ನಟ ಪ್ರಭುದೇವ (Prabhudeva) ಅವರು ಸೋಮವಾರ (ಜೂನ್ 12)ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ (Ghati Subramanya Temple) ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪ್ರಭುದೇವ ನೋಡಲು ದೇವಾಲಯಕ್ಕೆ ಆಗಮಿಸಿದ್ದ ಭಕ್ತರು ಮುಗಿಬಿದ್ದಿದ್ದು, ಕೆಲ ಅಭಿಮಾನಿಗಳು ಪ್ರಭುದೇವ ಜೊತೆ ಸೆಲ್ಫಿ ಪೋಟೋ ತೆಗೆದುಕೊಂಡು ಖುಷಿಪಟ್ರು, ಬಳಿಕ ದೇವಾಲಯದ ವತಿಯಿಂದ ಪ್ರಭುದೇವ ಅವರಿಗೆ ಸನ್ಮಾನ ಮಾಡಲಾಯಿತು.
ಭಾರತದ ಮೈಕೆಲ್ ಜಾಕ್ಸನ್ ಎಂದೇ ಖ್ಯಾತಿಗಳಿಸಿರುವ ನಟ, ನಿರ್ದೇಶಕ, ಡಾನ್ಸರ್ ಪ್ರಭುದೇವ ಮತ್ತೆ ತಂದೆಯಾಗಿದ್ದಾರೆ. 50 ವರ್ಷದ ಪ್ರಭುದೇವ 3ನೇ ಬಾರಿಗೆ ತಂದೆಯಾಗಿದ್ದಾರೆ. ಪ್ರಭುದೇವ ಎರಡನೇ ಪತ್ನಿ ಹಿಮಾನಿ ಸಿಂಗ್ ಮುಂಬೈನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಪ್ರಭುದೇವ ಕುಟುಂಬಕ್ಕೆ ಮೊದಲ ಹೆಣ್ಣು ಮಗು ಆಗಮಿಸಿದ್ದು ಇಡೀ ಕುಟುಂಬ ಸಂಭ್ರಮದಲ್ಲಿದೆ. ಮೂರನೇ ಮಗು ಕಳೆದುಕೊಂಡಿದ್ದ ಪ್ರಭುದೇವ ಅವರಿಗೆ ಮಗಳು ಬೆಳಕಾಗಿ ಬಂದಿದ್ದಾಳೆ. ಇದನ್ನೂ ಓದಿ:ಬಾಲಿವುಡ್ ಚಿತ್ರಗಳ ಫ್ಲಾಪ್ ಬಳಿಕ ರಶ್ಮಿಕಾ ನಟನೆ 3ನೇ ಚಿತ್ರದ ಟೀಸರ್ ರಿಲೀಸ್
ಈ ಬಗ್ಗೆ ಸ್ವತಃ ಪ್ರಭುದೇವ ಅವರೇ ಅಧಿಕೃತಗೊಳಿಸಿದ್ದಾರೆ. ಎಸ್ ಇದು ನಿಜ. ನಾನು ಮತ್ತೆ ತಂದೆ ಆಗಿದ್ದೀನಿ 50ನೇ ವಯಸ್ಸಿಗೆ. ನನಗೆ ತುಂಬಾ ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ. ಈ ಮೂಲಕ ಪ್ರಭುದೇವ ಅವರಿಗೆ ಈಗ ಮೂವರು ಮಕ್ಕಳು.
ಪ್ರಭುದೇವ 1995ರಲ್ಲಿ ರಾಮಲತಾ ಜೊತೆ ಮದುವೆಯಾದರು. ಪ್ರಭುದೇವ ಮತ್ತು ರಾಮಲತಾ ದಂಪತಿಗೆ ಮೂವರು ಮಕ್ಕಳು. ಮೊದಲ ಮಗ ವಿಶಾಲ್, 2ನೇ ಮಗ ರಿಷಿ ರಾಘವೇಂದ್ರ ದೇವ ಮತ್ತು ಅದಿತ್ ದೇವ. ಆದರೆ ಮೊದಲ ಮಗ ದುರದೃಷ್ಟವಶಾತ್ ವಿಶಾಲ್‌ನನ್ನು ಕಳೆದುಕೊಂಡರು ಪ್ರಭುದೇವ. ಪುಟ್ಟ ಬಾಲಕ ವಿಶಾಲ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ. ವಿಶಾಲ್ ನಿಧನದ ಮುಂಚೆ ಮೊದಲು 6 ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಾವು ಬದುಕಿನ ನಡುವೆ ಹೋರಾಟ ನಡೆಸಿ 2008ರಲ್ಲಿ ವಿಶಾಲ್ ಕೊನೆಯುಸಿರೆಳೆದರು. ಇದೀಗ ಪ್ರಭುದೇವ- ಹಿಮಾನಿ ಸಿಂಗ್ ದಂಪತಿಯ ಬದುಕಿಗೆ ಮುದ್ದು ಮಗಳ ಆಗಮನವಾಗಿದೆ. ಇದೇ ಖುಷಿಯಲ್ಲಿ ಘಾಟಿ ಸುಬ್ರಹ್ಮಣ್ಯಕ್ಕೆ ಪ್ರಭುದೇವ ವಿಶೇಷ ಸಲ್ಲಿಸಿದ್ದಾರೆ.