– ಪ್ರತಾಪ್ ಸಿಂಹ ಹೇಳಿಕೆ ಎಲ್ಲ ತಾಯಂದಿರು, ಒಬಿಸಿ ಹೆಣ್ಣುಮಕ್ಕಳಿಗೆ ಮಾಡಿದ ಅಪಮಾನ ಎಂದ ಕಾಂಗ್ರೆಸ್ ಶಾಸಕ
ಬೆಂಗಳೂರು: ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ನನ್ನ ತಾಯಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರು ಕ್ಷಮೆ ಕೇಳಬೇಕು ಎಂದು ಶಾಸಕ ಪ್ರದೀಪ್ ಈಶ್ವರ್ ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು ಮಾಜಿ ಎಂಪಿ ನನ್ನ ತಾಯಿಗೆ ಅವಮಾನ ಮಾಡಿದ್ದಾರೆ. ನನ್ನ ತಾಯಿ ಸ್ವರ್ಗದಲ್ಲಿ ಇದ್ದಾರೆ. ನೀನು ಅಲ್ಲಿಗೆ ಹೋಗಿ ಕ್ಷಮೆ ಕೇಳಬೇಡ. ಅಲ್ಲಿಯೇ ನಿಮ್ಮ ಮನೆಯಿಂದ ಹೊರ ಬಂದರೆ ಚಾಮುಂಡಿ ತಾಯಿ ದೇವಸ್ಥಾನ ಇದೆ. ಅಲ್ಲಿಗೆ ಹೋಗಿ ಕ್ಷಮೆ ಕೇಳು. ಇಲ್ಲ ಅಂದ್ರೆ ನಿಮ್ಮ ಮನೆಯಲ್ಲಿ ಸೀತಾದೇವಿ ಪೋಟೋ ಇದ್ರೆ ಅಲ್ಲಿಯೇ ಕ್ಷಮೆ ಕೇಳು. ನನ್ನ ತಾಯಿ ಸೀತೆಯಷ್ಟೆ ಶ್ರೇಷ್ಠಳು ಎಂದಿದ್ದಾರೆ.
ಪ್ರತಾಪ್ ಸಿಂಹ ನನ್ನ ಬಗ್ಗೆ ಏನೆನೋ ಮಾತನಾಡ್ತಾರೆ. ಅಪ್ಪಂದು ಬಗ್ಗೆ ಮಾತನಾಡ್ತಾರೆ. ನೀನು ತ್ರಿಪುರ ಸುಂದರನಾ ಗುರು. ಕತ್ತಲಲ್ಲಿ ಅವನು ಕಾಣಿಸಲ್ಲ ಅಂದ. ನಾನು ಅದಕ್ಕೆ ಏನೂ ಹೇಳಿಲ್ಲ. ನಿಮಗೆ ನನ್ನನ್ನು ಹುಡುಕವಷ್ಟು ಬರನಾ ಅಂದೆ. ಚಾಟ್ ಜಿಪಿಟಿಯಲ್ಲಿ ಹಾಕು ಬೇಕಾದ್ರೆ. ನೀನು ನನ್ನ ತಾಯಿ ಬಳಿ ಕ್ಷಮೆ ಕೇಳು ಅವರು ಕ್ಷಮಿಸಿಸುತ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ.
ನಾನು ನಮ್ಮ ಊರಿಗೆ ಏನೆಲ್ಲ ಮಾಡಿದೀನಿ. ಇವರ ತರಹ ಟೀ-ಕಾಪಿ ಹೋಗಿ ಕುಡಿಯಲ್ಲ. ದಿನಗಟ್ಲೆ ಹಳ್ಳಿಯಲ್ಲಿ ಇರುತ್ತೇನೆ. ನೀವು ಒಂದು ಕಲ್ಲು ಹಾಕಿದ್ರೆ ನಾವು ಎರಡು ಕಲ್ಲು ಹಾಕ್ತೇವೆ. ಕರ್ನಾಟಕ ತಾಯಂದಿರೇ ನೀವು ಪ್ರತಾಪ್ ಕ್ಲಿಪ್ಪಿಂಗ್ ಮತ್ತು ನನ್ನ ಕ್ಲಿಪ್ಪಿಂಗ್ ನೋಡಿ. ಅವರು ಎಲ್ಲ ತಾಯಂದಿರಿಗೆ, ಒಬಿಸಿ ಹೆಣ್ಣುಮಗಳಿಗೆ ಮಾಡಿದ ಅಪಮಾನ. ಕೂಡಲೇ ನನ್ನ ತಾಯಿ ಮಂಜುಳಾಗೆ ತಕ್ಷಣ ಕ್ಷಮೆ ಕೇಳು ಪ್ರತಾಪ್ ಸಿಂಹ ಎಂದು ಆಕ್ರೋಶ ಹೊರಹಾಕಿದ್ದಾರೆ.

