ಸಿದ್ದರಾಮಯ್ಯ ಒಬ್ರೇ ನಾಯಕರಲ್ಲ- ಡಿಕೆಶಿ ನೇರಾನೇರ ಟಾಂಗ್

- ಕೈ ಕೋಟೆಯಲ್ಲಿ ಜೋರಾಯ್ತು ಪವರ್ ವಾರ್

Advertisements

ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆ ಶಿವಕುಮಾರ್ ನಡುವಿನ ಕೋಲ್ಡ್ ವಾರ್ ಈಗ ಬಹಿರಂಗವಾಗತೊಡಗಿದೆ. ಸ್ವತಃ ಕೆಪಿಸಿಸಿ ಅಧ್ಯಕ್ಷರೇ ಸಿದ್ದರಾಮಯ್ಯ ಅಂಡ್ ಟೀಂ ವಿರುದ್ಧ ಮಾತನಾಡಿ ನೇರವಾಗಿ ಪಂಥಾಹ್ವಾನ ನೀಡಿದ್ದಾರೆ. ಸಿದ್ದರಾಮಯ್ಯ ಆಪ್ತ ಬಣವನ್ನೂ ಕೆಣಕಿ ಸಿದ್ದರಾಮಯ್ಯ ಜೊತೆಗೆ ಅವರ ಆಪ್ತರಿಗೂ ಪಂಥಾಹ್ವಾನ ನೀಡಿದ್ದಾರೆ.

Advertisements

ರಾಜ್ಯ ಕಾಂಗ್ರೆಸ್ (Congress) ಮನೆಯೊಂದು ಮೂರು ಬಾಗಿಲು ಅನ್ನೋದು ಮತ್ತೆ ಮತ್ತೆ ಸಾಬೀತಾಗ್ತಿದೆ. ಕೈಪಾಳಯದ ಒಳಜಗಳ ಮತ್ತೆ ಬೀದಿಗೆ ಬಿದ್ದಿದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ (D K Shivakumar) ನಡುವಿನ ಪ್ರತಿಷ್ಠೆಯ ಸಮರ ಜಗಜ್ಜಾಹೀರಾಗಿದೆ. ಈ ಹಿಂದೆ ಸಿದ್ದರಾಮೋತ್ಸವದ ವೇಳೆ ಡಿಕೆಶಿ, ಸಿದ್ದರಾಮಯ್ಯ ಇಬ್ಬರೂ ಶಕ್ತಿಪ್ರದರ್ಶನ ತೋರಿಸಿದ್ರು. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಒಗ್ಗಟ್ಟಾಗಿ ಇದ್ದೇವೆ ಎಂದಿದ್ರು. ಆದರೆ ಇವತ್ತು ಡಿಕೆಶಿ ಆಡಿದ ಮಾತುಗಳು ಇವುಗಳನ್ನೆಲ್ಲ ಸುಳ್ಳಾಗಿಸಿದೆ. ಇದನ್ನೂ ಓದಿ: ಹುಟ್ಟುಹಬ್ಬದಂದು ರಜೆ ತೆಗೆದುಕೊಂಡು ಆನಂದಿಸಿ- ಮೋದಿಗೆ ಶಾರುಖ್ ಖಾನ್ ಸಲಹೆ

