ಮುಂಬೈ: ದೇಶಾದ್ಯಂತ ಹವಾ ಸೃಷ್ಟಿಸಿದ್ದ `ಬಾಹುಬಲಿ’ ಚಿತ್ರದ ಬಳಿಕ ನಾಯಕ ನಟ ಪ್ರಭಾಸ್ ಮದುವೆಯ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ. ಈ ಮಧ್ಯೆ ಪ್ರಭಾಸ್ ಮನೆಯವರು ಸಾಕಷ್ಟು ಪ್ರಪೋಸಲ್‍ಗಳನ್ನ ಮುಂದಿಟ್ಟಿದ್ದು, ಪ್ರಭಾಸ್ ಯಾವುದಕ್ಕೂ ಇನ್ನೂ ಸಮ್ಮತಿ ನೀಡಿಲ್ಲ ಅಂತ ಅಂಕಲ್ ಕೃಷ್ಣಮ್ ರಾಜು ತಿಳಿಸಿದ್ದಾರೆ. ಇದನ್ನೂ ಓದಿ: ಮೆಗಾಸ್ಟಾರ್ ಚಿರಂಜೀವಿ ಅಳಿಯನಾಗ್ತಾರ ಪ್ರಭಾಸ್?
Advertisement
ಬಾಹುಬಲಿ ಚಿತ್ರ ಬಿಡುಗಡೆಗೊಂಡ ಬಳಿಕ ಪ್ರಭಾಸ್ ಮತ್ತು ಅನುಷ್ಕಾ ಮದುವೆಯಾಗುತ್ತಾರೆ ಎಂದು ಇತ್ತೀಚಿನವೆರೆಗೆ ಸುದ್ದಿಗಳು ಹರಿದಾಡುತ್ತಿದ್ದವು. ಆದ್ರೆ ಇದೀಗ ಕೆಲ ದಿನಗಳ ಹಿಂದೆಯಷ್ಟೇ ಪ್ರಭಾಸ್ ಅವರು ಮೆಗಾಸ್ಟಾರ್ ಜಿರಂಜೀವಿ ಅಳಿಯನಾಗುತ್ತಾರೆ. ಚಿರಂಜೀವಿ ಅವರ ಸಹೋದರ ನಾಗೇಂದ್ರ ಬಾಬು ಸುಪುತ್ರಿ ನಿಹಾರಿಕಾ ಅವರನ್ನು ಪ್ರಭಾಸ್ ವರಿಸಲಿದ್ದಾರೆ ಅನ್ನೋ ಗಾಸಿಪ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು. ಆದ್ರೆ ಇಷ್ಟೊಂದು ಗಾಸಿಪ್ ಗಳು ಹರಿದಾಡುತ್ತಿದ್ದರೂ ಪ್ರಭಾಸ್ ಮಾತ್ರ ಮೌನ ವಹಿಸಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: ಈ ಬಾಲಿವುಡ್ ನಟಿ ಮೇಲೆ ಪ್ರಭಾಸ್‍ಗೆ ಕ್ರಷ್ ಅಂತೆ!
Advertisement
Advertisement
ಈ ಮೊದಲು ಅಂದ್ರೆ ಬಾಹುಬಲಿ ಚಿತ್ರ ಬಿಡುಗಡೆಗೊಂಡಾಗ ಪ್ರಭಾಸ್- ಅನುಷ್ಕಾ ಮಧ್ಯೆ ಲವ್ ಇದೆ. ಹೀಗಾಗಿ ಮದುವೆಯಾಗುತ್ತಾರೆ ಅನ್ನೋ ಸುದ್ದಿ ಹರಿದಾಡಿದಾಗ ನಾವಿಬ್ಬರೂ ಒಳ್ಳೇ ಸ್ನೇಹಿತರು ಎಂದು ಹೇಳೋ ಮೂಲಕ ಪ್ರಭಾಸ್- ಅನುಷ್ಕಾ ಈ ಸುದ್ದಿಯನ್ನ ತಳ್ಳಿ ಹಾಕಿದ್ದರು. ಇದನ್ನೂ ಓದಿ: ಶ್ರದ್ಧಾ ಕಪೂರ್ ಮೊದಲು ಈ ನಟಿಯನ್ನು ಸಾಹೋ ಚಿತ್ರಕ್ಕೆ ಆಫರ್ ಮಾಡಿದ್ರು!
Advertisement
ಇತ್ತೀಚೆಗೆ ಪ್ರಭಾಸ್ ಅವರ ಅಂಕಲ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಮದುವೆಯ ಬಗ್ಗೆ ಪ್ರಭಾಸ್ ಇನ್ನೂ ಯಾರೊಂದಿಗೆ ತುಟಿ ಬಿಚ್ಚಿಲ್ಲ. ಈಗಾಗಲೇ ಕೆಲವು ಹುಡುಗಿಯರ ಫೋಟೋ ತೋರಿಸಿ ಅವನ ಆಯ್ಕೆಗೆ ಬಿಟ್ಟಿದ್ದೇವೆ. ಆದ್ರೂ ಕೂಡ ಈ ಬಗ್ಗೆ ಆತ ಯಾವುದೇ ಚಕಾರ ಎತ್ತಿಲ್ಲ ಎಂದು ಹೇಳಿದ್ದಾರೆ.
ಇತ್ತ ಕುಟುಂಬದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೆ ಪ್ರಭಾಸ್ ದುಬೈನಲ್ಲಿ ಸಾಹೋ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ಬೇಕಂತಲೇ ಈ ರೀತಿ ಮೌನ ವಹಿಸಿದ್ದಾರಾ? ಅಥವಾ ಅವರ ಮನಸ್ಸಿನಲ್ಲಿ ಬೇರೆ ಯಾರೋ ಇದ್ದು, ಅದನ್ನ ಬಹಿರಂಗಪಡಿಸಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾರಾ ಎಂಬ ಅನುಮಾನ ಕೂಡ ಮೂಡಿಸಿದೆ.
https://www.youtube.com/watch?v=s1eobFGHssU