-ಮುಖ್ಯಮಂತ್ರಿಯವರ ಬಾಯಿಗುಣ ಸರಿಯಿದೆ
-ಪ್ರಾಣಿ ಸಹಾಯವಾಣಿ ಕೇಂದ್ರ ಆರಂಭ
ಹಾವೇರಿ: ನಮ್ಮ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದಮೇಲೆ ಕೋವಿಡ್ ಕಡಿಮೆ ಆಗುತ್ತಿದೆ. ನಮ್ಮ ಮುಖ್ಯಮಂತ್ರಿಯವರ ಬಾಯಿಗುಣ ಸರಿಯಿದೆ ಎಂದು ಹಾವೇರಿಯಲ್ಲಿ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ದೇಶದ ಇತಿಹಾಸದಲ್ಲಿಯೇ ನಮ್ಮ ರಾಜ್ಯದಲ್ಲಿ ಮೊದಲು ಪ್ರಾಣಿ ಸಹಾಯವಾಣಿ ಕೇಂದ್ರ ಆರಂಭ ಮಾಡಿದ್ದೇವೆ. ನಾನು ಮಂತ್ರಿಯಾದ್ಮೇಲೆ ಪ್ರಾಣಿ ಕಲ್ಯಾಣ ಮಂಡಳಿ ರಚನೆ ಮಾಡಿದ್ದೇನೆ. ಪ್ರಾಣಿಗಳ ರಕ್ಷಣೆ ಬಗ್ಗೆ ಕಲ್ಯಾಣ ಮಂಡಳಿಯವರು ಕೆಲಸ ಮಾಡುತ್ತಿದ್ದಾರೆ. ಪಶು ಸಂಜೀವಿನಿ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದ್ದು, ರೈತರ ಮನೆ ಬಾಗಿಲಿಗೆ ಹೋಗುತ್ತದೆ. ರಾಜ್ಯದ ಇತಿಹಾಸದಲ್ಲಿ ಈ ಯೋಜನೆ ಆರಂಭ ಮಾಡಿದ್ದೇನೆ. ಶೀಘ್ರದಲ್ಲಿ ಪ್ರತಿ ಜಿಲ್ಲೆಗೆ ಅಂಬ್ಯುಲೆನ್ಸ್ ಕೊಡುತ್ತೇವೆ. ಕೋವಿಡ್ ಕಾರಣಕ್ಕೆ ಅಂಬ್ಯುಲೆನ್ಸ್ ನೀಡೋದು ವಿಳಂಬ ಆಗಿದೆ ಎಂದರು.
Advertisement
Advertisement
ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ಮಾಡಲಾಗಿದೆ. ಗೋಹತ್ಯೆ ನಿಷೇಧದ ಬಗ್ಗೆ ಇಲಾಖೆ ಅಧಿಕಾರಿಗಳು ಗ್ರಾಮ ಸಭೆಗಳನ್ನ ಮಾಡಬೇಕು. ಗೋಮಾತಾ ಕಸಾಯಿ ಖಾನೆಗೆ ಹೋಗೋದು ತಡೆಯಲು ಕಾನೂನು ತರಲಾಗಿದೆ. ಈಗ ಗೋಹತ್ಯೆ ನಿಷೇಧ ಕಾನೂನು ಬಿಗಿಯಾಗಿದೆ. ಕಸಾಯಿ ಖಾನೆ ಬಂದ್ ಆಗಬೇಕು. ಬಕ್ರೀದ್ ಸಮಯದಲ್ಲಿ ಎಲ್ಲ ಜಿಲ್ಲೆಗಳ ಎಸ್‍ಪಿಗಳ ಜೊತೆ ಚರ್ಚೆ ಮಾಡಿ 6ರಿಂದ 7ಸಾವಿರ ಜಾನುವಾರುಗಳ ರಕ್ಷಣೆ ಮಾಡಿದ್ದೇವೆ. ಪೊಲೀಸರ ಜೊತೆಗೆ ಗಡಿಗಳಲ್ಲಿ ನಮ್ಮ ವೈದ್ಯರನ್ನ ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾರಿಗೆ ಮೂತ್ರ ಮಾಡಿದ ನಾಯಿ- ಕಾರ್ ಮಾಲೀಕನಿಗೆ ಬಿತ್ತು ಗೂಸಾ
Advertisement
Advertisement
ಮೊದಲು ಸಿಎಂ ಜಿಲ್ಲೆಯಲ್ಲಿ ಗೋಶಾಲೆ ಆರಂಭ ಮಾಡುತ್ತೇವೆ. ಪ್ರತಿ ಜಿಲ್ಲೆಗೊಂದು ಗೋಶಾಲೆ ನಮ್ಮ ಅಜೆಂಡ ಆಗಿದೆ. ಪ್ರತಿ ಜಿಲ್ಲೆಗೆ 50ರಿಂದ 100ಎಕರೆ ಜಾಗದಲ್ಲಿ ಮಾದರಿ ಗೋಶಾಲೆಗಳ ನಿರ್ಮಾಣ ಮಾಡುತ್ತೆವೆ. ಒಂದೇ ತಿಂಗಳಲ್ಲಿ ಹತ್ತು ಸಾವಿರ ಕರೆಗಳು ಬಂದಿವೆ. ನಮ್ಮ ಸರ್ಕಾರ ಬಂದ ಮೇಲೆ ಪ್ರವಾಹ, ಕೋವಿಡ್ ಸಂಕಷ್ಟ ಬರುತ್ತಿದೆ. ನಮ್ಮ ಜನಪ್ರಿಯ ಮುಖ್ಯಮಂತ್ರಿ ಆದ್ಮೇಲೆ ಕೋವಿಡ್ ಕಡಿಮೆ ಆಗುತ್ತಿದೆ. ನಮ್ಮ ಮುಖ್ಯಮಂತ್ರಿಯವರ ಬಾಯಿಗುಣ ಸರಿಯಿದೆ. ಸ್ವಲ್ಪ ಕೋವಿಡ್ ಕಡಿಮೆ ಆಗುತ್ತಾ ಇದೆ. ನಮ್ಮ ಬಸವರಾಜ ಬೊಮ್ಮಾಯಿ ಅವರು ತುಂಬ ಜಾಣರಿದ್ದಾರೆ ಅಧ್ಯಯನ ಮಾಡ್ತಾರೆ. ಮುಂದಿನ ದಿನಗಳು ಒಳ್ಳೆಯದು ಬರುತ್ತೆ. ನಮ್ಮ ರಾಜ್ಯ ಕೊರೊನಾ ಮುಕ್ತ ಆಗಬೇಕು ಎಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡ್ತೇನೆ ಎಂದು ಹೇಳಿದ್ದಾರೆ.