– ಯುವತಿ ದೂರಿನ ಹಿಂದೆ ಖೂಬಾ ಕೈವಾಡವಿದೆ ಎಂದ ಬಿಜೆಪಿ ಶಾಸಕ
ಬೀದರ್: ನನ್ನನ್ನು ಮುಗಿಸಬೇಕು ಎಂದು ಭಗವಂತ್ ಖೂಬಾ (Bhagwanth Khuba) ಪಿತೂರಿ ಮಾಡುತ್ತಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ್ ಖೂಬಾ ವಿರುದ್ಧ ಮಾಜಿ ಸಚಿವ ಪ್ರಭು ಚೌಹಾಣ್ (Prabhu Chavan) ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಇತ್ಯರ್ಥವಾಗಿದ್ದರೂ ರಾಜಕೀಯ ಷಡ್ಯಂತ್ರದಿಂದಾಗಿ ಇದನ್ನು ದೊಡ್ಡದು ಮಾಡಲಾಗುತ್ತಿದೆ. ಖೂಬಾರನ್ನು ನಾನು ಸಾಯೋತನಕ ಬಿಡಲ್ಲ ಎಂದು ಶಪಥ ಮಾಡಿದ್ದಾರೆ. ಇದನ್ನೂ ಓದಿ: ಮದ್ವೆಯಾಗ್ತೀನಿ ಅಂತ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡ ಆರೋಪ – ಮಾಜಿ ಸಚಿವ ಪ್ರಭು ಚೌಹಾಣ್ ಪುತ್ರನ ವಿರುದ್ಧ ದೂರು
ಈ ಪ್ರಕರಣದ ಹಿಂದೆ ಭಗವಂತ್ ಖೂಬಾ ಕೈಯಿದ್ದು, ಈ ಟೀಂ ನಾಯಕರು ಭಗವಂತ್ ಖೂಬಾ. ಹುಡುಗಿ ಬಗ್ಗೆ ಏನು ಇಲ್ಲಾ ಸಮಸ್ಯೆ ಇಲ್ಲಾ. ಇದು ನಮ್ಮ ವಿರುದ್ಧ ಮಾಡಿರುವ ಕೆಲಸ ಎಂದು ಖೂಬಾ ಫೋಟೊ ತೋರಿಸಿ ಚೌಹಾಣ್ ಕಿಡಿಕಾರಿದ್ದಾರೆ.
2013 ಸೇರಿದಂತೆ ಕೆಲವು ಬಾರಿ ಸೋಲಿಸಲು ಪ್ರಯತ್ನ ಮಾಡಿದ್ದಾರೆ. ಮಾಜಿ ಕೇಂದ್ರ ಸಚಿವರಿಂದ ದೋಖಾ ಆಗಿದ್ದು, ಅವರು ಮುಂದೆ ಬರಲ್ಲಾ. ಹಿಂದೆ ಪಿತೂರಿ ಮಾಡತ್ತಾರೆ. ಇದರಲ್ಲಿ ನಮ್ಮ ಮಗಳೂ ಇದ್ದಾಳೆ. ಆದರೆ, ಅವರಿಗೆ ಆಮಿಷೆ ತೋರಿಸಿದ್ದಾರಾ ಏನು ಗೊತ್ತಿಲ್ಲ. ನೂರಕ್ಕೆ ನೂರು ನಾನು ಸಾಯೋತನಕ ಈ ಟೀಂನ ಬಿಡಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಬೀದರ್‌ನ ಐತಿಹಾಸಿಕ ಗುರುದ್ವಾರಕ್ಕೆ ಬಾಂಬ್ ಬೆದರಿಕೆ
ಕಾನೂನು ಕ್ರಮ ಮಾಡಿಸುತ್ತೇನೆ. ಇದು ಬರೀ ಟ್ರೈಲರ್ ಅಷ್ಟೆ. ಪಿಕ್ಚರ್ ಬಾಕಿ ಇದೆ ಎಂದು ಖೂಬಾ ವಿರುದ್ಧ ಬಿಜೆಪಿ ಶಾಸಕ ಗುಡುಗಿದ್ದಾರೆ.