ಸೆಲೆಬ್ರಿಟಿಗಳಿಗೆ ಭವಿಷ್ಯ ನುಡಿಯುವ ಜ್ಯೋತಿಷಿ ವೇಣು ಸ್ವಾಮಿ (Venu Swamy) ಅವರು ಪ್ರಭಾಸ್ (Prabhas) ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರಿಗೆ ಮದುವೆ (Marriage) ಆಗುವ ಯೋಗವಿಲ್ಲ ಎಂದು ಹೇಳಿದ್ದಾರೆ. ವೇಣು ಸ್ವಾಮಿ ಅವರ ಈ ಹೇಳಿಕೆ ಪ್ರಭಾಸ್ ಅಭಿಮಾನಿಗಳ ಕಣ್ಣು ಕೆಂಪಾಗಿಸಿದೆ. ವೇಣು ಗೋಪಾಲ್ ಅವರ ಮಾತನ್ನು ಅನೇಕ ಸೆಲೆಬ್ರಿಟಿಗಳು ನಂಬುತ್ತಾರೆ. ಹಾಗಾಗಿ ಪ್ರಭಾಸ್ ಮದುವೆ ಆಗತ್ತಾ ಅಥವಾ ಇಲ್ಲವಾ ಎನ್ನುವ ಪ್ರಶ್ನೆ ಮೂಡಿದೆ.
ಆದರೆ, ಈ ಹಿಂದೆ ಪ್ರಭಾಸ್ ಕುಟುಂಬ ಮದುವೆ ವಿಚಾರದಲ್ಲಿ ಬೇರೆಯದ್ದೇ ಮಾಹಿತಿ ನೀಡಿತ್ತು. ಪ್ರಭಾಸ್ ಕುಟುಂಬದ ವ್ಯಕ್ತಿಯೊಬ್ಬರು ಪ್ರಭಾಸ್ ಮದುವೆ ಸಿದ್ಧತೆ ನಡೆಯುತ್ತಿದೆ ಎಂಬ ವಿಚಾರವನ್ನು ಹೊರಹಾಕಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿತ್ತು.
ಮಾಧ್ಯಮ ವರದಿ ಅನ್ವಯ ಪ್ರಭಾಸ್ ಯುಎಸ್ ನಲ್ಲಿ ವಾಸಿಸುತ್ತಿರುವ ಯುವತಿಯ ಕೈ ಹಿಡಿಯಲಿದ್ದಾರೆ. ಯುವತಿಯ ಕುಟುಂಬಸ್ಥರು ಪ್ರಭಾಸ್ ಕುಟುಂಬಕ್ಕೆ ಆತ್ಮೀಯರು ಎನ್ನಲಾಗಿದೆ. ಅಮೆರಿಕದಲ್ಲಿ ಉದ್ಯಮ ನಡೆಸುತ್ತಿರುವ ವ್ಯಕ್ತಿಯೊಬ್ಬರ ಪುತ್ರಿಯಾಗಿರುವ ಯುವತಿಯನ್ನು ಮದುವೆಯಾಗಲು ಸಿದ್ಧತೆ ನಡೆಸಿದ್ದಾರೆ. ಪ್ರಭಾಸ್ ಕುಟುಂಬಸ್ಥರು ಈಗಾಗಲೇ ಮಾತುಕತೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಪ್ರಭಾಸ್ ಕುಟುಂಬಸ್ಥರು ಯಾವುದೇ ಅಧಿಕೃತ ಹೇಳಿಕೆಯನ್ನ ನೀಡಿಲ್ಲ.
ಬಾಹುಬಲಿ ಬಳಿಕ ನಟ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಮದುವೆಯಾಗುತ್ತಾರೆ ಎಂಬ ಸುದ್ದಿ ಭಾರೀ ಸದ್ದು ಮಾಡಿತ್ತು. ಆದರೆ ಈ ವರದಿಗಳನ್ನು ಇಬ್ಬರು ನಿರಾಕರಿಸಿ ನಾವು ಕೇವಲ ಸ್ನೇಹಿತರಷ್ಟೇ ಎಂದಿದ್ದರು. ಕಳೆದ ವರ್ಷ ಪ್ರಭಾಸ್ ಮದುವೆ ಕುರಿತು ಪ್ರತಿಕ್ರಿಯೆ ನೀಡಿದ್ದ ಅವರ ದೊಡ್ಡಪ್ಪ ಕೃಷ್ಣಂ ರಾಜು, ಇದು ನಮ್ಮ ಕುಟುಂಬದ ವಿಚಾರವಾಗಿದ್ದು, ಇದನ್ನು ಬಹಿರಂಗವಾಗಿ ಚರ್ಚೆ ಮಾಡಲು ಇಷ್ಟಪಡುವುದಿಲ್ಲ. ಆದರೆ ಈ ವರ್ಷ ಪ್ರಭಾಸ್ ಮದುವೆ ನಡೆಯಲಿದೆ ಎಂದಿದ್ದರು.