ಟಿವಿ ಲೋಕದ Weekend With Ramesh 5 ಕಾರ್ಯಕ್ರಮದಲ್ಲಿ ಡ್ಯಾನ್ಸಿಂಗ್ ಲೆಜೆಂಡ್ ಪ್ರಭುದೇವ (Prabhudeva) ಭಾಗವಹಿಸಿದ್ದಾರೆ. ತಮ್ಮ ಜೀವನದ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಪಿಯುಸಿ ಫೇಲ್ ಆದಾಗ, ಪ್ರಭುದೇವ ಅವರ ತಂದೆ ಮೂಗೂರು ಸುಂದರ್ (Mugur Sundar) ಮನಸ್ಥಿತಿ ಹೇಗಿತ್ತು? ತಂದೆ ಮಾಡಿದ ಕಾರ್ಯದಿಂದ ತಮಗೆ ಅದ್ಯಾವ ರೀತಿ ಪ್ರಭಾವ ಬೀರಿತು ಎಂಬುದನ್ನ ಪ್ರಭುದೇವ ಹಂಚಿಕೊಂಡಿದ್ದಾರೆ.
Advertisement
ವೀಕೆಂಡ್ ಟೆಂಟ್‌ನಲ್ಲಿ ರಮ್ಯಾ ಬಳಿಕ ಪ್ರಭುದೇವ 2ನೇ ಅತಿಥಿಯಾಗಿ ಭಾಗಿಯಾಗಿದ್ದಾರೆ. ಪ್ರಭುದೇವ ಅವರ ಸ್ಪಷ್ಟ ಕನ್ನಡಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಡ್ಯಾನ್ಸ್ ಅನ್ನೇ ಕೆರಿಯರ್ ಆಗಿ ಬದಲಾಯಿಸಿಕೊಂಡು ನಟ, ನಿರ್ದೇಶಕ, ಕೊರಿಯೋಗ್ರಾಫರ್ ಬೆಳೆದಿದ್ದು ಹೇಗೆ ಎಂಬುದನ್ನ ಪ್ರಭುದೇವ ಹೇಳಿದ್ದಾರೆ. ಜೊತೆಗೆ ತಂದೆಯ ಬೆಂಬಲದ ಬಗ್ಗೆ ಅಚ್ಚರಿಯ ಮಾಹಿತಿ ತಿಳಿಸಿದ್ದಾರೆ. ಪ್ರತಿ ವ್ಯಕ್ತಿಯು ಕೂಡ ಸಾಧನೆಯ ಹಾದಿಗೆ ಕಾಲಿಡಲು ಅವರ ಕುಟುಂಬದವರು ನೀಡುವ ಬೆಂಬಲ ಬಹಳ ಮುಖ್ಯವಾಗುತ್ತದೆ. ಪ್ರಭುದೇವಗೆ ಅಂಥಹಾ ಬೆಂಬಲ ದೊರಕಿದ್ದು,ಅವರ ತಂದೆ ಮೂಗುರು ಸುಂದರ್ ಅವರಿಂದಲೇ. ಅವರು ಮಾಡಿದ್ದು ಬಹಳ ಸರಳವಾದ ಕಾರ್ಯವಷ್ಟೆ ಆದರೆ ಅದು ಪ್ರಭುದೇವ ಜೀವನದಲ್ಲಿ ಬಹಳ ಮಹತ್ವದ ಕಾರ್ಯವಾಯಿತು. ಅದರ ಬಗ್ಗೆ ವೀಕೆಂಡ್ ವಿತ್ ರಮೇಶ್‌ನಲ್ಲಿ ಪ್ರಭುದೇವ ಮಾತನಾಡಿದ್ದಾರೆ. ಇದನ್ನೂ ಓದಿ: ‘ಅಭಿರಾಮಚಂದ್ರ’ನಿಗೆ ಕರುನಾಡ ಚಕ್ರವರ್ತಿ ಶಿವಣ್ಣ ಸಾಥ್
