Bengaluru CityDistrictsKarnatakaLatestMain Post

‘ಕನ್ನಡ ಚಂದ್ರ’ ಪ್ರಶಸ್ತಿ ಸ್ವೀಕರಿಸಿದ ರಾಜಭವನದ ವಿಶೇಷ ಕಾರ್ಯದರ್ಶಿ ಪ್ರಭುಶಂಕರ್

Advertisements

ಬೆಂಗಳೂರು: ಕನ್ನಡ ಅಭಿವೃದ್ಧಿ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ರಾಜಭವನದ ವಿಶೇಷ ಕಾರ್ಯದರ್ಶಿ ಆರ್.ಪ್ರಭುಶಂಕರ್ ಅವರಿಗೆ ‘ಕನ್ನಡ ಚಂದ್ರ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಗರದ ಗಾಂಧಿ ಭವನದ ಬಾಪು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಕನ್ನಡ ಚಂದ್ರ’ ಪ್ರಶಸ್ತಿ ಪ್ರದಾನ ಸಮಿತಿ, ಸಪ್ನಾ ಬುಕ್ ಹೌಸ್, ಕರ್ನಾಟಕ ವಿಕಾಸ ರಂಗ ವತಿಯಿಂದ ರಾ.ನಂ.ಚಂದ್ರಶೇಖರ್-70 ‘ಕನ್ನಡ ಡಿಂಡಿಮ’ ಪರಿಷ್ಕೃತ ಆವೃತಿಯ ಲೋಕಾರ್ಪಣೆ ಹಾಗೂ ‘ಕನ್ನಡ ಚಂದ್ರ’ ಪ್ರಶಸ್ತಿ ಪ್ರದಾನ ಸಮಾರಂಭ ಮಾಡಲಾಗಿತ್ತು. ಇದನ್ನೂ ಓದಿ: ಮಕ್ಕಳ ಎದುರೇ ತಂದೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ, ಮಚ್ಚಿನಿಂದ ಕೊಚ್ಚಿದ ಪಾಪಿಗಳು 

ಈ ವೇಳೆ ರಾಜಭವನದ ವಿಶೇಷ ಕಾರ್ಯದರ್ಶಿಗಳಾದ ಆರ್.ಪ್ರಭುಶಂಕರ್ ಅವರಿಗೆ ಕಾನೂನು ಸಚಿವರಾದ ಮಾಧುಸ್ವಾಮಿ, ಚಲನಚಿತ್ರ ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಚನ್ನಬಸಪ್ಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್‌.ನಾಗಾಭರಣ ಅವರು ‘ಕನ್ನಡ ಚಂದ್ರ’ ಪ್ರಶಸ್ತಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ರಾ.ನಂ.ಚಂದ್ರಶೇಖರ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಇದನ್ನೂ ಓದಿ:  ಮಿಸೆಸ್ ಇಂಡಿಯಾ ಆದ ಚಂದನ್ ರಾಣಿ ನಿವೇದಿತಾ ಗೌಡ 

Live Tv

Leave a Reply

Your email address will not be published.

Back to top button