ಕೋಲಾರದಲ್ಲಿ ಆಸ್ತಿ ಖರೀದಿ ಮಾಡಿದ ಬಹುಭಾಷಾ ನಟ ಪ್ರಭುದೇವ

Public TV
1 Min Read
prabhudeva

ಹುಭಾಷಾ ನಟ ಪ್ರಭುದೇವ (Actor Prabhudeva) ಅವರು ಚಿನ್ನದ ಗಣಿ ನಾಡಿನಲ್ಲಿ ಆಸ್ತಿ ಖರೀದಿ ಮಾಡಿದ್ದಾರೆ. ಈ ವಿಚಾರವಾಗಿ ಕೋಲಾರಕ್ಕೆ ಆಗಮಿಸಿದ ನಟ ಪ್ರಭುದೇವ ಇಂದು (ಮಾ.21) ಮಾಸ್ಕ್ ಹಾಗೂ ಕ್ಯಾಪ್ ಧರಿಸಿ ಬಂದು ಅಚ್ಚರಿ ಮೂಡಿಸಿದ್ದಾರೆ. ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಸಬ್ ರಿಜಿಸ್ಟ್ರಾರ್ ಕಚೇರಿಗೆ ಸಿಂಪಲ್ ಆಗಿ ಬಂದ ನಟ ಪ್ರಭುದೇವ ಕಂಡ ಅಭಿಮಾನಿಗಳು ಕೆಲಕಾಲ ದಂಗಾಗಿದ್ದಾರೆ.

prabhudeva 1

ಯಾರಿಗೂ ತಿಳಿಯದಂತೆ ಸಬ್ ರಿಜಿಸ್ಟ್ರಾರ್ ‌ಕಚೇರಿಗೆ ಆಗಮಿಸಿದ ಪ್ರಭುದೇವ ಸಹಿ ಮಾಡಿ, ಫೋಟೋ ಕೊಟ್ಟು ತೆರಳಿದ್ದಾರೆ. ತಾಲ್ಲೂಕು ಕಚೇರಿ ಎದುರು ಕಾರ್‌ನಲ್ಲಿ ಇಳಿದ ಪ್ರಭುದೇವ ಮಾಸ್ಕ್ ಹಾಗೂ ಕ್ಯಾಪ್ ಧರಿಸಿ ಬಂದು ಅಚ್ಚರಿ ಮೂಡಿಸಿದ್ದರು. ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ಫೋಟೊ ಕೊಟ್ಟು, ಸಹಿ ಮಾಡಿ ತೆರಳಿದ್ದಾರೆ.

FotoJet 8

ಇನ್ನೂ ಪ್ರಭುದೇವ (Prabhudeva) ಬರೋದರ ಕುರಿತು ಮೊದಲೇ ಅಧಿಕಾರಿಗಳಿಗೆ ಗೌಪ್ಯತೆ ಕಾಪಾಡಿಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ಆದರೆ ನಟ ಬರೋದನ್ನು ಕಾದು ಕುಳಿತಿದ್ದ ಕೆಲ ಅಭಿಮಾನಿಗಳು ಅವರ ಫೋಟೋ ತೆಗೆದುಕೊಂಡು ಖುಷಿಪಟ್ಟಿದ್ದಾರೆ. ಇನ್ನೂ ಬಂಗಾರಪೇಟೆ ತಾಲ್ಲೂಕಿನ ಹಂಚಾಳ ಬಳಿ ಇರುವ ಜಿಯೋನಿ ಗಾಲ್ಫ್ ಕೋರ್ಸ್‌ನಲ್ಲಿ ದುಬಾರಿ ಬೆಲೆಯ ಐಷಾರಾಮಿ ವಿಲ್ಲಾ ಖರೀದಿ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನೂ ಓದಿ:ಮೊದಲ ಗರ್ಲ್‌ಫ್ರೆಂಡ್‌ ಬಗ್ಗೆ ರಿವೀಲ್ ಮಾಡಿದ ಟೈಗರ್ ಶ್ರಾಫ್

ನಟ ಪ್ರಭುದೇವ ಅವರು ಕನ್ನಡ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಶಿವಣ್ಣ- ಪ್ರಭುದೇವ ನಟನೆಯ ‘ಕರಟಕ ದಮನಕ’ ರಿಲೀಸ್ ಆಗಿತ್ತು. ಅಭಿಮಾನಿಗಳ ಮೆಚ್ಚುಗೆ ಪಡೆದಿತ್ತು.

Share This Article