ಹೈದರಾಬಾದ್: ಸಾಮಾನ್ಯವಾಗಿ ಎಲ್ಲರೂ ತಮ್ಮ ಆಧಾರ್ ಕಾರ್ಡ್ ಫೋಟೋವನ್ನ ಬೇರೆಯವರಿಗೆ ತೋರಿಸೋಕೆ ಹಿಂದೇಟು ಹಾಕ್ತಾರೆ. ಯಾಕಂದ್ರೆ ವ್ಯಕ್ತಿಯ ಬೇರೆ ಫೋಟೋಗಳಿಗೂ ಆಧಾರ್ ನಲ್ಲಿರುವ ಫೋಟೋಗೂ ವ್ಯತ್ಯಾಸವಿರುತ್ತದೆ. ಇನ್ನು ಸಿನಿಮಾ ನಟರು ಕ್ಯಾಮೆರಾ ಮುಂದೆ ತಮ್ಮ ರಿಚ್ ಲುಕ್ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತಾರೆ. ಆದರೆ ಇದೇ ಸಿನಿಮಾ ನಟ, ನಟಿಯರು ತಮ್ಮ ಗುರುತಿನ ಚೀಟಿಯಲ್ಲಿನ ಫೋಟೋದಲ್ಲಿ ಹೇಗೆ ಕಾಣಿಸುತ್ತಾರೆ ಎಂಬ ಕುತೂಹಲ ಹಲವು ಅಭಿಮಾನಿಗಳಲ್ಲಿ ಮೂಡಿರುತ್ತದೆ.
ಈ ಹಿಂದೆ ಹಲವು ನಟ-ನಟಿಯರ ಗುರುತಿನ ಚೀಟಿ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದರಲ್ಲಿ ಕೆಲವರು ಸಿನಿಮಾದಲ್ಲಿದ್ದಂತೆ ಚಂದವಾಗಿ ಕಂಡರೆ ಇನ್ನೂ ಕೆಲವರ ಫೋಟೋ ನೋಡಿ ಇದು ಅವರೇನಾ…? ಎಂದು ಆಶ್ಚರ್ಯಪಡುವಂತಿತ್ತು. ಪ್ರಸ್ತುತ `ಬಾಹುಬಲಿ’ ಚಿತ್ರದ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದಿರುವ ನಟ ಪ್ರಭಾಸ್ ಅವರ ಆಧಾರ್ ಕಾರ್ಡ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.
ಪ್ರಭಾಸ್ ಆಧಾರ್ ಕಾರ್ಡ್ ಫೋಟೋದಲ್ಲಿ ಸಾಮಾನ್ಯ ವ್ಯಕ್ತಿಯಂತಿದ್ದು, ವಿಭಿನ್ನವಾಗಿ ಕಾಣಿಸುತ್ತಾರೆ. ಹಾಗೇ ಬಾಲಿವುಡ್ ನಟ ರಿತೇಶ್ ದೇಶ್‍ಮುಖ್ ಅವರ ಆಧಾರ್ ಫೋಟೋ ಸಹ ಹರಿದಾಡ್ತಿದೆ. ಇಬ್ಬರು ನಟರ ಆಧಾರ್ ಕಾರ್ಡ್ ಚಿತ್ರಗಳನ್ನ ನೋಟಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ.