ಬೀದರ್: ಮಹಾ ಮಳೆ, ಧನ್ನೆಗಾಂವ್ ಹಾಗೂ ಕಾರಂಜಾ ಜಲಾಶಯದಿಂದ ಮಾಂಜ್ರಾನದಿಗೆ ಅಪಾರ ಪ್ರಮಾಣದ ನೀರು ಬಿಟ್ಟ ಪರಿಣಾಮ ಗಡಿ ಜಿಲ್ಲೆ ಬೀದರ್ ಅತಿವೃಷ್ಠಿಗೆ ನಲುಗಿ ಹೋಗಿದೆ. ಬೆಳೆಹಾನಿಯಾದ ಸ್ಥಳಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಬೆಳೆ ವಿಕ್ಷಣೆ ಮಾಡಿದ್ದಾರೆ.
ಬೀದರ್ ತಾಲೂಕಿನ ನೇಮತಾಬಾದ್, ಅಲ್ಲೇಪೂರೆ ಹಾಗೂ ಔರಾದ್ ತಾಲೂಕಿನ ಕೌಠಾ ಬಳಿಯ ಮಾಂಜ್ರಾನದಿಗೆ ಭೇಟಿ ನೀಡಿದ್ದರು. ಸಚಿವರು ಬೆಳೆಹಾನಿಯಾದ ಸ್ಥಳದಲ್ಲಿ ಕೇವಲ 10 ನಿಮಿಷಗಳ ಕಾಲ ವೀಕ್ಷಣೆ ಮಾಡಿ ಸ್ಥಳದಲ್ಲಿ ಕ್ಯಾಮೆರಾಗೆ ಪೋಸು ಕೋಡುತ್ತಾ ಕಾಟಾಚಾರಕ್ಕೆ ಬೆಳೆ ವೀಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಜೆಡಿಎಸ್ ತೋಟದ ಮನೆಗೆ ಕರೆದೊಯ್ದು ಸಂಘಟನೆ ಮಾಡಬೇಕು: ಆರಗ ಜ್ಞಾನೇಂದ್ರ
ಇತ್ತಿಚಿಗೆ ಸುರಿದ ಭಾರಿ ಮಳೆಯಿಂದಾಗಿ ಹಾನಿಗೊಳಗಾದ ಬೀದರ ತಾಲೂಕಿನ ನೆಮತಬಾದ್, ಅಲ್ಲಾಪುರ, ಔರಾದ ತಾಲೂಕಿನ ಕೌಠಾ ಸೇತುವೆ, ಭಾಲ್ಕಿ ತಾಲೂಕಿನ ಡೋಣಗಾಪುರ, ಆಳಂದಿ ಹಾಗೂ ಕಮಲನಗರ ತಾಲ್ಲೂಕಿನ ಸಂಗಮ, ಸಾವಳಿ ಗ್ರಾಮಗಳಿಗೆ ತೆರಳಿ ರೈತರ ಹೊಲಗಳಲ್ಲಿ ನೀರು ನಿಂತು ಹಾನಿಗೊಳಗಾದ ಬೆಳೆಯನ್ನು ವೀಕ್ಷಿಸಿ, (1/2) pic.twitter.com/vi6qK4JAod
— Prabhu Bhamla Chavan (@PrabhuChavanBJP) October 1, 2021
ಈ ವೇಳೆ ಇಷ್ಟೋದು ಬೆಳೆಹಾನಿಯಾಗಿದ್ದರು ಇನ್ನೂ ಅಧಿಕಾರಿಗಳು ಸ್ಥಳಕ್ಕೆ ಬರುತ್ತಿಲ್ಲಾ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್‍ಗೆ ರೈತರು ತರಾಟೆ ತೆಗೆದುಕೊಂಡರು. ಜಿಲ್ಲಾಧಿಕಾರಿ ರಾಮಚಂದ್ರನ್ ಆರ್,ಕೃಷಿ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು.