ಪ್ರಭಾಸ್, ದೀಪಿಕಾ ಪಡುಕೋಣೆ (Deepika Padukone) ನಟನೆಯ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಇದೇ ಜೂನ್ 27ಕ್ಕೆ ರಿಲೀಸ್ ಆಗಲಿದೆ. ಕನ್ನಡ, ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ಸಿನಿಮಾ ಮೂಡಿ ಬರಲಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಕೂಡ ಶುರುವಾಗಿದೆ. ಇದನ್ನೂ ಓದಿ:250 ಕೋಟಿ ಸಾಲದ ಸುಳಿಯಲ್ಲಿ ರಕುಲ್ ಪ್ರೀತ್ ಸಿಂಗ್ ಪತಿ
ಮಲ್ಟಿಸ್ಟಾರ್ ಸಿನಿಮಾ ಆಗಿರುವ ‘ಕಲ್ಕಿ’ ಚಿತ್ರದ ಬಗ್ಗೆ ಫ್ಯಾನ್ಸ್ ಭಾರೀ ಕ್ರೇಜ್ ಇದೆ. ಇನ್ನೂ ಬೆಳ್ಳಂಬೆಳಗ್ಗೆ ಸಾಕಷ್ಟು ಕಡೆ ಸಿನಿಮಾದ ಮೊದಲ ಪ್ರದರ್ಶನ ಆರಂಭವಾಗಿದೆ. ಚಿತ್ರಕ್ಕೆ ಭಾರೀ ಕ್ರೇಜ್ ಇದೆ ಎಂಬ ಕಾರಣಕ್ಕೆ ಟಿಕೆಟ್ ದರ ಕೂಡ ಹೆಚ್ಚಿಸಲಾಗಿದೆ. ಇದನ್ನೂ ಓದಿ:ಸರಳವಾಗಿ ಜರುಗಿತು ಝಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ ಮದುವೆ
ಇದೀಗ ಟಿಕೆಟ್ ದರವನ್ನು 400 ರೂ.ಯಿಂದ 700 ರೂ.ವರೆಗೆ ಹೆಚ್ಚಿಸಲಾಗಿದೆ. ಇನ್ನೂ ಟಿಕೆಟ್ ದರ ಹೆಚ್ಚಿಸಲಿದ್ದಾರೆ ಎನ್ನಲಾಗಿದೆ. ಬಾಹುಬಲಿ ಸಿನಿಮಾ ಬಳಿಕ ಮತ್ತೆ ಅದೇ ರೀತಿ ಕಲ್ಕಿ ಚಿತ್ರದ ಬಗ್ಗೆ ಫ್ಯಾನ್ಸ್‌ಗೆ ನಿರೀಕ್ಷೆ ಹೆಚ್ಚಿಸಿದೆ.
ಇನ್ನೂ ಚಿತ್ರದಲ್ಲಿ ಭೂತ, ವರ್ತಮಾನ ಹಾಗೂ ಭವಿಷ್ಯದ ಕಥೆಯನ್ನು ಡೈರೆಕ್ಟರ್ ನಾಗ್ ಅಶ್ವೀನ್ ಕಟ್ಟಿಕೊಟ್ಟಿದ್ದಾರೆ. ಚಿತ್ರದ ಟ್ರೈಲರ್ ಝಲಕ್‌ನಲ್ಲೇ ಆ ಸುಳಿವು ಬಿಟ್ಟು ಕೊಟ್ಟಿದ್ದಾರೆ. ಜಗತ್ತಿನ ಮೊದಲ ಪ್ರದೇಶ ಮತ್ತು ಕೊನೆಯ ಪ್ರದೇಶ ಕಾಶಿ ಎನ್ನುಮ ಮೂಲಕ ಕಲ್ಕಿ ಟ್ರೈಲರ್ ಶುರುವಾಗುತ್ತೆ. ಜಗತ್ತಿನಿಂದ ಎಲ್ಲವನ್ನೂ ಕಿತ್ತುಕೊಂಡರೆ ಎಲ್ಲವೂ ಇರುತ್ತದೆ ಎನ್ನುವ ಕುತೂಹಲಕರ ಸಂಭಾಷೆಯಣೆಯಿದೆ. 6000 ಹಿಂದಿನ ಶಕ್ತಿ ಮತ್ತೆ ಬಂದಿದೆ. ಅಳಿವು- ಉಳಿವಿಗಾಗಿ ಹೋರಾಡುವವರ ದೃಶ್ಯ ತೋರಿಸಲಾಗಿದೆ. ಭೈರವನಾಗಿ ಯುದ್ಧಕ್ಕೆ ಪ್ರಭಾಸ್ ಸಜ್ಜಾಗಿದ್ದಾರೆ. 2 ಜಗತ್ತಿನ ಹೋರಾಟವನ್ನು ಸೈನ್ಸ್ ಫಿಕ್ಷನ್ ಮೂಲಕ ಅದ್ಭುತವಾಗಿ ತೋರಿಸಿದ್ದಾರೆ.
ಯುದ್ಧದಲ್ಲಿ ಇದುವರೆಗೂ ನಾನು ಸೋತಿಲ್ಲ, ಇದನ್ನೂ ಸಹ ನಾನು ಸೋಲಲ್ಲ ಎಂದು ಖಡಕ್ ಆಗಿ ಡೈಲಾಗ್ ಹೊಡೆದಿದ್ದಾರೆ. ಪ್ರಭಾಸ್ (Prabhas) ಜೊತೆ ದೀಪಿಕಾ, ದಿಶಾ ಪಟಾನಿ ಮಿಂಚಿದ್ದಾರೆ. ಅಮಿತಾಭ್, ಕಮಲ್ ಹಾಸನ್ ಕೂಡ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ವಿಎಫ್‌ಎಕ್ಸ್ ದೃಶ್ಯಕ್ಕೆ ಫ್ಯಾನ್ಸ್ ಮನಸೋತಿದ್ದಾರೆ. ಸದ್ಯ ಜೂನ್ 27ಕ್ಕೆ ಕಲ್ಕಿ ಸಿನಿಮಾ ಥಿಯೇಟರ್‌ನಲ್ಲಿ ಅಬ್ಬರಿಸಲು ಸಿದ್ಧವಾಗಿದೆ.