ಮೋದಿ 11 ವರ್ಷದಲ್ಲಿ ಸಾಧನೆಗಳನ್ನ ಕಡಿದು ಕಟ್ಟೆ ಹಾಕಿದ್ದಾರೆ – ದೇಶದ ಭದ್ರತೆ, ರೈತರ ವಿಚಾರದಲ್ಲಿ ಕೇಂದ್ರ ಫೇಲ್: ಪ್ರದೀಪ್‌ ಈಶ್ವರ್‌

Public TV
2 Min Read
Pradeep Eshwar 1 2

– ಎನ್‌ಡಿಎ ಅಂದ್ರೆ ʻನೇಷನ್ ಡೆಸ್ಟ್ರಾಯರ್ಸ್ ಅಲಯನ್ಸ್ʼ ಅಂತ ಲೇವಡಿ

ಬೆಂಗಳೂರು: ಮೋದಿ (Modi) ಅವರು ಕಳೆದ 11 ವರ್ಷಗಳಲ್ಲಿ ಸಾಧನಗಳನ್ನ ಕಡಿದು ಕಟ್ಟೆ ಹಾಕಿದ್ದಾರೆ ಎಂದು ಶಾಸಕ ಪ್ರದೀಪ್‌ ಈಶ್ವರ್‌ (Pradeep Eshwar) ಲೇವಡಿ ಮಾಡಿದ್ದಾರೆ.

ಬೆಂಗಳೂರಿನಲ್ಲಿಂದು (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೋದಿ ಸರ್ಕಾರಕ್ಕೆ 11 ವರ್ಷ ಪೂರ್ಣಗೊಂಡ ಬಗ್ಗೆ ಮಾತನಾಡಿದರು. 11 ವರ್ಷಗಳಲ್ಲಿ ಮೋದಿಯವರು ಸಾಧನೆಗಳನ್ನು ಕಡಿದು ಕಟ್ಟೆ ಹಾಕಿದ್ದಾರೆ. ಮೋದಿ ಸರ್ಕಾರ ರೈತ ವಿರೋಧಿ ಸರ್ಕಾರ. ಟ್ರ್ಯಾಕ್ಟರ್‌ ಮೇಲೆ 12% ಜಿಎಸ್‌ಟಿ (GST), ಟೈರ್‌ಗೆ 18% ಜಿಎಸ್‌ಟಿ, ಟ್ರ್ಯಾಕ್ಟರ್‌ ಬಿಡಿ ಭಾಗಗಳ ಮೇಲೆ 28% ಜಿಎಸ್‌ಟಿ ಹಾಕ್ತಿದ್ದಾರೆ ಇದು ಅವರ ಸಾಧನೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ರಾಜ್ಯದ ತೋತಾಪುರಿ ಮಾವು ಬೆಲೆ ಕುಸಿತ – ಆಂಧ್ರ ಸಿಎಂಗೆ ಸಿದ್ದರಾಮಯ್ಯ ಪತ್ರ

PM Modi

ಎನ್‌ಡಿಎ ಅಂದ್ರೆ ನೇಷನ್ ಡೆಸ್ಟ್ರಾಯರ್ಸ್ ಅಲೈಯನ್ಸ್. ದೇಶದ ಭದ್ರತೆಯಲ್ಲಿ ಕೇಂದ್ರ ಸರ್ಕಾರ ಫೇಲ್ ಆಗಿದೆ, ರೈತರ ವಿಚಾರದಲ್ಲೂ ಫೇಲ್ ಆಗಿದೆ. ನಮ್ಮ ಕಾಂಗ್ರೆಸ್ ನಾಯಕರ ಮೇಲೆ ಇಡಿ ದಾಳಿ ಮಾಡೋದ್ರಲ್ಲಿ ಮಾತ್ರ ಕೇಂದ್ರ ಸಕ್ಸಸ್ ಆಗಿದೆ. ಇವರ ಇಡಿ ದಾಳಿಗೆ ನಾವು ಹೆದರಲ್ಲ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ – ಜೂ.15 ರವರೆಗೆ ಭಾರೀ ಮಳೆ ಮುನ್ಸೂಚನೆ

ಚಕ್ರವರ್ತಿ ಸೂಲಿಬೆಲೆ ನನ್ ಲೆವೆಲ್ ಅಲ್ಲ
ಚಕ್ರವರ್ತಿ ಸೂಲಿಬೆಲೆ ಗಡೀಪಾರಿಗೆ ಗೃಹ ಇಲಾಖೆ ತಯಾರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ನನ್ನ ಲೆವಲ್ ಅಶೋಕ್ ಮತ್ತು ವಿಜಯೇಂದ್ರ ಮಾತ್ರ. ಇವರ ಬಗ್ಗೆ ಮಾತ್ರ ನಾನು ಮಾತಾಡ್ತೇನೆ, ಇದು ನನ್ನ ಲೆವೆಲ್. ಚಕ್ರವರ್ತಿ ಸೂಲಿಬೆಲೆ ನನ್ ಲೆವೆಲ್ ಅಲ್ಲ. ಚಕ್ರವರ್ತಿ ಬಗ್ಗೆ ನಮ್ಮ ಕಾರ್ಯಕರ್ತರು ಮಾತಾಡ್ತಾರೆ. ನಾನು ಮಾತಾಡಲ್ಲ ಅವ್ರು ನನ್ನ ಲೆವೆಲ್ ನಲ್ಲಿಲ್ಲ ಎಂದು ಟಾಂಗ್‌ ಕೊಟ್ಟಿದ್ದಾರೆ.

ಇದೇ ವೇಳೆ ʻಕೈʼ ನಾಯಕರ ಮೇಲೆ ಇಡಿ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ನವ್ರು ಗೆದ್ದಿರೋದು ಬಿಜೆಪಿಗೆ ಹೊಟ್ಟೆ ಉರಿ ತಂದಿದೆ. ಹೊಟ್ಟೆ ಉರಿಗೆ ಇಡಿ ದಾಳಿ ಮಾಡಿಸಿದ್ದಾರೆ. ಬಳ್ಳಾರಿಯಲ್ಲಿ ಸೋತಿದ್ದಕ್ಕೆ ಬಿಜೆಪಿಯವ್ರು ಇಡಿ ಕರೆಸಿ ದಾಳಿ ಮಾಡಿಸಿದ್ದಾರೆ. ನಾವು ಇದಕ್ಕೆಲ್ಲ ಹೆದರಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕರಾವಳಿ ಭಾಗದಲ್ಲಿ ಮಳೆಯ ಆರ್ಭಟ – ಉತ್ತರ ಕನ್ನಡದಲ್ಲಿ ಇಂದು ಶಾಲೆಗಳಿಗೆ ರಜೆ

Share This Article