲ್ವಾ? ಅಶೋಕ್ ಏನು ಸತ್ಯಹರಿಶ್ಚಂದ್ರರಾ? ವಿಜಯೇಂದ್ರ ಏನು ಹಣ ವರ್ಗಾಯಿಸಿಲ್ವಾ? ಯಾಕೆ ದಲಿತರ ಮೇಲೆಯೇ ದಾಳಿ ನಡೆಯುತ್ತದೆ ಎಂದು ಆಗ್ರಹಿಸಿದರು.ಇದನ್ನೂ ಓದಿ: ರಾಮನಗರ ಹೆಸರು ಬದಲಾವಣೆ – ತಮ್ಮ ಭೂಮಿಗಳ ಬೆಲೆ ಹೆಚ್ಚಿಸುವ ಷಡ್ಯಂತ್ರದ ಭಾಗ: ಹೆಚ್‌ಡಿಕೆ ಕೆಂಡ
ಅಪ್ಪರ್ ಕಮ್ಯುನಿಟಿಯವರಿಗೆ ದಲಿತರನ್ನು ಕಂಡ್ರೆ ಆಗುವುದಿಲ್ಲವಾ? ನಮ್ಮ ಮೇಲೆ ದಾಳಿ ಮಾಡಿಸಿದರೆ, ನಾವೇನು ನಿಮ್ಮ ದಾಳಿಗೆ ಹೆದರಿ ಬಿಡುತ್ತೇವೆ ಅಂದುಕೊಂಡಿದ್ದೀರಾ? ಇಡಿಯವರಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿಲ್ವಾ? ನಾವೇನು ಸುಮ್ಮನೆ ಕುಳಿತುಕೊಳ್ಳುತ್ತೀವಾ? ಕಾನೂನಿದೆ ನಾವು ಹೋರಾಟ ಮಾಡುತ್ತೇವೆ. ನಾವೇನು ನಿಮ್ಮ ದಾಳಿಗೆಲ್ಲ ಹೆದರುವವರಲ್ಲ. ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದಕ್ಕೆ ಅಪ್ಪರ್ ಕಮ್ಯುನಿಟಿಯವರು ಸಹಿಸಿಕೊಳ್ಳುತ್ತಿಲ್ಲ, ಪ್ರಿಯಾಂಕ್ ಖರ್ಗೆಯವರು ಬೆಳೆಯೋದನ್ನ ಸಹಿಸುತ್ತಿಲ್ಲ. ಅವರು ನಮ್ಮ ಪಕ್ಷದ ಫೈರ್ ಬ್ರ್ಯಾಂಡ್. ಅದಕ್ಕೆ ಬಿಜೆಪಿಯವರು ಕಷ್ಟವಾಗುತ್ತಿದೆ. ಅದಕ್ಕೆ ಛಲವಾದಿಯನ್ನ ಮುಂದೆ ಬಿಟ್ಟಿದ್ದಾರೆ ಎಂದು ಕಿಡಿಕಾರಿದರು.
ಛಲವಾದಿಯವರು ತಮ್ಮ ಸೀಟು ಭದ್ರ ಮಾಡಿಕೊಳ್ಳಲು ಖರ್ಗೆಯವರನ್ನ ಬೈಯಬೇಕು. ಇದೇನು ಸರ್ವಾಧಿಕಾರವಲ್ಲ. ಐಟಿ, ಇಡಿ ರೇಡ್ ಮಾಡಿದರೆ ಭಯ ಬೀಳ್ತಿವಾ? ಸಾವಿರ ಸಲ ರೇಡ್ ಮಾಡಲಿ, ಏನಾದರೂ ಟಾರ್ಚರ್ ಕೊಡಿ ನೋ ಪ್ರಾಬ್ಲಂ. ಮೋದಿ, ಅಮಿತ್ ಶಾ ಅವರಿಗೆ ಧಂ ಇದ್ಯಾ? ಬಿಜೆಪಿಯವರಿಗೆ ಧಮ್ಮು ತಾಕತ್ತು ಇದ್ದರೆ ಏನು ಬೇಕಾದರೂ ಮಾಡಿಕೊಳ್ಳಲಿ. ಆದರೆ ಇಡಿಯವರು ಯಾಕೆ ಸಡನ್ ಆಗಿ ಎಂಟ್ರಿ ಆಗಬೇಕು. ಆರ್.ಅಶೋಕ್, ವಿಜಯೇಂದ್ರ ಟ್ರಾನ್ಸಾಕ್ಷಮ್ ಕರೆಕ್ಟ್ ಇದ್ಯಾ? ನೀವು ಏನೇ ಮಾಡಿಕೊಳ್ಳಿ ತಲೆಕೆಡಿಸಿಕೊಳ್ಳಲ್ಲ. ಎಲ್ಲವನ್ನೂ ನಾವು ಎದರಿಸುತ್ತೇವೆ. ನೀವೇನು ಅಲ್ಲೇ ಇರಲ್ಲ. 2029ಕ್ಕೆ ದೆಹಲಿಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ. ನಮ್ಮ ರಾಹುಲ್ ಗಾಂಧಿ ಪಿಎಂ ಆಗುತ್ತಾರೆ ಎಂದರು.
ಛಲವಾದಿ ನಾರಾಯಣಸ್ವಾಮಿ 40 ವರ್ಷ ಬಕೆಟ್ ಹಿಡಿದು ಹೋದವರು. ಅವರು ಖರ್ಗೆಯವರ ಬಗ್ಗೆ ಮಾತನಾಡುತ್ತಾರೆ. ಅವರು ಹೇಳಿದ ಪದ ನಾನು ಬಳಸಲ್ಲ. ನೀವು ಪ್ರತಿಪಕ್ಷ ನಾಯಕರು ಅಂತ ಭದ್ರತೆ ಕೊಟ್ಟಿದ್ದಾರೆ. ಪೊಲೀಸರು ನಿಮ್ಮನ್ನ ನೋಡಿಕೊಂಡಿದ್ದಾರೆ. ನಾವು ಯಾವುದಕ್ಕೂ ಹೆದರೋರಲ್ಲ ಅವರು ಮುಂದೆ ಮುಖ್ಯಮಂತ್ರಿಯಾಗುವವರು. ಅದಕ್ಕೆ ಬಿಜೆಪಿಯವರಿಗೆ ಅವರನ್ನು ಕಂಡರೆ ಭಯ, ಆ ಕಾರಣಕ್ಕೆ ಅವರನ್ನು ಟಾರ್ಗೆಟ್ ಮಾಡ್ತಾ ಇದ್ದಾರೆ ಎಂದು ಆರೋಪಿಸಿದರು.ಇದನ್ನೂ ಓದಿ: ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ & ಉಕ್ಕು ಕಾರ್ಖಾನೆ ಪುನಶ್ಚೇತನಕ್ಕೆ ಕೇಂದ್ರ ಅಸ್ತು