Advertisements

ಉಭಯ ನಾಯಕರ ನಡುವಿನ ಶೀತಲ ಸಮರ ಮುಂದುವರಿದಿದೆ. ಹೈಕಮಾಂಡ್ ಕರೆದು ಬುದ್ಧಿ ಹೇಳಿದ್ರೂ ಸರಿಹೋಗಿಲ್ಲ. ಸ್ವತಃ ಕೆಪಿಸಿಸಿ ಅಧ್ಯಕ್ಷರೇ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಅವರ ಟೀಂಗೆ ಸವಾಲೆಸೆಯುವಂತೆ ಮಾತನ್ನಾಡಿದ್ದಾರೆ. ಡಿಕೆಶಿ ಇವತ್ತಾಡಿದ ಮಾತುಗಳು ಹೀಗೆ ಇತ್ತು. ನಾನು ನಾನೇ.. ನನಗ್ಯಾರು ಸಮರಿದ್ದಾರೆ ಅನ್ನೋ ದಾಟಿಯಲ್ಲಿತ್ತು. ನಿನ್ನೆಯಷ್ಟೇ ಭಾಷಣದಲ್ಲಿ ಸಿದ್ದರಾಮೋತ್ಸವದ ಅವ್ಯವಸ್ಥೆಯ ಪ್ರಸ್ತಾಪಿಸಿದ್ದ ಡಿಕೆಶಿ, ಇವತ್ತು ವಿಪಕ್ಷ ನಾಯಕರೆಂದು ಅದು ಸಿದ್ದರಾಮಯ್ಯ ಒಬ್ಬರೇ ಅಲ್ಲ, ನಾನು, ಶಾಸಕರೆಲ್ಲರೂ ಇದ್ದೇವೆ.  ಇದನ್ನೂ ಓದಿ: ಜೋಡೋ ಯಾತ್ರೆ ಬಳಿಕ ಕೈ ಪಡೆ ಕೃಷ್ಣ ಯಾತ್ರೆ – ನಾನೇ ನೇತೃತ್ವ ವಹಿಸುತ್ತೇನೆ ಅಂದ ಡಿಕೆಶಿ

Advertisements

ಸಿದ್ದರಾಮೋತ್ಸವಕ್ಕಿಂತ ನಾನು ಆಯೋಜಿಸಿದ್ದ ಮೇಕೆದಾಟು (Mekedatu) ಪಾದಯಾತ್ರೆಯೇ ಚೆನ್ನಾಗಿತ್ತು ಅಂತ ಸಿದ್ದರಾಮಯ್ಯರನ್ನ ಕೆಣಕಿದ್ದಾರೆ. ಪಕ್ಷ ಸಂಘಟನೆಯಲ್ಲೂ ನಾನೇ ಮುಂದು. ಪಕ್ಷದ ಕಾರ್ಯಕ್ರಮ ಮಾಡುವಲ್ಲೂ ನಾನೇ ಮುಂದು ಎಂದಿದ್ದಾರೆ. ಹೀಗೆ ಕಾಂಗ್ರೆಸ್‍ಗೆ ಏನೇ ಯಶಸ್ಸು ಸಿಕ್ರೂ ಅದಕ್ಕೆ ಡಿಕೆಶಿಯೇ ಕಾರಣ. ಇಂಥದ್ದೊಂದು ಟ್ರೆಂಡ್ ಸೆಟ್ ಮಾಡೋಕೆ ಮುಂದಾದಂತಿದೆ. ರಾಜ್ಯ ಕಾಂಗ್ರೆಸ್‍ನಲ್ಲಿ ಸರ್ವವೂ ಡಿಕೆಶಿ ಮಯವಾಗಿಸಲು ಪಣ ತೊಟ್ಟಂತಿದೆ. ನನ್ನ ಸ್ಪೀಡ್‍ಗೆ ಯಾರೂ ಇಲ್ಲ. ನನ್ನ ಸ್ಪೀಡ್ ಸ್ವಲ್ಪ ಜಾಸ್ತಿನೇ ಅಂತ ಟಾಂಗ್ ಕೊಟ್ರು. ಪಕ್ಷದಲ್ಲಿ ಶಾಸಕರಿಂದ ಸರಿಯಾದ ಸಹಕಾರ ಸಿಗ್ತಿಲ್ಲ ಅಂತ ಕಿಡಿಕಾರಿದ್ರು. ಈ ಮಾತಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅದೆಲ್ಲಾ ನನಗೆ ಗೊತ್ತಿಲ್ಲ ಅಂದ್ರು.

Live Tv

Advertisements
Exit mobile version