ಟಾಲಿವುಡ್‌ನ ಹಿಟ್ ಜೋಡಿ ಪ್ರಭಾಸ್ (Prabhas) ಹಾಗೂ ಅನುಷ್ಕಾ (Anushka Shetty) ಒಟ್ಟಿಗೆ ನಾಲ್ಕೈದು ಸಿನಿಮಾ ಮಾಡಿದೆ. ಕೆಲ ವರ್ಷಗಳ ಹಿಂದೆ ಈ ಜೋಡಿ ಬಾರೀ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ಇಬ್ಬರೂ ಮದುವೆ ಆಗುತ್ತಾರೆ, ರಿಲೇಷನ್‌ಶಿಪ್‌ನಲ್ಲಿದ್ದಾರೆ ಅಂತೆಲ್ಲಾ ಇಬ್ಬರ ಮಧ್ಯೆ ಒಂದಲ್ಲಾ ಎರಡಲ್ಲಾ ನೂರಾರು ಕಥೆಗಳು ಹುಟ್ಟಿಕೊಂಡಿದ್ದವು. ಆದ್ರೆ ಇಲ್ಲಿಯವರೆಗೂ ಇಬ್ಬರೂ ಬ್ಯಾಚುಲರ್ ಆಗಿಯೇ ಉಳಿದಿದ್ದಾರೆ. ಅದರ ಜೊತೆಗೆ ಇಬ್ಬರೂ ಅಂತಹ ಸುದ್ದಿಗಳನ್ನ ನಿರಾಕರಿಸುತ್ತಲೇ ಬಂದಿದ್ದಾರೆ. ಇದೀಗ ಬರೋಬ್ಬರಿ 8 ವರ್ಷಗಳ ನಂತರ ಮತ್ತೆ ಈ ಜೋಡಿ ಒಂದಾಗುತ್ತಿದೆ.
ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಇದೀಗ 8 ವರ್ಷಗಳ ಬಳಿಕ ಒಂದಾಗುತ್ತಿರುವ ಕಾರಣ ಬೇರೆಯೇ ಇದೆ. ಹಾಗಂತ ಸಿನಿಮಾ ಮಾಡುತ್ತಿದ್ದಾರೆ ಅಂದುಕೊಳ್ಳಬೇಡಿ. ಅಥವಾ ಮದುವೆಯಾಗುತ್ತಿದ್ದಾರೆ ಅಂತಾನೂ ಭಾವಿಸಬೇಡಿ. ಅಸಲಿಗೆ ಇಬ್ಬರೂ ಸಿನಿಮಾದ ಪ್ರಚಾರಕ್ಕಾಗಿ ಸಂದರ್ಶವೊಂದರಲ್ಲಿ ಒಂದಾಗ್ತಿದ್ದಾರಂತೆ. ಹೌದು, ಬಾಹುಬಲಿ ಸಿನಿಮಾ 8 ವರ್ಷಗಳ ಬಳಿಕ ರೀ-ರಿಲೀಸ್ ಆಗ್ತಿದೆ. ಹೀಗಾಗಿ ಈ ಸಿನಿಮಾದ ಪ್ರಚಾರಕ್ಕಾಗಿ ಪ್ರಭಾಸ್, ಅನುಷ್ಕಾ ಶೆಟ್ಟಿ, ತಮನ್ನಾ, ನಿರ್ದೇಶಕ ರಾಜಮೌಳಿ ಸೇರಿದಂತೆ ಎಲ್ಲರೂ ಭಾಗಿಯಾಗಲಿದ್ದಾರಂತೆ.
ಈ ಸಂದರ್ಶನ ನಾರ್ಮಲ್ ಆಗಿರದೇ ಸಖತ್ ಕಾಮಿಡಿ ಹಾಗೂ ಫುಲ್ ಆಫ್ ಮಸ್ತಿಯಿಂದ ಕೂಡಿರಲಿದ್ದು, ಸದ್ಯದಲ್ಲಿಯೇ ಶೂಟಿಂಗ್ ನಡೆಯಲಿದೆಯಂತೆ. ಈ ಇಂಟರ್‌ವೀವ್ ಅಕ್ಟೋಬರ್ ತಿಂಗಳಿನಲ್ಲಿ ಯೂಟ್ಯೂಬ್ ಹಾಗೂ ಟಿವಿಯಲ್ಲಿ ಪ್ರಸಾರವಾಗಲಿದೆಯಂತೆ. ಅಂದಹಾಗೆ ಅಕ್ಟೋಬರ್‌ನಲ್ಲೇ ಬಾಹುಬಲಿ ಸಿನಿಮಾ ಮತ್ತೆ ತೆರೆಗೆ ಬರುತ್ತಿದೆ. ಈ ಸುದ್ದಿ ಕೇಳಿ ಪ್ರಭಾಸ್ ಹಾಗೂ ಅನುಷ್ಕಾ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.