Advertisement
Advertisement
ಡ್ಯಾನ್ಸ್‌ನಲ್ಲಿ ಚಿಕ್ಕಂದಿನಿಂದಲೂ ಅಪ್ರತಿಮರಾಗಿದ್ದ ಪ್ರಭುದೇವ ಅವರು ಓದಿನಲ್ಲಿ ಮೊದಲಿನಿಂದಲೂ ಬಹಳ ಹಿಂದೆ ಇದರಂತೆ. ಅದರಲ್ಲಿಯೂ ರಸಾಯನಶಾಸ್ತ್ರವೆಂದರೆ ಪ್ರಭುದೇವಗೆ ಭಯವೋ ಭಯ. ಹೀಗಿರುವಾಗ ಪಿಯುಸಿಯಲ್ಲಿ ಪ್ರಭುದೇವ ಫೇಲ್ ಆಗಿಬಿಡುತ್ತಾರೆ. ಅಂದು ಬಹಳ ಭಯದಲ್ಲಿದ್ದ ಪ್ರಭುದೇವ ಮನೆಗೆ ಬಂದರೆ ಅಪ್ಪ ಮನೆಯಲ್ಲಿಯೇ ಇದ್ದಾರೆ. ಫೇಲ್ ಆಗಿ ಭಯದಲ್ಲಿ ರೂಂನಲ್ಲಿ ಕೂತಿದ್ದರಂತೆ ಪ್ರಭು, ಮಗ ಫೇಲ್ ಆಗಿದ್ದಾನೆಂದು ತಿಳಿದ ಮೂಗೂರು ಸುಂದರ್ ಅವರು ನಿಧಾನಕ್ಕೆ ಪ್ರಭು ಇದ್ದ ರೂಮಿಗೆ ಬಂದಿದ್ದಾರೆ. ಏನಾಯ್ತು ಎಂದು ಕೇಳಿದಾಗ ಫೇಲ್ ಆಗಿದ್ದೇನೆ ಎಂದರಂತೆ. ಆಗ ಮೂಗುರು ಸುಂದರ್ ಅವರು ಪ್ರಭುದೇವ ಬೆನ್ನನ್ನು ಎರಡು ಬಾರಿ ಮೆತ್ತಗೆ ತಟ್ಟಿ, ಪರವಾಗಿಲ್ಲ ನಿನಗೆ ಏನು ಇಷ್ಟವಾಗುತ್ತದೆಯೋ ಅದನ್ನು ಮಾಡು ಎಂದರಂತೆ.
Advertisement
ಆ ಕ್ಷಣ ಪ್ರಭುದೇವಗೆ ಅಳು ಬಂದುಬಿಟ್ಟಿತಂತೆ, ಆದರೆ ಅಪ್ಪ ಅಂದು ಬೆನ್ನ ಮೇಲೆ ಕೊಟ್ಟ ಆ ಸಣ್ಣ ಏಟು ನನ್ನನ್ನು ಬದಲಾಯಿಸಿತು ಎಂದಿದ್ದಾರೆ ಪ್ರಭುದೇವ. ಅದಾದ ಬಳಿಕ ನಾನು ಬದಲಾಗಿಬಿಟ್ಟೆ, ಅಪ್ಪ ಇಟ್ಟ ವಿಶ್ವಾಸವನ್ನು ಉಳಿಸಿಕೊಳ್ಳಲೇ ಬೇಕು ಎಂಬ ಹಠಕ್ಕೆ ಬಿದ್ದೆ ಎಂದು ನೆನಪಿಸಿಕೊಂಡಿದ್ದಾರೆ. ಅಂದು ಅಪ್ಪ ಬೆನ್ನು ತಟ್ಟಿದ್ದರಿಂದಲೇ ನಾನು ಇಂದಿನ ಪ್ರಭುದೇವ ಆಗಲು ಸಾಧ್ಯವಾಗಿದ್ದು ಎಂದಿದ್ದಾರೆ ಪ್ರಭು.