ಜಗತ್ತಿನಾದ್ಯಂತ ಸಲಾರ್ (Salaar) ಸಿನಿಮಾ ತನ್ನ ಯಶಸ್ಸಿನ ಯಶೋಗಾಥೆಯನ್ನು ಮುಂದುವರೆಸಿದೆ. ಆರು ದಿನಕ್ಕೆ ಅಂದಾಜು ಐನೂರು ಕೋಟಿ ಕಲೆಕ್ಷನ್ ಮಾಡಿದೆ ಎಂದು ಸಿನಿ ಪಂಡಿತರ ಲೆಕ್ಕಾಚಾರ. ಒಂದು ಕಡೆದ ದಕ್ಷಿಣದ ಈ ಸಿನಿಮಾ ಜಗತ್ತನ್ನೇ ಗೆಲ್ಲಲು ಹೊರಟಿದ್ದರೆ, ಮತ್ತೊಂದು ಹಿಂದಿ ಸಿನಿಮಾ ಎನಿಮಲ್ ಕೂಡ ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡಿದೆ. ಹೀಗಾಗಿ ಪ್ರಭಾಸ್ (Prabhas) ಮೇಲೆ ಒತ್ತಡ ಹೆಚ್ಚಾಗಿದೆ.
ಸಲಾರ್ ಭಾರೀ ಗೆಲುವಿನ ನಂತರ ಸಲಾರ್ 2 ಬಗ್ಗೆ ಈಗಾಗಲೇ ಅಭಿಮಾನಿಗಳು ಅಪ್ ಡೇಟ್ ಕೇಳುತ್ತಿದ್ದಾರೆ. ಆದರೆ, ಸಲಾರ್ ಮಧ್ಯಯೂ ಪ್ರಭಾಸ್ ಅನಿಮಲ್ ಸಿನಿಮಾದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ (Sandeep Reddy) ಅವರಿಗೆ ಡೇಟ್ ಕೊಟ್ಟಿದ್ದಾರೆ. ಈ ಚಿತ್ರಕ್ಕೆ ಸ್ಪಿರಿಟ್ (Spirit) ಎಂದು ಹೆಸರಿಡಲಾಗಿದೆ. ಒಂದು ಕಡೆ ಯಶಸ್ಸಿನ ಪ್ರಶಾಂತ್ ನೀಲ್ (Prashant Neel). ಮತ್ತೊಂದು ಕಡೆ ಎನಿಮಲ್ ಗೆಲ್ಲಿಸಿದ ಸಂದೀಪ್ ರೆಡ್ಡಿ. ಪ್ರಭಾಸ್ ಡೇಟ್ ಕೊಡೋದು ಯಾರಿಗೆ ಅನ್ನುವ ಚರ್ಚೆ ಕೂಡ ನಡೆದಿದೆ.
ಈ ನಡುವೆ ಸಂದೀಪ್ ರೆಡ್ಡಿ ತಮ್ಮ ಸ್ಪಿರಿಟ್ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಹೊಸ ಅಪ್ ಡೇಟ್ ನೀಡಿದ್ದಾರೆ. ತಮ್ಮ ಸಿನಿಮಾದಲ್ಲಿ ಪ್ರಭಾಸ್ ಪೊಲೀಸ್ ಅಧಿಕಾರಿಯ ಪಾತ್ರ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಹಾಗಾಗಿ ಪೊಲೀಸ್ ವೇಷದಲ್ಲಿ ತಮ್ಮ ನೆಚ್ಚಿನ ನಟನ ಪಾತ್ರವನ್ನು ನೋಡಲು ಪ್ರಭಾಸ್ ಅಭಿಮಾನಿ ತುದಿಗಾಲಲ್ಲಿ ನಿಂತಿದ್ದಾರೆ.
ಈ ವರ್ಷದ ಗೆಲುವಿನ ಸಿನಿಮಾಗಳಲ್ಲಿ ಅನಿಮಲ್ ಮತ್ತು ಸಲಾರ್ ಸಿನಿಮಾ ಸೇರಿವೆ. ಎರಡೂ ಸಿನಿಮಾಗಳು ಭರ್ಜರಿ ಗೆಲುವನ್ನೇ ಸಾಧಿಸಿವೆ. ಹೀಗಾಗಿ ಪ್ರಭಾಸ್ ಯಾರಿಗೆ ತಮ್ಮ ಮುಂದಿನ ಡೇಟ್ಸ್ ಕೊಡ್ತಾರೆ ಎನ್ನುವ ಕುತೂಹಲ ಮೂಡಿದೆ. ಮುಂದಿನ ದಿನಗಳಲ್ಲಿ ಈ ಎಲ್ಲದಕ್ಕೂ ಉತ್ತರ ಸಿಗಬಹುದು.