‘ಸಲಾರ್’ ಫ್ಲೆಕ್ಸ್ ಹಾಕುತ್ತಿದ್ದ ಪ್ರಭಾಸ್ ಅಭಿಮಾನಿ ಸಾವು

Public TV
1 Min Read
861211 prabhas 082219

ಪ್ರಭಾಸ್ (Prabhas) ನಟನೆಯ ಸಲಾರ್ (Salaar) ಸಿನಿಮಾ ಇಂದು ವಿಶ್ವದಾದ್ಯಂತ ರಿಲೀಸ್ ಆಗಿದೆ. ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬ ಸಲಾರ್ ಸಿನಿಮಾದ ಫ್ಲೆಕ್ಸ್ ಹಾಕುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತಪಟ್ಟಿರುವ ಅಭಿಮಾನಿ ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮಾವರಂ ಪಟ್ಟಣದ ಬಾಲರಾಜು (Balaraju) ಎಂದು ಗುರುತಿಸಲಾಗಿದೆ.

Salaar 4

ಧರ್ಮಾವರಂ ಪಟ್ಟಣದ ರಂಗ ಚಿತ್ರಮಂದಿರ ಮುಂದೆ ತನ್ನ ನೆಚ್ಚಿನ ನಾಯಕ ಪ್ರಭಾಸ್ ಅವರ ಫ್ಲೆಕ್ಸ್ ಹಾಕುತ್ತಿದ್ದ ಬಾಲರಾಜು ಮತ್ತು ಗೆಳೆಯರಿಗೆ ವಿದ್ಯುತ್ ಶಾಕ್ ತಗುಲಿದೆ. ಬಾಲರಾಜು ಮೃತಪಟ್ಟಿದ್ದರೆ, ಗಜೇಂದ್ರ ಎಂಬ ಯುವಕನಿಗೆ ಗಾಯಗಳಾಗಿವೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಬಾಲರಾಜುಗೆ 27 ವರ್ಷ ವಯಸ್ಸಾಗಿದ್ದು ಪತ್ನಿ ಸಿರಿಶಾ ಮತ್ತು ಇಬ್ಬರು ಪುತ್ರರನ್ನು ಅಗಲಿಸಿದ್ದಾರೆ. ಘಟನಾ ಸ್ಥಳಕ್ಕೆ ಧರ್ಮವರಂ ಪೊಲೀಸರು ಆಗಮಿಸಿ, ಪರಿಶೀಲನೆ ಮಾಡಿದ್ದಾರೆ. ಪ್ರಕರಣ ಕೂಡ ದಾಖಲಾಗಿದೆ. ನಿನ್ನೆ ರಾತ್ರಿಯೇ ಈ ಅವ‍ಘಡ ನಡೆದಿದ್ದು, ಮೃತರ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಿ ಎಂದು ಕುಟುಂಬಸ್ಥರು ಪ್ರತಿಭಟನೆ ಕೂಡ ನಡೆಸಿದ್ದಾರೆ.

Share This Article